ನಿಷ್ಠಾವಂತರಿಗೆ ಅಽಕಾರ ಸಿಗಲಿದೆ ಎಂಬುದಕ್ಕೆ ಮೋದಿಯೇ ಸಾಕ್ಷಿ

ಬಿಜೆಪಿಯಿಂದ ಚಿತ್ರದುರ್ಗದಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಸಂಸದ ಗೋವಿಂದ ಎಂ. ಕಾರಜೋಳ, ಡಾ. ಶಿವಯೋಗಿಸ್ವಾಮಿ, ಜಿ.ಎಚ್. ತಿಪ್ಪಾರೆಡ್ಡಿ, ಡಿ.ಎಸ್. ಅರುಣ್, ಮೇಘರಾಜ್, ಎ. ಮುರುಳಿ, ಅಂಬಿಕಾಹುಲಿನಾಯ್ಕರ್, ಬಂಗಾರು ಹನುಮಂತು, ಕೆ.ಟಿ. ಕುಮಾರಸ್ವಾಮಿ ಇತರರು ಇದ್ದರು.
ಬಿಜೆಪಿಯಿಂದ ಚಿತ್ರದುರ್ಗದಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಸಂಸದ ಗೋವಿಂದ ಎಂ. ಕಾರಜೋಳ, ಡಾ. ಶಿವಯೋಗಿಸ್ವಾಮಿ, ಜಿ.ಎಚ್. ತಿಪ್ಪಾರೆಡ್ಡಿ, ಡಿ.ಎಸ್. ಅರುಣ್, ಮೇಘರಾಜ್, ಎ. ಮುರುಳಿ, ಅಂಬಿಕಾಹುಲಿನಾಯ್ಕರ್, ಬಂಗಾರು ಹನುಮಂತು, ಕೆ.ಟಿ. ಕುಮಾರಸ್ವಾಮಿ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕಾಂಗ್ರೆಸ್ ಸರ್ಕಾರ ರಾಜ್ಯದ ಜನರ ದೌರ್ಭಾಗ್ಯ
  • ಸಂಸದ ಗೋವಿಂದ ಎಂ. ಕಾರಜೋಳ ಅಭಿಮತ
  • ಬಿಜೆಪಿ ವಿಭಾಗೀಯ ಮಟ್ಟದ ಪ್ರಶಿಕ್ಷಣ ಕಾರ್ಯಾಗಾರ
ಚಿತ್ರದುರ್ಗ: ಪಂಡಿತ್ ದೀನದಯಾಳ್ ಉಪಾಧ್ಯಾಯರ ಅಂತ್ಯೋದಯ ತತ್ವ ಮತ್ತು ಪಕ್ಷದ ಸಿದ್ಧಾಂತಗಳನ್ನು ಕಾರ್ಯಕರ್ತರಿಗೆ ತಲುಪಿಸುವ ನಿಟ್ಟಿನಲ್ಲಿ ಪ್ರಶಿಕ್ಷಣ ವರ್ಗ ಅತ್ಯಂತ ಮಹತ್ವ ಪಾತ್ರ ವಹಿಸಲಿದೆ ಎಂದು ಸಂಸದ ಗೋವಿಂದ ಎಂ. ಕಾರಜೋಳ ಹೇಳಿ ದರು.
ಬಿಜೆಪಿಯಿಂದ ಪಕ್ಷದ ದಾವಣಗೆರೆ ವಿಭಾಗ ವಿಷಯ ಪ್ರಮುಖರಿಗೆ ಚಿತ್ರದುರ್ಗದ ಜಗಳೂರು ಮಹಾಲಿಂಗಪ್ಪ ಸಭಾಂಗಣದಲ್ಲಿ ಶನಿ ವಾರ ಆಯೋಜಿಸಿದ್ದ ಪಂಡಿತ್ ದೀನದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ-೨೦೨೬ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಕಾರ್ಯಕರ್ತರ ಬೌದ್ಧಿಕ ವಿಕಸನ ಮತ್ತು ಸಂಘಟನಾತ್ಮಕ ಚಟುವಟಿಕೆಗಳಿಗೆ ವೇಗ ನೀಡಲು ಈ ಕಾರ್ಯಾಗಾರ ಪೂರಕವಾಗಲಿದೆ ಎಂದರು.
ತತ್ವ,ಸಿದ್ಧಾಂತ ಆಧರಿತ ನಮ್ಮ ಪಕ್ಷ ದೊಡ್ಡ ಮಟ್ಟದಲ್ಲಿ ಬೆಳೆದಿದೆ. ಹಲವು ನಾಯಕರ ಪರಿಶ್ರಮದ -Àಲವಾಗಿ ನರೇಂದ್ರ ಮೋದಿ ೩ನೇ ಬಾರಿಗೆ ಪ್ರಧಾನಿಯಾಗಿ ದೇಶ ಮುನ್ನಡೆಸುತ್ತಿದ್ದಾರೆ. ಕರ್ನಾಟಕದಲ್ಲೂ ಪಕ್ಷ ಅಽಕಾರ ನಡೆಸಿದೆ ಎಂದರು.
ಕಾರ್ಯಕರ್ತರು ಪಕ್ಷದ ಏಳಿಗೆಗೆ ತಮ್ಮ ಜೀವವನ್ನೇ ಮುಡುಪಾಗಿಟ್ಟಿದ್ದಾರೆ. ನಿಷ್ಠಾವಂತ ಕಾರ್ಯಕರ್ತರಿಗೆ ಅಽಕಾರ ಸಿಗಲಿದೆ ಎಂಬುದಕ್ಕೆ ಮೋದಿ ಸಾಕ್ಷಿ. ದೇಶ ಮೊದಲು ನಂತರ ಅಽಕಾರವೆನ್ನುವ ಪಕ್ಷ ನಮ್ಮದು. ಕಾಂಗ್ರೆಸ್ ಸರ್ಕಾರ ರಾಜ್ಯದ ಜನರ ದೌ ರ್ಭಾಗ್ಯವಾಗಿದೆ. ಈ ಸರ್ಕಾರ ಜನರಿಗೆ ಬೆಲೆ ಏರಿಕೆ ಬರೆ ಹಾಕುತ್ತಿದೆ. ಕೇಂದ್ರದ ಅಕ್ಕಿಯನ್ನು ತನ್ನದೆಂದು ಹಂಚುತ್ತಿದೆ.
ಗ್ಯಾರಂಟಿ ಹೆಸರಲ್ಲಿ ಬೊಕ್ಕಸ ಖಾಲಿ ಮಾಡುತ್ತಿದೆ ಎಂದು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಡಾ. ಶಿವಯೋಗಿಸ್ವಾಮಿ ಮಾತನಾಡಿ, ಕಾರ್ಯಕರ್ತರ ಶಿಕ್ಷಣಕ್ಕಾಗಿ ದೀನ ದಯಾಳ್ ಉಪಾ ಧ್ಯಾಯರು ೧೯೫೬ರಲ್ಲಿ ಅಭಿಯಾನ ಪ್ರಾರಂಭಿಸಿದರು. ೧೧ ಜನರಿಂದ ಪ್ರಾರಂಭವಾದ ಪಕ್ಷವಿಂದು ಪ್ರಪಂಚದಲ್ಲೇ ಅತಿ ಹೆಚ್ಚು ಸದಸ್ಯರನ್ನು ಹೊಂದಿದೆ. ದೇಶದಲ್ಲಿ ೯ ಲಕ್ಷ ಬೂತ್, ೧೭,೭೫೬ ಮಂಡಲಗಳ ಕಾರ್ಯಕರ್ತರಿಗೆ ಪ್ರಶಿಕ್ಷಣ ವರ್ಗದ ಮೂಲಕ ಪಕ್ಷದ ಧೇಯೋದ್ದೇಶಳನ್ನು ತಿಳಿಸಲಾಗುತ್ತಿದೆ ಎಂದರು.
ಮಾಜಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ, ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ದಾವಣಗೆರೆ ವಿಭಾಗೀಯ ಪ್ರಭಾರಿ ಮೇಘ ರಾಜ್, ಸಹ ಪ್ರಭಾರಿ ಎ. ಮುರುಳಿ, ರಾಜ್ಯ ಕಾರ್ಯದರ್ಶಿ ಅಂಬಿಕಾ ಹುಲಿನಾಯ್ಕರ್, ಎಸ್.ಟಿ. ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು, ಪಕ್ಷದ ಜಿಲ್ಲಾಧ್ಯಕ್ಷ ಕೆ.ಟಿ. ಕುಮಾರಸ್ವಾಮಿ ಇದ್ದರು. ಮೀನಾಕ್ಷಿ ಭಟ್ ಪ್ರಾರ್ಥಿಸಿದರು. ಮೋಹನ್ ನಿರೂಪಿಸಿದರು. ಪಂಪ್ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net