

ಪ್ರಮುಖ ಮುಖ್ಯಾಂಶಗಳು
ಗುರುಭವನಕ್ಕೆ ಶಾಸಕರ ನಿಽಯಡಿ ಅನುದಾನ ಮಂಜೂರು ಮಾಡಲು ಸಿದ್ಧನಿದ್ದೇನೆ. ಹೊಸ ಕಟ್ಟಡಕ್ಕೆ ಸಚಿವರು ಕನಿಷ್ಠ ೫ ಕೋಟಿ ರೂ.ಗಳನ್ನಾದರೂ ಬಿಡುಗಡೆ ಮಾಡಿಸಬೇಕು.
ಜಿಲ್ಲಾ ಉಸ್ತುವಾರಿ ಸಚಿವರು, ಹೊಸ ಕಟ್ಟಡಕ್ಕೆ ಎಸ್ಟಿಮೇಟ್ ಸಲ್ಲಿಸುವಂತೆ ತಿಳಿಸಿದ್ದಾರೆ. ಲೋಕೋಪಯೋಗಿ ಇಲಾಖೆ ಅಽಕಾರಿಗಳಿಗೆ ೧೫ ದಿನದೊಳಗೆ ಅಂದಾಜು ವೆಚ್ಚದ ವಿವರ ಸಲ್ಲಿಸುವ ಸಾಧ್ಯತೆ ಇದೆ. ಸರ್ಕಾರದ ಅನುದಾನದೊಂದಿಗೆ ಶಿಕ್ಷಕರ, ಉಪನ್ಯಾಸಕರ ದೇಣಿಗೆ ಸಂಗ್ರಹದ ನಿರೀಕ್ಷೆ ಇದೆ.
ಈಗಿರುವ ಕಟ್ಟಡ ರಿಪೇರಿ ಸಾಧ್ಯವಿಲ್ಲ, ಹೊಸದನ್ನು ನಿರ್ಮಿಸಬೇಕಿದೆ. ಸರ್ಕಾರದ ಅನುದಾನ, ವಂತಿಗೆಯೊAದಿಗೆ ಹೊಸ ಗುರುಭ ವವನ್ನು ನಿರ್ಮಾಣ ಮಾಡಬೇಕಿದೆ.
ಅನೇಕ ವರ್ಷಗಳಿಂದ ಭವನ ಶಿಕ್ಷಕರಿಗೆ ಸಿಗದಂತಾಗಿದೆ. ಸಚಿವರು ಭರವಸೆ ಕೊಟ್ಟಿದ್ದಾರೆ. ೧೦ ಕೋಟಿ ರೂ.ಅನುದಾನದೊಂದಿಗೆ ಸುಸಜ್ಜಿತ ಕಟ್ಟಡ ನಿರ್ಮಿಸಲು ಜಿಲ್ಲಾಡಳಿತ ಮುಂದಾಗಬೇಕಿದೆ.
ಜಿಲ್ಲಾ ಗುರುಭವನವನ್ನು ಹೊಸದಾಗಿ ನಿರ್ಮಿಸಿ ಶಿಕ್ಷಕರು, ಉಪನ್ಯಾಸಕರಿಗೆ ಅನುಕೂಲ ಮಾಡಿಕೊಡಬೇಕಿದೆ. ಹೊಸ ಭವನ ನಿರ್ಮಾ ಣಕ್ಕೆ ಅನೇಕ ಮನವಿಗಳನ್ನು ಸಲ್ಲಿಸಲಾಗಿದೆ. ಈಗಾಲಾದರೂ ಜಿಲ್ಲಾಡಳಿತ ವಿಶೇಷ ನಿಗಾ ವಹಿಸಬೇಕಿದೆ.