ಮನುಷ್ಯನ ದಾಹದಿಂದ ನೈಸರ್ಗಿಕ ಸಂಪತ್ತು ಬರಿದು

ಚಿತ್ರದುರ್ಗ ತಾಲೂಕು ಲಕ್ಷಿ÷್ಮÃಸಾಗರದಲ್ಲಿ ಶನಿವಾರ ಮುರುಘಾಮಠ ಆಯೋಜಿಸಿದ್ದ ಸಸಿ ನೆಡುವ ಸಪ್ತಾಹದಲ್ಲಿ ಶಿವಲಿಂಗಾನAದ ಸ್ವಾಮೀಜಿ, ಬಸವಕುಮಾರ ಸ್ವಾಮೀಜಿ, ಶಿವಯೋಗಿ ಸಿ.ಕಳಸದ್, ಜಿ.ಗೋಪ್ಯಾನಾಯ್ಕ್, ಎಸ್.ಎನ್. ಚಂದ್ರಶೇಖರ್ ಇತರರಿದ್ದರು.
ಚಿತ್ರದುರ್ಗ ತಾಲೂಕು ಲಕ್ಷಿ÷್ಮÃಸಾಗರದಲ್ಲಿ ಶನಿವಾರ ಮುರುಘಾಮಠ ಆಯೋಜಿಸಿದ್ದ ಸಸಿ ನೆಡುವ ಸಪ್ತಾಹದಲ್ಲಿ ಶಿವಲಿಂಗಾನAದ ಸ್ವಾಮೀಜಿ, ಬಸವಕುಮಾರ ಸ್ವಾಮೀಜಿ, ಶಿವಯೋಗಿ ಸಿ.ಕಳಸದ್, ಜಿ.ಗೋಪ್ಯಾನಾಯ್ಕ್, ಎಸ್.ಎನ್. ಚಂದ್ರಶೇಖರ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಿಸಿಎಫ್ ಜಿ.ಗೋಪ್ಯಾನಾಯ್ಕ್ ಆತಂಕ
  • ಲಕ್ಷಿ÷್ಮÃಸಾಗರದಲ್ಲಿ ಸಸಿ ನೆಡುವ ಸಪ್ತಾಹಕ್ಕೆ ಚಾಲನೆ
  • ಮುರುಘಾಮಠದಿಂದ ಆಯೋಜನೆ
ಚಿತ್ರದುರ್ಗ: ಪರಿಸರದ ಒಂದು ಭಾಗವಾಗಿರುವ ಮನುಷ್ಯನ ಸಂಗ್ರಹ ದಾಹದಿಂದಾಗಿ ನೈಸರ್ಗಿಕ ಸಂಪತ್ತು ಬರಿದಾಗುತ್ತಿದೆ ಎಂದು ಡಿಸಿಎಫ್ ಜಿ. ಗೋಪ್ಯಾನಾಯ್ಕ ಆತಂಕ ವ್ಯಕ್ತಪಡಿಸಿದರು.
ತಾಲೂಕಿನ ಲಕ್ಷಿ÷್ಮÃಸಾಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಶನಿವಾರ ಮುರುಘಾಮಠ, ಎಸ್‌ಜೆಎಂ ವಿದ್ಯಾ ಪೀಠ, ಎಸ್‌ಜೆಎಂ ವಿವಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಸಸಿ ನೆಡುವ ಸಪ್ತಾಹ ಹಾಗೂ ನೀರು ಮತ್ತು ಪರಿಸರ ವಿಷಯಾವಲೋಕನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಾಣಿ, ಪಕ್ಷಿ ಮೊದಲಾದ ಜೀವರಾಶಿ ತಮ್ಮ ಆ ಹೊತ್ತಿನ ಆಹಾರವನ್ನು ಅಂದೇ ಹುಡುಕಾಡಿ ಸಂಪಾದಿಸಿದರೆ ಮನುಷ್ಯ ಇದಕ್ಕೆ ಭಿ ನ್ನ. ಅವನಲ್ಲಿ ಕೂಡಿಡುವ ಗುಣವಿದೆ. ತಲೆತಲಾಂತರದವರೆಗೆ ಸಂಪತ್ತನ್ನು ಸಂಗ್ರಹಿಸುವ ದಾಹವಿದೆ.
ಈ ಕಾರಣದಿಂದಾಗಿ ನೈಸ ರ್ಗಿಕ ಸಂಪತ್ತು ಕರಗುತ್ತಿದೆ. ಭೂಮಿ ನಿತ್ಯವೂ ಮಾಲಿನ್ಯಕ್ಕೆ ಒಳಗಾಗುತ್ತಿದೆ. ಪ್ರಕೃತಿಗೆ ಆಶ್ರಯವಾಗಿ ರುವ ಮರಗಳನ್ನು ಮನುಷ್ಯ ನಿರಂತರ ನಾಶಗೊಳಿಸುತ್ತಿದ್ದಾನೆ ಎಂದರು.
ಎಲ್ಲಿ ಶೇ.೩೦ ಕಾಡು ಇರುತ್ತದೆಯೋ ಅಲ್ಲಿ ಮನುಷ್ಯನ ಆರೋಗ್ಯ ಉತ್ತಮವಾಗಿರುತ್ತದೆ. ಪರಿಸರ ಸಂರಕ್ಷಣೆ ಮತ್ತು ಮನುಷ್ಯನ ಆರೋಗ್ಯದ ನಡುವೆ ಅವಿನಾಭಾವ ಸಂಬAಧವಿದೆ. ಶುದ್ಧ ಗಾಳಿ, ನೀರು, ಒಳ್ಳೆಯ ಆಹಾರ, ಉತ್ತಮ ಪರಿಸರದಿಂದ ಸಾಧ್ಯ ವೆಂದು ಹೇಳಿದರು.
ವಿಷಯಾವಲೋಕನ ಮಾಡಿದ ಅಂತರ್ಜಲ ತಜ್ಞ ಡಾ.ಎನ್.ಜೆ.ದೇವರಾಜರೆಡ್ಡಿ, ಮನುಷ್ಯನ ಅತಿ ಆಸೆಯಿಂದ ಭೂಮಿ ಬರಡಾಗು ತ್ತಿದೆ. ನಾವು ಉಳಿಯಬೇಕೆಂದಾದರೆ ಪರಿಸರವನ್ನು ಉಳಿಸಬೇಕಿದೆ. ನೀರು ಮತ್ತು ಮರಗಳ ಸಂರಕ್ಷಣೆಯಿAದ ಭೂಮಿ ಉಳಿಸ ಲು ಸಾಧ್ಯವಿದೆ.
ಸಕಲ ಜೀವರಾಶಿಗಳ ಉಳಿವಿಗೆ ಜಲ ಸಂರಕ್ಷಣೆ ಅತ್ಯಗತ್ಯ. ನಾವು ಈಗಾಗಲೇ ಶೇ.೮೦ರಷ್ಟು ನೀರನ್ನು ಖಾಲಿ ಮಾಡಿದ್ದೇವೆ. ಮುಂದಿನ ಪೀಳಿಗೆಗೆ ಈ ಸಂಪನ್ಮೂಲವನ್ನು ಉಳಿಸಬೇಕಾಗಿದೆ ಎಂದರು.
ಕಬೀರಾನAದಾಶ್ರಮದ ಶಿವಲಿಂಗಾನAದ ಸ್ವಾಮೀಜಿ, ಶ್ರೀಮಠದ ಆಡಳಿತ ಮಂಡಳಿ ಸದಸ್ಯ ಡಾ.ಶ್ರೀ ಬಸವಕುಮಾರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಶ್ರೀಮಠದ ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಸಿ ಕಳಸದ್, ಸದಸ್ಯ ಎಸ್.ಎನ್.ಚಂದ್ರಶೇಖರ್, ಶಾಂತವೀರ ಮುರುಘರಾ ಜೇಂದ್ರ ಸ್ವಾಮೀಜಿ, ಬಸವಮಹಾಂತ ಸ್ವಾಮೀಜಿ, ಶಿವಾನಂದ ಸ್ವಾಮೀಜಿ, ಬಸವ ಮುರುಘೇಂದ್ರ ಸ್ವಾಮೀಜಿ, ಗ್ರಾಪಂ ಮಾ ಜಿ ಸದಸ್ಯ ತಿಪ್ಪೇಸ್ವಾಮಿ, ಲಕ್ಷಿ÷್ಮÃ ಸಾಗರ ಗ್ರಾಪಂ ವ್ಯಾಪ್ತಿಯ ಗ್ರಾಮಸ್ಥರು ಇದ್ದರು. ಜಮುರಾ ಕಲಾವಿದರು ಪ್ರಾರ್ಥಿಸಿದರು. ಎಸ್.ಎಂ.ತೇಜಸ್ವಿನಿ ಸ್ವಾಗತಿಸಿ, ಬಿ.ಎಸ್.ಪೂಜಾ ನಿರೂಪಿಸಿದರು.
ನೀರು ಮೂಲಾಧಾರ
ಪರಿಸರದ ಪ್ರಮುಖ ಅಂಗವಾದ ನೀರು ಜೀವ ಸಂಕುಲದ ಉಳಿವಿಗೆ ಮೂಲ ಆಧಾರ ಎಂದು ಶಿವಲಿಂಗಾನAದ ಸ್ವಾಮೀಜಿ ಹೇಳಿದರು. ಭೂಮಿ ಮೇಲಿನ ಸಕಲ ಜೀವಿಗಳ ಅಸ್ತಿತ್ವಕ್ಕೆ, ಜೀವ ವೈವಿಧ್ಯದ ಪೋಷಣೆಗೆ ನೀರು ಬೇಕು. ಇಂದು ನಾವು ಮನುಷ್ಯರಿಗೆ ಅನ್ನ ಕೊಡಬಹುದು. ಆದರೆ ಗಿಡಗಳಿಗೆ ನೀರು ಕೊಡುವ ಕೆಲಸ ಅದಕ್ಕಿಂತ ದೊಡ್ಡದು ಎಂದು ಹೇಳಿದರು.
ತಮ್ಮ ಜವಾಬ್ದಾರಿ ಅರಿಯಲಿ
ಪರಿಸರ ದಿನದ ಅರ್ಥಪೂರ್ಣ ಆಚರಣೆ ಹಿನ್ನೆಲೆಯಲ್ಲಿ ಮಠದಿಂದ ಸಸಿ ನೆಡುವ ಸಪ್ತಾಹ ಹಮ್ಮಿಕೊಳ್ಳಲಾಗಿದೆ ಎಂದು ಡಾ.ಬಸವಕುಮಾರ ಸ್ವಾಮೀಜಿ ತಿಳಿಸಿದರು. ಈ ಕಾರ್ಯಕ್ಕೆ ವಿವಿಧ ಗ್ರಾಮಗಳ ಗ್ರಾಮಸ್ಥರು, ವಿವಿಧ ಸಮಾಜ, ಸಂಘ ಸಂಸ್ಥೆಗಳು ಕೈ ಜೋಡಿಸುತ್ತಿರುವುದು ಶ್ಲಾಘನೀಯ. ಪರಿಸರದ ಉಳಿವಿಗೆ ಪ್ರತಿಯೊಬ್ಬರು ತಮ್ಮ ಜವಾಬ್ದಾರಿಯನ್ನು ಅರಿಯಬೇಕಿದೆ ಎಂದು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net