ಈ ಉಲ್ಕಾಪಾತದ ಮೂಲ ೩೨೦೦ ಪೈತಾನ್ ಕ್ಷುದ್ರಗ್ರಹ. ೧೦೦ ವರ್ಷಗಳ ಹಿಂದೆ ತನ್ನ ವೇಗ ಬದಲಿಸಿಕೊಂಡು ಸೂರ್ಯನ ಸಮೀ ಪ ಹಾರಾಟ ಮಾಡುತ್ತಿರುವ ಈ ಬಂಡೆ, ಲೋಹಗಳಿಂದಾದ ಕ್ಷುದ್ರಗ್ರಹ ಸೂರ್ಯನ ತಾಪಕ್ಕೆ ಕರಗುತ್ತಾ ಧೂಳು, ಚಿಕ್ಕ, ಚಿಕ್ಕ ಕಲ್ಲಿನ ಕ ಣಗಳನ್ನು ಬಾಹ್ಯಾಕಾಶದಲ್ಲಿ ಚೆಲ್ಲುತ್ತದೆ. ಈ ಸಮಯದಲ್ಲಿ ಅಪರೂಪದ ದÊಶ್ಯ ನೋಡಬಹುದಾಗಿದೆ ಎಂದು ಹವ್ಯಾಸಿ ಖಗೋಳ ವೀಕ್ಷಕ, ಚಿತ್ರದುರ್ಗ ಸೈನ್ಸ್ -Ëಂಡೇಶನ್ ಕಾರ್ಯದರ್ಶಿ ಎಚ್‌ಎಸ್‌ಟಿ ಸ್ವಾಮಿ ತಿಳಿಸಿದ್ದಾರೆ.