ಚಿತ್ರದುರ್ಗ: ಹÊದಯದಂತೆ ಕಣ್ಣುಗಳು ಕೂಡ ಮನುಷ್ಯನಿಗೆ ಅತ್ಯಂತ ಮುಖ್ಯವೆಂದು ಶಾಸಕ ಕೆ.ಸಿ ವೀರೇಂದ್ರ ಪಪ್ಪಿ ಹೇಳಿದರು.
ನಗರದ ೧೯ನೇ ವಾರ್ಡ್ ಖಾಸಗಿ ಶಾಲಾ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ನೇತ್ರ ಉಚಿತ ತಪಾಸಣಾ ಶಿಬಿರ ಉದ್ಘಾಟಿ ಸಿ ಮಾತನಾಡಿದ ಅವರು, ಕಣ್ಣುಗಳ ಸುರಕ್ಷತೆ ಮುಖ್ಯ. ಸಣ್ಣಪುಟ್ಟ ವ್ಯತ್ಯಾಸಗಳು ಕಾಣಿಸಿಕೊಂಡ ಕೂಡಲೇ ವೈದ್ಯರಿಂದ ಸಲಹೆ, ಚಿಕಿತ್ಸೆ ಪಡೆಯಬೇಕು ಎಂದು ತಿಳಿಸಿದರು.
ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಬಹುತೇಕ ಹಳ್ಳಿಗಳಲ್ಲಿ ಶಂಕರ ಕಣ್ಣಿನ ಆಸ್ಪತ್ರೆ ಸಹಯೋಗದೊಂದಿಗೆ ತಪಾಸಣಾ ಶಿಬಿರಗಳ ನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಈವರೆಗೂ ಮೂರು ಸಾವಿರಕ್ಕೂ ಹೆಚ್ಚು ಜನರಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ೭ ಸಾವಿರ ಜನರಿಗೆ ಕನ್ನಡಕ ವಿತರಿಸಲಾಗಿದೆ ಎಂದರು. ಈ ಕೆಲಸ ನಟ ದೊಡ್ಡಣ್ಣ ಅವರ ನೇತÊತ್ವದಲ್ಲಿ ನಡೆಯುತ್ತಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಮುಖಂಡ ಅಂಜಿನಪ್ಪ ಕೆಳಗೋಟೆ ಮಾತನಾಡಿ, ರಾಜ್ಯದ ಯಾವೊಬ್ಬ ಶಾಸಕರು ಮಾಡದ ಕೆಲಸವನ್ನು ವೀರೇಂದ್ರ ಪಪ್ಪಿ ಅವರು ಮಾಡುತ್ತಿದ್ದಾರೆ ಎಂದರು.
ಜಿಲ್ಲಾ ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ಶಿವಣ್ಣ, ವಿಜಯ್‌ಕುಮಾರ್, ಆರ್.ಕೆ. ಸರ್ದಾರ್, ವಾಸಿಮ್, ರೆಹಮಾನ್, ಜಲೀಲ್ ಇತರರು ಇದ್ದರು.