ಚಿತ್ರದುರ್ಗ: ನಾಡಪ್ರಭು ಕೆಂಪೇಗೌಡ ರಾಷ್ಟಿçÃಯ ಪ್ರಶಸ್ತಿಗೆ ಚಿತ್ರದುರ್ಗದ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಪೀಠಾ ಧ್ಯಕ್ಷ ಡಾ. ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅವರು ಭಾಜನರಾಗಿದ್ದಾರೆ.
ಬೆಂಗಳೂರು ನಾಡಪ್ರಭು ಕೆಂಪೇಗೌಡ ಪ್ರತಿಷ್ಠಾನÀದಿಂದ ನೀಡುವ ಪ್ರಶಸ್ತಿಯನ್ನು ಕೆಂಪೇಗೌಡರ ೫೧೭ನೇ ಜಯಂತಿ ಅಂಗ ವಾಗಿ ಜೂ. ೨೭ರಂದು ಬೆಂಗಳೂರು ವಿವಿ ಸಭಾಂಗಣದಲ್ಲಿ ಉಪ ರಾಷ್ಟçಪತಿ ಸಿ.ಪಿ. ರಾಧಾಕÊಷ್ಣನ್ ಅವರು ಪ್ರದಾನ ಮಾಡಿ, ಶ್ರೀಗಳನ್ನು ಗೌರವಿಸಲಿದ್ದಾರೆ.
ಶ್ರೀಗಳ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆ, ಪರಿಸರ ಕಾಳಜಿ, ಯುವಜನ ಸಬಲೀಕರಣ, ಸಮ ಸಮಾ ಜದ ನಿರ್ಮಾಣ ಹಾಗೂ ರಾಷ್ಟಿçÃಯತೆಯ ಸೇವಾ ಕಾರ್ಯಗಳನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಿರುವುದಾಗಿ ಪ್ರತಿಷ್ಠಾ ನ ತಿಳಿಸಿದೆ.
ಪ್ರತಿಷ್ಠಾನದ ಪದಾಽಕಾರಿಗಳು ನಗರದ ಶ್ರೀಮಠದಲ್ಲಿ ಶ್ರೀಗಳನ್ನು ಭೇಟಿಯಾಗಿ, ಅಽಕೃತ ಆಹ್ವಾನ ನೀಡಿ ಸಮಾರಂಭದಲ್ಲಿ ಭಾಗವಹಿಸಿ ಪ್ರಶಸ್ತಿ ಸ್ವೀಕರಿಸುವಂತೆ ಮನವಿ ಮಾಡಿದರು.
ಕೆಂಪೇಗೌಡರ ಆದರ್ಶಗಳನ್ನು ಸಮಾಜದಲ್ಲಿ ಬೆಳೆಸುವ ಉದ್ದೇಶದಿಂದ ಪ್ರತಿ ವರ್ಷ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಗೌರವಿಸುವ ಸಂಪ್ರದಾಯವನ್ನು ಪ್ರತಿಷ್ಠಾನ ರೂಢಿಸಿಕೊಂಡು ಬರುತ್ತಿದೆ. ಈ ಸಾಲಿನಲ್ಲಿ ಬಸವ ಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅವರು ಪ್ರಶಸ್ತಿಗೆ ಭಾಜನರಾಗುತ್ತಿರುವುದು ಭಕ್ತರು ಹಾಗೂ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ ಎಂದು ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.