ನೆಹರು ದಾಖಲೆ ಮುರಿದ ಮೋದಿ, ಕಮಲ ಪಡೆ ಸಂಭ್ರಮ

ಪ್ರಧಾನಿ ನರೇಂದ್ರ ಮೋದಿ ಅವರು ೧೨ ವರ್ಷ ನಿರಂತರ ಅಽಕಾರಾವಽ ಪೂರೈಸಿರುವ ಹಿನ್ನೆಲೆ ಬಿಜೆಪಿ ಕಾರ್ಯಕರ್ತರು ಚಿತ್ರದುರ್ಗದ  ನೀಲಕಂಠೇಶ್ವರ ದೇವಾಲಯದಲ್ಲಿ ಬುಧವಾರ ವಿಶೇಷ ಪೂಜೆ ಸಲ್ಲಿಸಿದರು. ಎಂಎಲ್‌ಸಿ ಕೆ.ಎಸ್.ನವೀನ್,.ಮಾಜಿ ಶಾಸಕ ಎಸ್.ಕೆ. ಬಸವರಾಜನ್ ಇತರರು ಇದ್ದರು.
ಪ್ರಧಾನಿ ನರೇಂದ್ರ ಮೋದಿ ಅವರು ೧೨ ವರ್ಷ ನಿರಂತರ ಅಽಕಾರಾವಽ ಪೂರೈಸಿರುವ ಹಿನ್ನೆಲೆ ಬಿಜೆಪಿ ಕಾರ್ಯಕರ್ತರು ಚಿತ್ರದುರ್ಗದ ನೀಲಕಂಠೇಶ್ವರ ದೇವಾಲಯದಲ್ಲಿ ಬುಧವಾರ ವಿಶೇಷ ಪೂಜೆ ಸಲ್ಲಿಸಿದರು. ಎಂಎಲ್‌ಸಿ ಕೆ.ಎಸ್.ನವೀನ್,.ಮಾಜಿ ಶಾಸಕ ಎಸ್.ಕೆ. ಬಸವರಾಜನ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸುದೀರ್ಘ ಅವದಿಯ ಪ್ರಧಾನಿ ಎಂಬ ಹೆಗ್ಗಳಿಕೆ
  • ಶ್ರೀ ನೀಲಕಂಠೇಶ್ವರ ದೇಗುಲದಲ್ಲಿ ಬಿಜೆಪಿಯಿಂದ ವಿಶೇಷ ಪೂಜೆ
  • ಎಂಎಲ್‌ಸಿ ಕೆ.ಎಸ್. ನವೀನ್
ಚಿತ್ರದುರ್ಗ: ಪ್ರಧಾನಿ ನರೇಂದ್ರ ಮೋದಿ ಅವರು ಯಶಸ್ವಿಯಾಗಿ ೧೨ ವರ್ಷ ಆಡಳಿತ ಪೂರ್ಣಗೊಳಿಸುವ ಮೂಲಕ ಸತತ ಅತೀ ಹೆಚ್ಚಿನ ಅವಽಗೆ ಸೇವೆ ಸಲ್ಲಿಸಿದ ಪ್ರಧಾನಿ ಎಂಬ ವಿಶೇಷ ಗೌರವಕ್ಕೆ ಪಾತ್ರರಾಗಿದ್ದಾರೆ ಎಂದು ಎಂಎಲ್‌ಸಿ ಕೆ.ಎಸ್. ನವೀನ್ ಹೇಳಿದರು.
ಮೋದಿ ಅವರು ಪ್ರಧಾನಿಯಾಗಿ ೧೨ ವರ್ಷ ಆಡಳಿತ ಪೂರೈಸಿರುವ ಹಿನ್ನೆಲೆಯಲ್ಲಿ ನಗರದ ಶ್ರೀ ನೀಲಕಂಠೇಶ್ವರ ದೇವಾಲಯ ದಲ್ಲಿ ಬುಧವಾರ ಬಿಜೆಪಿ ಕಾರ್ಯಕರ್ತರಿಂದ ವಿಶೇಷ ಪೂಜೆಯ ಬಳಿಕ ಮಾತನಾಡಿದ ಅವರು, ಪಂಡಿತ್ ಜವಾಹಲಾಲ್ ನೆಹರು ಅವರಿಗಿಂತ ಹೆಚ್ಚಿನ ಅವಽಗೆ ಪ್ರಧಾನ ಮಂತ್ರಿಯಾಗಿ ಮೋದಿ ಮುಂದುವರಿದಿದ್ದಾರೆ ಎಂದರು.
ಭಗವAತ ಮೋದಿಯವರಿಗೆ ಆರೋಗ್ಯ, ಆಯಷ್ಯ ನೀಡುವ ಮೂಲಕ ದೇಶದ ಸೇವೆಗೆ ಅವರಿಗೆ ಇನ್ನಷ್ಟು ಶಕ್ತಿಯನ್ನು ಕೊಡಲಿ. ಮೋದಿ ನೇತÊತ್ವದ ಕೇಂದ್ರ ಸರ್ಕಾರ ದೇಶದ ಅಭಿವೃದ್ಧಿ ಮತ್ತು ಜನ ಕಲ್ಯಾಣಕ್ಕೆ ಸಮರ್ಪಿತವಾಗಿದೆ. ೧೪೦ ಕೋಟಿ ಜನರ ಆಶೀರ್ವಾದ ಮತ್ತು ರಾಷ್ಟç ಪ್ರಥಮ ಎಂಬ ಭಾವನೆಯೊಂದಿಗೆ ಯುವ ಜನರು, ಮಹಿಳೆಯರು, ರೈತರು ಮತ್ತು ಬಡವರ ಸಬಲೀಕರಣಕ್ಕಾ ಗಿ ನಿರಂತರವಾಗಿ ಕೇಂದ್ರ ಶ್ರಮಿಸುತ್ತಿದೆ ಎಂದು ತಿಳಿಸಿದರು.
ಪ್ರತಿ ತಿಂಗಳು ೮೧ ಕೋಟಿಗೂ ಹೆಚ್ಚು ಜನರಿಗೆ ಉಚಿತ ಪಡಿತರ, ೪ ಕೋಟಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಮನೆಗ ಳು, ೧೦.೫ ಕೋಟಿ ಉಜ್ವಲ ಅಡುಗೆ ಅನಿಲ ಸಂಪರ್ಕ ಮತ್ತು ೧೨ ಕೋಟಿ ಶೌಚಗೃಹಗಳನ್ನು ನಿರ್ಮಿಸುವ ಮೂಲಕ ಕೋಟ್ಯಂತ ರ ಕುಟುಂಬಗಳ ಜೀವನ ಸುಗಮಗೊಳಿಸಲಾಗಿದೆ.
೩೨ ಕೋಟಿಗೂ ಹೆಚ್ಚು ಮಹಿಳೆಯರಿಗೆ ಜನಧನ್ ಖಾತೆಗಳು, ಅವರಿಗೆ ಸೇನೆಯಲ್ಲಿ ಸೇವೆ ಸಲ್ಲಿಸುವ ಅವಕಾಶ. ೩ ಕೋಟಿಗೂ ಹೆ ಚ್ಚು ಮಹಿಳೆಯರು`ಲಖಪತಿ ದೀದಿ'ಗಳಾಗಿದ್ದಾರೆ. ೯೧ ಲಕ್ಷಕ್ಕೂ ಹೆಚ್ಚು ಸ್ವಸಹಾಯ ಸಂಘಗಳ ಮೂಲಕ ೧೦ ಕೋಟಿ ಗ್ರಾಮೀಣ ಮಹಿಳೆಯ ರು ಆರ್ಥಿಕ ಸ್ವಾವಲಂಬನೆ ಸಾಽಸಿದ್ದಾರೆ ಎಂದರು.
ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಮಾತನಾಡಿ, ದೇಶದ ೨೬ ನಗರಗಳಲ್ಲಿ ೧,೧೦೦ ಕಿಲೋಮೀಟರ್‌ಗೂ ಅಽಕ ಮೆಟ್ರೋ ನೆಟ್ ವರ್ಕ್ ಅಭಿವೃದ್ಧಿಪಡಿಸಲಾಗಿದೆ.
ಸದ್ಯ ದೇಶದಲ್ಲಿ ೧೬೪ ವಂದೇ ಭಾರತ್ ರೈಲುಗಳು ಸಂಚರಿಸುತ್ತಿವೆ. ಅಟಲ್‌ಸೇತು, ಸುದರ್ಶನ್ ಸೇತು, ಚೆನಾಬ್ ರೈಲ್ವೆ ಸೇತು ವೆ, ಬೋಗಿಬೀಲ್ ಸೇತುವೆ ಮತ್ತು ಪಂಬನ್ ಕಡಲ ಸೇತುವೆಯಂಥÀ ಬÊಹತ್ ಯೋಜನೆಗಳನ್ನು ಪೂರ್ಣಗೊಳಿ ಸಲಾಗಿದೆ. ದೇಶದಲ್ಲಿದ್ದ ವಿಮಾನ ನಿಲ್ದಾಣಗಳ ಸಂಖ್ಯೆ ೭೪ರಿಂದ ೧೬೪ ಕ್ಕೆ ಏರಿಕೆಯಾಗಿದೆ.
೨ ಕೋಟಿ ಯುವಜನರಿಗೆ ಕೌಶಲ ತರಬೇತಿ ನೀಡಲಾಗಿದೆ. ಮುದ್ರಾ ಯೋಜನೆಯಡಿ ೪೦ ಲಕ್ಷ ಕೋಟಿ ರೂ. ಸಾಲ ವಿತರಿಸಲಾ ಗಿದೆ. ದೇಶದಲ್ಲಿ ೨.೨ ಲಕ್ಷಕ್ಕೂ ಹೆಚ್ಚು ಸ್ಟಾರ್ಟ್ ಅಪ್‌ಗಳು ಮತ್ತು ೧೦ ಸಾವಿರಕ್ಕೂ ಹೆಚ್ಚು ಅಟಲ್ ಟಿಂಕರಿAಗ್ ಲ್ಯಾಬ್‌ಗಳು ಹೊ ಸ ಆವಿಷ್ಕಾರ ಳಿಗೆ ದಾರಿದೀಪವಾಗಿವೆ ಎಂದರು.
ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜನ್ ಮಾತನಾಡಿದರು. ಎಚ್.ಎನ್. ಲೋಕೇಶ್, ಎ. ಮುರಳಿ, ಟಿ. ವೆಂಕಟೇಶ್‌ ಯಾದವ್, ಜಿ.ಎಚ್. ಮೋಹನ್‌ಕುಮಾರ್, ಪರಶುರಾಮ್, ಎಸ್. ಬಸವೇಶ್, ಲೀಲಾಶಶಿಧರ್, ಶೈಲಜಾರೆಡ್ಡಿ,ನಾಗರಾಜ್‌ಬೇದ್ರೆ, ನವೀನ್‌ಚಾಲುಕ್ಯ, ತಿಪ್ಪೇಸ್ವಾಮಿ, ಬಿ.ಎಸ್. ಹರೀಶ್, ಸತೀಶ್, ಮಾರುತಿ, ಮಂಜುಳಮ್ಮ, ಶಾಂತಮ್ಮ, ವೀಣಾ, ಸುಮಾ, ಯ ಶೋದಾ, ಕಮಲಮ್ಮ, ಅರುಣ, ಬಸಮ್ಮ, ದೇವಿಕಾ, ಚಂದ್ರಿಕಾ ಲೋಕನಾಥ್ ಮತ್ತಿತರ ಪಕ್ಷದ ಪ್ರಮುಖರು, ಕಾರ್ಯಕರ್ತರು ಇದ್ದರು.
ಶ್ರೀ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಪೂಜೆ
ನರೇಂದ್ರಮೋದಿ ಅವರು ೧೨ ವರ್ಷಗಳ ಕಾಲ ದೀರ್ಘ ಅವಽಗೆ ಪ್ರಧಾನಿಯಾಗಿ ಕರ‍್ಯನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ ಚಿತ್ರದು ರ್ಗ ಬಿಜೆಪಿ ಗ್ರಾಮಾಂತರ ಮಂಡಲದಿAದ ಚಿತ್ರದುರ್ಗ ತಾಲೂಕು ಜಾನುಕೊಂಡ ಶ್ರೀ ಆಂಜನೇಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಸಿಹಿ ವಿತರಿಸಲಾಯಿತು.
ಕೆ. ನಾಗರಾಜ್, ಶಿವಪ್ರಸಾದ್, ಸಿದ್ದೇಶ್, ನವೀನ್, ಶ್ರೀಧರ, ಕುಮಾರ, ನಿಂಗೇ ಶ್, ತಿಪ್ಪೇಸ್ವಾಮಿ, ರಾಮಲಿಂಗಪ್ಪ, ರವಿ, ರಘು, ಬಸವರಾಜ್, ಸಂತೋಷ್, ರಂಗಸ್ವಾಮಿ, ಅಂಜಿನಿ, ಅರ್ಚಕರಾದ ವೆಂಕಟೇಶ್, ಕೇಶವ್ ಹಾಗೂ ಗ್ರಾಮಸ್ಥರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net