ಚಿತ್ರದುರ್ಗ ನಗರದ ಮುಖ್ಯರಸ್ತೆ ಒತ್ತುವರಿ ತೆರವಿಗೆ ಶಾಸಕರ ನಿರ್ದೇಶನ

 ಚಿತ್ರದುರ್ಗದಲ್ಲಿ ಬುಧವಾರ ರಸ್ತೆ ಒತ್ತುವರಿ ತೆರವು ಕುರಿತಂತೆ ನಡೆದ ಸಭೆಯಲ್ಲಿ ಶಾಸಕ ಕೆ.ಸಿ.ವೀರೇಂದ್ರಪಪ್ಪಿ, ಟಿ.ವೆಂಕಟೇಶ್, ಬಿ.ಟಿ. ಕುಮಾರಸ್ವಾಮಿ, ಎಸ್.ಲಕ್ಷಿ÷್ಮÃ, ರೇಷ್ಮಾಹಾನಗಲ್ ಇತರರು ಇದ್ದರು.
ಚಿತ್ರದುರ್ಗದಲ್ಲಿ ಬುಧವಾರ ರಸ್ತೆ ಒತ್ತುವರಿ ತೆರವು ಕುರಿತಂತೆ ನಡೆದ ಸಭೆಯಲ್ಲಿ ಶಾಸಕ ಕೆ.ಸಿ.ವೀರೇಂದ್ರಪಪ್ಪಿ, ಟಿ.ವೆಂಕಟೇಶ್, ಬಿ.ಟಿ. ಕುಮಾರಸ್ವಾಮಿ, ಎಸ್.ಲಕ್ಷಿ÷್ಮÃ, ರೇಷ್ಮಾಹಾನಗಲ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನಿಯಮ ಮೀರಿ ಕಟ್ಟಡ ನಿರ್ಮಾಣ
  • ತ್ವರಿತ ವಿಚಾರಣೆಗೆ ವೀರೇಂದ್ರ ಪಪ್ಪಿ ತಾಕೀತು
  • ಮಹಾನಗರಪಾಲಿಕೆ ಮಾನ್ಯತೆಗೆ ಮನವಿ
ಚಿತ್ರದುರ್ಗ: ಅಭಿವೃದ್ಧಿ ದÊಷ್ಟಿಯಿಂದ ನಗರದ ರಸ್ತೆಗಳ ಒತ್ತುವರಿ ತೆರವು ಅನಿವಾರ್ಯವಾಗಿದೆ ಎಂದು ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಹೇಳಿದರು.
ಡಿಸಿ ಕಚೇರಿಯಲ್ಲಿ ಬುಧವಾರ ನಗರದ ರಸ್ತೆ ಒತ್ತುವರಿ ತೆರವು ಕುರಿತಂತೆ ಅಽಕಾರಿಗಳೊಂದಿಗೆ ಸಭೆ ನಡೆಸಿದ ಅವರು, ನಿಯಮ ಉಲ್ಲಂಘಿಸಿ ಒತ್ತುವರಿಯೊಂದಿಗೆ ನಿರ್ಮಿಸಿರುವ ಕಟ್ಟಡ ಮಾಲೀಕರ ಪ್ರಕರಣಗಳ ತ್ವರಿತ ವಿಚಾರಣೆ ನಡೆಸುವಂತೆ ನಗರಸಭೆ ಅಽಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲಾ ಕೇಂದ್ರ ಚಿತ್ರದುರ್ಗ ನಗರಸಭೆಯನ್ನು ಮಹಾನಗರ ಪಾಲಿಕೆಯನ್ನಾಗಿ ಉನ್ನತೀಕರಿಸಲು ಸರ್ಕಾರಕ್ಕೆ ಮನವಿ ಮಾಡಲಾಗಿದೆ. ನಿಯಮ ಮೀರಿ ನಿರ್ಮಿಸಿದ ಕಟ್ಟಡಗಳಿಂದ ನಗರದ ಮುಖ್ಯರಸ್ತೆ ಸೇರಿ, ವಾಣಿಜ್ಯ ಚಟುವಟಿಕೆಗಳು ನಡೆಯುವ ರಸ್ತೆಗಳು ಕಿರಿದಾಗಿವೆ. ಇದರಿಂದ ಸಂಚಾರ ದಟ್ಟಣೆ ಉಂಟಾಗುತ್ತಿದೆ.
ನಗರದ ಮುಖ್ಯರಸ್ತೆಯ ೩೭೩ ವಾಣಿಜ್ಯಮಳಿಗೆಗಳ ಪೈಕಿ ಬಹುತೇಕ ಮಾಲೀಕರು ನಿಯಮಗಳನ್ನು ಗಾಳಿಗೆ ತೂರಿ ಕಟ್ಟಡ ನಿರ್ಮಿಸಿದ್ದಾರೆ. ಈಗಾಗಲೇ ನೋಟಿಸ್ ನೀಡಿರುವ ಕಟ್ಟಡ ಮಾಲೀಕರ ಪ್ರಕರಣಗಳನ್ನು ಒಂದು ತಿಂಗಳ ಒಳಗಾಗಿ ಆಲಿಸಿ, ನಿರ್ಧಾರ ಕೈಗೊಳ್ಳಬೇಕು ಎಂದು ಶಾಸಕರು ಅಽಕಾರಿಗಳಿಗೆ ತಾಕೀತು ಮಾಡಿದರು.
ಜಿಲ್ಲಾಽಕಾರಿ ಟಿ. ವೆಂಕಟೇಶ್ ಮಾತನಾಡಿ, ಮುಖ್ಯರಸ್ತೆಯ ಬಹುತೇಕ ಕಟ್ಟಡ ಮಾಲೀಕರ ಬಳಿ ಆಸ್ತಿ ದಾಖಲೆಗಳು ಸರಿಯಾಗಿ ಲ್ಲದಿರುವುದು, ಅನುಮೋದಿತ ಕಟ್ಟಡ ನಕ್ಷೆ ಉಲ್ಲಂಘಿಸಿ ಹೆಚ್ಚಿನ ವಿಸ್ತೀರ್ಣದಲ್ಲಿ ಕಟ್ಟಡ ನಿರ್ಮಿಸಿರುವುದು, -ÀÅಟ್‌ಪಾತ್ ಮತ್ತು ಬ-Àರ್ ಝೋನ್ ಒತ್ತುವರಿ, ವಾಸದ ಮನೆಯನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿರುವುದು, ಎ-ï‌ಎಆರ್ ನಿಯಮಾನುಸಾರ ರಸ್ತೆ ವಿಸ್ತರಣೆಗೆ ತಕ್ಕಂತೆ ಕಟ್ಟಬೇಕಾದ ಕಟ್ಟಡದ ಎತ್ತರ ಮತ್ತು ವಿಸ್ತೀರ್ಣದ ನಿಯಮಗಳನ್ನು ಉಲ್ಲಂöಸಿರುವುದು ಸಮೀಕ್ಷೆ ವೇಳೆ ಕಂಡು ಬಂದಿದೆ ಎಂದರು.
ಪ್ರತಿ ಕಟ್ಟಡದ ಉಲ್ಲಂಘನೆಗಳನ್ನು ನಿಖರವಾಗಿ ದಾಖಲಿಸಲಾಗಿದೆ. ಸುಪ್ರೀಂಕೋರ್ಟ್ ಆದೇಶ ಗಮನದಲ್ಲಿ ಇಟ್ಟುಕೊಂಡು ಒತ್ತುವರಿ ತೆರವು ಕಾರ್ಯಾಚರಣೆ ಏಕಾಏಕಿ ಕೈಗೊಳ್ಳದೇ, ಪ್ರತಿ ಕಟ್ಟಡ ಮಾಲೀಕರಿಗೂ ನೋಟಿಸ್ ನೀಡಿ ಅಗತ್ಯ ದಾಖಲೆ ಗಳನ್ನು ಸಲ್ಲಿಸಲು ಕಾಲಾವಕಾಶ ಒದಗಿಸಲಾಗಿದೆ. ಕಾನೂನುಬದ್ಧವಾಗಿ ಪ್ರತಿಯೊಬ್ಬರಿಗೂ ಅವಕಾಶ ನೀಡಿದ್ದು ದಾಖಲೆಗಳ ಆಧಾರದ ಮೇಲೆ ಉಲ್ಲಂಘನೆಗಳನ್ನು ಗುರುತಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ನೋಟಿಸ್ ಪಡೆದ ಕಟ್ಟಡ ಮಾಲೀಕರ ಪೈಕಿ ೧೯೦ ಜನರು ದಾಖಲೆಗಳನ್ನು ಸಲ್ಲಿಸಿದ್ದಾರೆ. ೪೦ ಪ್ರಕರಣಗಳ ವಿಚಾರಣೆ ಪೂರ್ಣಗೊಂಡಿದೆ. ದಾಖಲೆ ಸಲ್ಲಿಸದ ೧೮೩ ಮಾಲೀಕರಿಗೆ ಕೂಡಲೇ ದಾಖಲೆಗಳ ಸಲ್ಲಿಕೆಗೆ ಮತ್ತೊಮ್ಮೆ ನೋಟಿಸ್ ನೀಡಲಾಗಿದೆ. ಒಂದು ವೇಳೆ ಮಾಲೀಕರು ದಾಖಲೆಗಳನ್ನು ಸಲ್ಲಿಸದಿದ್ದರೆ, ಸಬ್‌ರಿಜಿಸ್ಟಾರ್ ಕಚೇರಿಯಿಂದ ಸ್ವತ್ತಿನ ದಾಖಲೆಗಳನ್ನು ಪಡೆದು ನಿರ್ಣಯ ಕೈಗೊಳ್ಳುವುದಾಗಿ ಆಯುಕ್ತೆ ಎಸ್. ಲಕ್ಷಿ÷್ಮÃ ಹೇಳಿದರು.
ಎಡಿಸಿ ಬಿ.ಟಿ. ಕುಮಾರಸ್ವಾಮಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್, ಕುಡಾ ಆಯುಕ್ತ ಸೋಮಶೇಖರ್ ಇತರರು ಇದ್ದರು.
ಗಾಂಽ ವೃತ್ತದ ಅಭಿವೃದ್ಧಿ
ನಗರದ ಗಾಂಽ ವÊತ್ತದಲ್ಲಿ ಒತ್ತುವರಿ ತೆರವುಗೊಳಿಸಿ, ಸುಸಜ್ಜಿತ ಪಾರ್ಕಿಂಗ್ ಕಟ್ಟಡ ನಿರ್ಮಿಸಲು ಹಾಗೂ ಆಕರ್ಷಕ ಗಾಂಽ
ಪ್ರತಿಮೆ ಸ್ಥಾಪಿಸಿ, ವÊತ್ತದ ಸೌಂದರ್ಯೀಕರಣಕ್ಕೆ ಯೋಜನೆ ರೂಪಿಸುವಂತೆ ಶಾಸಕರು ಸೂಚಿಸಿದರು. ಸಂತೆ ಹೊಂಡ ಬಳಿಯ ಮಾರುಕಟ್ಟೆ, ಬೀದಿಬದಿ ವ್ಯಾಪಾರಿಗಳಿಗೆ ಹಾಕರ್‌ಜೋನ್‌ಗಳ ನಿರ್ಮಾಣ, ಫುಡ್‌ಕೋರ್ಟ್, ಹೊಸ ಮಟನ್ ಮಾರುಕಟ್ಟೆ ನಿರ್ಮಾಣ, ಹಳೆ ಬಸ್ ನಿಲ್ದಾಣ ಬಳಿಯ ಕಟ್ಟೆ ಮಾರುಕಟ್ಟೆಗೆ ಬೀದಿ ಬದಿ ವ್ಯಾಪಾರಗಳ ಸ್ಥಳಾಂತರ ಕುರಿತಂತೆ ಸಭೆಯಲ್ಲಿ ಚರ್ಚಿಸಲಾಯಿತು.
ಅರಸನ ಕೆರೆ ಕಾಮಗಾರಿಗೆ ಮರು ಟೆಂಡರ್
ಮುರುಘಾ ಮಠದ ಮುಂದಿನ ಅರಸನ ಕೆರೆ ಕಾಮಗಾರಿ ಟೆಂಡರ್ ಪಡೆದ ಗುತ್ತಿಗೆದಾರ ಕಾಮಗಾರಿ ಪೂರ್ಣಗೊಳಿಸುತ್ತಿಲ್ಲ. ಕುಡಾದಿಂದ ಗುತ್ತಿಗೆದಾರರ ಠೇವಣಿ ಮುಟ್ಟುಗೋಲು ಹಾಕಿ, ಮರು ಟೆಂಡರ್ ಕರೆಯುವಂತೆ ಶಾಸಕರು ನಿರ್ದೇಶಿಸಿದರು. ಅರಸನ ಕೆರೆ ಹಾಗೂ ಮಲ್ಲಾಪುರ ಕೆರೆಗೆ ನೇರ ಚರಂಡಿ ನೀರು ಸೇರದಂತೆ ವೆಟ್‌ವೆಲ್‌ಗಳ ಕಾರ್ಯಾಚರಣÉ ಆರಂಭಿಸಬೇಕು ಎಂದು ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net