ಹವಾಮಾನ ವೈಪರೀತ್ಯದ ಈ ದಿನಗಳಲ್ಲಿ ಜೇನು ಸಾಕಾಣಿಕೆ, ಹೈನುಗಾರಿಕೆ, ಕುರಿ-ಮೇಕೆ ಮತ್ತು ಕೋಳಿ ಸಾಕಾಣಿಕೆಯಂತಹ ಪೂರಕ ಚಟುವಟಿಕೆಗಳು ಆದಾಯದ ಸ್ಥಿರತೆ ಕಾಯ್ದುಕೊಳ್ಳಲು ನೆರವಾಗಲಿವೆ. ಅಣಬೆ ಕೃಷಿಯನ್ನು ಆರಂಭದಲ್ಲಿ ಮನೆಯ ಸಣ್ಣ ಕೊಠಡಿಯಲ್ಲೇ ಆರಂಭಿಸಬಹುದು. ಅನುಭವ ಹಾಗೂ ಪರಿಣತಿಗಳಿಸಿದ ನಂತರ ವಾಣಿಜ್ಯ ಮಟ್ಟದಲ್ಲಿ ವಿಸ್ತರಿಸುವುದು ಸೂಕ್ತ ಎಂದು ಸಲಹೆ ನೀಡಿದರು.