ಉತ್ತಮ ಸಮಾಜಕ್ಕಾಗಿ ಬುದ್ಧ, ಬಸವ, ಅಂಬೇಡ್ಕರ್ ತತ್ವ ಅನಿವಾರ್ಯ
ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿಕೆ
ಸಂತೋಷಲಾಡ್ -Ëಂಡೇಶನ್
ಚಿತ್ರದುರ್ಗ: ದೇಶದ ಸಂವಿಧಾನ ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ. ಅದಕ್ಕೆ ಕೈ ಹಾಕಿದರೆ, ಅನಾಹುತ ಸೃಷ್ಟಿಯಾಗಲಿದೆ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಎಚ್ಚರಿಸಿದರು.
ಎಸ್‌ಜಿ ಕಲ್ಯಾಣ ಮಂಟಪದಲ್ಲಿ ಸಂತೋಷಲಾಡ್ -Ëಂಡೇಶನ್ ಭಾನುವಾರ ಆಯೋಜಿಸಿದ್ದ ಬುದ್ಧ, ಬಸವ, ಅಂಬೇಡ್ಕರ್ ಕುರಿತ ವಿಚಾರ ಸಂಕಿರಣದ ಸಾನ್ನಿಧ್ಯವಹಿಸಿ ಮಾತನಾಡಿದರು.
ಬಸವಣ್ಣ ಜನಿಸದೆ ಇದ್ದಿದ್ದರೆ ದೇಶ ಮತ್ತು ಕರ್ನಾಟಕದಲ್ಲಿ ಬದಲಾವಣೆ ಸಾಧ್ಯವೇ ಆಗುತ್ತಿರಲಿಲ್ಲ. ನಾಡಿನ ಸಾಂಸ್ಕೃತಿಕ ರಾಯ ಭಾರಿಯಾಗಿ ಸಮಾಜ ಪರಿವರ್ತನೆಯೊಂದಿಗೆ ರಾಜ್ಯ ಮುನ್ನೆಡೆಸುವ ಕೆಲಸ ಮಾಡಿದ ಮಹನೀಯರು ಎಂದು ಬಣ್ಣಿಸಿದರು.
ಅಂಬೇಡ್ಕರ್ ಅವರಷ್ಟು ಆಳವಾಗಿ ಓದಿ ಅಪಾರ ಜ್ಞಾನ ಸಂಪಾದಿಸಿದ ವ್ಯಕ್ತಿ ದೇಶದಲ್ಲಿ ಮತ್ತೊಬ್ಬರು ಸಿಗಲು ಸಾಧ್ಯವಿಲ್ಲ. ಮಹಾ ಗ್ರಂಥಗಳನ್ನು ಅರ್ಥೈಸಿಕೊಳ್ಳುವ ಶಕ್ತಿ ಅವರಲ್ಲಿತ್ತು. ಬೌದ್ಧ ಧರ್ಮ ಸ್ವೀಕಾರಕ್ಕೂ ಮುನ್ನ ಬಸವಣ್ಣನ ಲಿಂಗಾಯತ ಧರ್ಮದ ಕುರಿತು ಅವರಿಗೆ ಯಾರಾದರೂ ಮನವರಿಕೆ ಮಾಡಿದ್ದರೆ, ಲಿಂಗಾಯತ ಧರ್ಮ ಅನುಸರಿಸುತ್ತಿದ್ದರು ಎಂದು ಅಭಿಪ್ರಾಯಪಟ್ಟರು.
ಪ್ರಸ್ತುತ ಸಮಾಜದಲ್ಲಿ ನೈತಿಕತೆ ಇಲ್ಲವಾಗಿದೆ. ಉತ್ತಮ ಸಮಾಜ ನಿರ್ಮಾಣಕ್ಕಾಗಿ ಬುದ್ಧ, ಬಸವ, ಅಂಬೇಡ್ಕರ್ ತತ್ವ ಅನಿವಾ ರ್ಯವಾಗಿದೆ. ಹೀಗಾಗಿ ಸಂತೋಷ ಲಾಡ್ ತಮ್ಮ -Ëಂಡೇಶನ್ ಮೂಲಕ ಯುವಜನರಲ್ಲಿ ಜಾಗೃತಿ ಉಂಟು ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಮಾತನಾಡಿ, ಮುಗ್ಧರನ್ನು ಪ್ರಬುದ್ಧರನ್ನಾಗಿ, ಸಿöÃ ಸಮಾನತೆಗಾಗಿ, ಹಿಂದುಳಿದ-ಶೋಷಿತರ ಪರ ನಿರಂತರವಾಗಿ ಧ್ವನಿ ಎತ್ತಿದ ಬುದ್ಧ, ಬಸವಣ್ಣ, ಡಾ.ಬಿ.ಆರ್. ಅಂಬೇಡ್ಕರ್ ಸಮಾಜ ಪರಿವರ್ತಿಸಲು ಶ್ರಮಿಸಿದ ಮಹಾಪುರುಷರು ಎಂದು ಬಣ್ಣಿಸಿದರು.
ಅe್ಞÁನದಲ್ಲಿ ಮುಳುಗಿದ್ದ ಸಮಾಜವನ್ನು e್ಞÁನದ ಬೆಳಕಿನೊಂದಿಗೆ ಮುನ್ನಡೆಸಿದ ಕೀರ್ತಿ ಮಹನೀಯರಿಗೆ ಸಲ್ಲುತ್ತದೆ. ಈ ಮೂವರು ಚೇತನರ ವಿಚಾರಧಾರೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಇಂದಿನ ವಿದ್ಯಾರ್ಥಿಗಳು ವೈe್ಞÁನಿಕ ಹಾಗೂ ವೈಚಾರಿಕ ಮನೋಭಾವದ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಸಲಹೆ ನೀಡಿದರು.
ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ, ಸಮ ಸಮಾಜಕ್ಕಾಗಿ ೧೨ನೇ ಶತಮಾನದಲ್ಲಿ ಕಲ್ಯಾಣದಿಂದ ಆರಂಭವಾದ ರಥ ೨೧ನೇ ಶತಮಾನದಲ್ಲೂ ಇಂತಹ -Ëಂಡೇಶನ್‌ಗಳ ಮೂಲಕ ಮುನ್ನಡೆಯುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದು ಶ್ಲಾöಸಿದರು.
ಬುದ್ಧ, ಬಸವಣ್ಣನ ತತ್ವಾನುಸಾರ ಅಂಬೇಡ್ಕರ್ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳಿಸಲು ಶ್ರೇಷ್ಠ ಸಂವಿಧಾನ ನೀಡಿದರು. ಆದ್ದ ರಿಂದ ನಾವೆಲ್ಲರೂ ಸಾಮಾಜಿಕ ನ್ಯಾಯ ಮತ್ತು ಸಂವಿಧಾನದ ತತ್ವದಡಿ ಸಾಗಬೇಕಿದೆ ಎಂದು ಕಿವಿಮಾತು ಹೇಳಿದರು.
ಡಾ. ಶಾಂತವೀರ ಸ್ವಾಮೀಜಿ ಮಾತನಾಡಿ, ಬುದ್ಧ, ಬಸವಣ್ಣ, ಅಂಬೇಡ್ಕರ್ ಅವರ ಸಿದ್ಧಾಂತಗಳಿAದಲೇ ದೇಶದಲ್ಲಿ ಸಮಾನತೆ, ಸಹೋದರತೆ ಮತ್ತು ಪ್ರಗತಿ ಸಾಽಸಲು ಸಾಧ್ಯವಿದೆ ಎಂದರು.
ಸಮಾಜದಲ್ಲಿ ಗುಲಾಮಗಿರಿ ಸೃಷ್ಟಿಸಲು ಬಯಸುವ ಬಂಡವಾಳಶಾಹಿ ಮತ್ತು ಪಟ್ಟಭದ್ರ ಹಿತಾಸಕ್ತರ ಕಪಿಮುಷ್ಠಿಯಿಂದ ಹೊರ ಬರಲು, ದೇಶದ ಭವಿಷ್ಯ ಉಜ್ವಲಗೊಳಿಸಲು ಬಾಬಾ ಸಾಹೇಬರ ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಮಾರ್ಗವನ್ನು ಅನುಸರಿಸಬೇಕಿದೆ ಎಂದು ಸಲಹೆ ನೀಡಿದರು.
ಡಾ. ಸಂಜೀವ ಕುಲಕರ್ಣಿ ಮಾತನಾಡಿ, ಆರ್ಥಿಕ ಅಸಮಾನತೆ, ಧಾರ್ಮಿಕ ಅಸಹಿಷ್ಣುತೆ, ಸಿöÃಯರ ಮೇಲಿನ ಲೈಂಗಿಕ ದೌರ್ಜ ನ್ಯ ಸಮಾಜದಲ್ಲಿ ತಾಂಡವವಾಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ವೈಯಕ್ತಿಕ, ಕೌಟುಂಬಿಕ, ಸಾಮಾಜಿಕ ಹೀಗೆ ಒಂದಲ್ಲೊAದು ಹಿಂಸೆಗೆ ಮಹಿಳೆಯರು ಒಳಗಾಗುತ್ತಿದ್ದಾರೆ. ಕಾನೂನು ಇದ್ದರೂ ಸಮರ್ಪಕವಾಗಿ ಅನುಷ್ಠಾನ ಆಗದ, ಅಹಿಂಸಾ ಮಾರ್ಗ ಅನುಸರಿಸದ ಕಾರಣ ಹಿಂಸೆ, ತೊಂದರೆ ಅನುಭವಿಸುವಂತಾಗಿದೆ ಎಂದು ಬೇಸರಿಸಿದರು.
ಆಲ್ಬರ್ಟ್ ಐನ್‌ಸ್ಟೆÊನ್ ಪ್ರಕಾರ ಬುದ್ದನ ತತ್ವಾದರ್ಶಗಳು ವೈe್ಞÁನಿಕ ಮತ್ತು ಆಧ್ಯಾತ್ಮಿಕವಾಗಿಯೂ ಇವೆ. ವಿಶ್ವದ ವಿವಿಧೆಡೆ ಸಂಚರಿಸಿ ಅಷ್ಟಾಂಗ ಮಾರ್ಗ ಬೋಽಸಿದರು. ಅವುಗಳ ಅಳವಡಿಸಿಕೊಳ್ಳುವುದರಿಂದ ಮಾತ್ರ ಇಡೀ ವಿಶ್ವ ಸುಂದರವಾಗಿರಲು ಸಾಧ್ಯ ಎಂದರು.
ಡಾ. ಅನುಸೂಯ ಕಾಂಬಳೆ, ರಂಜಾನ್ ದರ್ಗಾ, ಡಾ. ವಿನಯಾ ವಕ್ಕುಂದ, ಡಾ. ಅಪ್ಪಗೆರೆ ಸೋಮಶೇಖರ್, ಡಾ.ಜೆ. ಸೋಮ ಶೇಖರ್ ಗೋಷ್ಠಿಗಳಲ್ಲಿ ವಿಷಯ ಮಂಡಿಸಿದರು.
ಡಾ. ಬಸವಪ್ರಭು ಸ್ವಾಮೀಜಿ, ಶಿವಲಿಂಗಾನAದ ಸ್ವಾಮೀಜಿ, ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ, ಬಸವ ಮಾಚಿದೇವ ಸ್ವಾಮೀ ಜಿ, ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಬಸವ ಇಮ್ಮಡಿ ಕೇತೇಶ್ವರ ಸ್ವಾಮೀಜಿ, ಡಾ. ಬಸವಕುಮಾರ ಸ್ವಾಮೀಜಿ ಸೇರಿ ಅನೇಕ ಮಠಾಽÃಶರು ಸಾನ್ನಿಧ್ಯವಹಿಸಿದ್ದರು.
ಎಡಿಸಿ ಬಿ.ಟಿ. ಕುಮಾರಸ್ವಾಮಿ, ಕೂಡಾ ಅಧ್ಯಕ್ಷ ಎಂ.ಕೆ. ತಾಜ್‌ಪೀರ್, ಬಾಬು ಜಗಜೀವನರಾಂ ಚರ್ಮ ಕೈಗಾರಿಕಾಭಿವೃದ್ಧಿ ನಿಗ ಮದ ಅಧ್ಯಕ್ಷ ಮುಂಡರಗಿ ನಾಗರಾಜ್, -Ëಂಡೇಶನ್‌ನ ಸಂಚಾಲಕಿ ಕವಿತಾರೆಡ್ಡಿ ಇತರರು ಇದ್ದರು.