ವರ್ಷಾಂತ್ಯಕ್ಕೆ ಮರ್ಚೆಂಟ್ ಬ್ಯಾಂಕ್ ಅಮೃತ ಮಹೋತ್ಸವ ಆಚರಣೆ

 ಚಿತ್ರದುರ್ಗದಲ್ಲಿ ಭಾನುವಾರ ಏರ್ಪಡಿಸಿದ್ದ ಮರ್ಚೆಂಟ್ಸ್ ಬ್ಯಾಂಕ್ ವಾರ್ಷಿಕ ಸಭೆಯನ್ನು ಬ್ಯಾಂಕ್ ಅಧ್ಯಕ್ಷ ರಘುರಾಮರೆಡ್ಡಿ ಉದ್ಘಾ ಟಿಸಿದರು. ನಿಕಟಪೂರ್ವ ಅಧ್ಯಕ್ಷ ಲಕ್ಷಿ÷್ಮÃಕಾಂತರೆಡ್ಡಿ, ಎಲ್.ಇ. ಶ್ರೀನಿವಾಸ್‌ಬಾಬುಲಿಂಗA, ಪಿ.ಎಲ್. ಸುರೇಶ್‌ರಾಜು, ಬಿ.ಎಸ್. ತಿಪ್ಪೇಸ್ವಾಮಿ, ಕೆ.ಆರ್. ಮಲ್ಲಿಕಾರ್ಜುನ ಇತರರು ಇದ್ದರು.
ಚಿತ್ರದುರ್ಗದಲ್ಲಿ ಭಾನುವಾರ ಏರ್ಪಡಿಸಿದ್ದ ಮರ್ಚೆಂಟ್ಸ್ ಬ್ಯಾಂಕ್ ವಾರ್ಷಿಕ ಸಭೆಯನ್ನು ಬ್ಯಾಂಕ್ ಅಧ್ಯಕ್ಷ ರಘುರಾಮರೆಡ್ಡಿ ಉದ್ಘಾ ಟಿಸಿದರು. ನಿಕಟಪೂರ್ವ ಅಧ್ಯಕ್ಷ ಲಕ್ಷಿ÷್ಮÃಕಾಂತರೆಡ್ಡಿ, ಎಲ್.ಇ. ಶ್ರೀನಿವಾಸ್‌ಬಾಬುಲಿಂಗA, ಪಿ.ಎಲ್. ಸುರೇಶ್‌ರಾಜು, ಬಿ.ಎಸ್. ತಿಪ್ಪೇಸ್ವಾಮಿ, ಕೆ.ಆರ್. ಮಲ್ಲಿಕಾರ್ಜುನ ಇತರರು ಇದ್ದರು.
Published on
ಚಿತ್ರದುರ್ಗ: ನಗರದ ಮರ್ಚೆಂಟ್ಸ್ ಸೌಹಾರ್ದ ಸಹಕಾರ ಬ್ಯಾಂಕ್ ಪ್ರಸಕ್ತ ಸಾಲಿನಲ್ಲಿ ಅಮೃತ ಮಹೋತ್ಸವ ಸಮಾರಂಭವನ್ನು ವರ್ಷಾಂತ್ಯದೊಳಗೆ ನಗರದಲ್ಲಿ ಎರಡು ದಿನಗಳ ಕಾಲ ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಬ್ಯಾಂಕ್ ಅಧ್ಯಕ್ಷ ರಘು ರಾಮರೆಡ್ಡಿ ತಿಳಿಸಿದರು.
ನಗರದ ಎಸ್‌ಜಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಏರ್ಪಡಿಸಿದ್ದ ಬ್ಯಾಂಕ್‌ನ ೭೫ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತ ನಾಡಿ, ಶೇರುದಾರರಿಗೆ ಈ ವರ್ಷವೂ ಲಾಭಾಂಶದಲ್ಲಿ ಶೇ.೨೫ ಡಿವಿಡೆಂಡ್ ವಿತರಿಸಲಾಗುವುದು.
ಸಾಲ ತೆಗೆದುಕೊಳ್ಳುವ ಬಡ, ಮಧ್ಯಮ ವರ್ಗದವರ ಅನುಕೂಲಕ್ಕಾಗಿ ವಾಯಿದೆ ಸಾಲದ ಬಡ್ಡಿ ದರವನ್ನು ಶೇ.೧೩ರಿಂದ ೧೦ಕ್ಕೆ ಹಾಗೂ ಎಲ್ಲ ರೀತಿಯ ಸಾಲಗಳ ಮೇಲಿನ ಬಡ್ಡಿ ದರವನ್ನು ಶೇ.೦.೫೦ ಬಡ್ಡಿ ಕಡಿಮೆ ಮಾಡಲಾಗುವುದು ಎಂದರು.
ಹಿAದಿನ ಹಣಕಾಸು ಸಾಲಿನ ಅಂತ್ಯಕ್ಕೆ ಬ್ಯಾಂಕಿನ ನಿವ್ವಳ ಆದಾಯ ೩.೮೬ ಕೋಟಿ ರೂ.ಗಳಾಗಿದೆ ಹಾಗೂ ನಿವ್ವಳ ಅನುತ್ಪಾದಕ ಸಾಲ ಶೂನ್ಯ ಪ್ರಮಾಣದಲ್ಲಿದೆ. ಇದು ಬ್ಯಾಂಕಿನ ಆರ್ಥಿಕ ಸದೃಢತೆ ಪ್ರತಿಬಿಂಬಿಸುತ್ತದೆ. ನಿಕಟಪೂರ್ವ ಅಧ್ಯಕ್ಷ ಎಸ್.ಆರ್. ಲಕ್ಷಿ÷್ಮÃಕಾಂತರೆಡ್ಡಿ ಅವರ ಆಶಯ, ಆಡಳಿತ ಮಂಡಳಿ ತೀರ್ಮಾನದಂತೆ, ಬ್ಯಾಂಕಿನ ಸದಸ್ಯರು ನಿಧನ ಹೊಂದಿದಾಗ ಅವರ ಅಂತಿಮ ಸಂಸ್ಕಾರಕ್ಕೆAದು ಭರಿಸುವ ೧೫ ಸಾವಿರ ರೂ.ಮೊತ್ತವನ್ನು ೨೫ಸಾವಿರ ರೂ.ಗೆ ಹೆಚ್ಚಿಸಲಾಗಿದೆ ಎಂದರು.
೪೨ವರ್ಷಗಳ ಕಾಲ ಬ್ಯಾಂಕಿನ ವಿವಿಧ ಹುದ್ದೆಗಳಲ್ಲಿ ಹಾಗೂ ಮೂರೂವರೆ ದಶಕಗಳ ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ನಿರ್ದೇಶಕ ಲಕ್ಷಿ÷್ಮÃಕಾಂತರೆಡ್ಡಿ ಅವರನ್ನು ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿ, ದ್ವಿತಿಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಬ್ಯಾಂಕಿನ ಸದಸ್ಯರ ಹಾಗೂ ಸಿಬ್ಬಂದಿ ವರ್ಗದವರ ಪ್ರತಿಭಾನ್ವಿತ ಮಕ್ಕಳನ್ನು ಗೌರವಿಸಲಾಯಿತು.
ಉಪಾಧ್ಯಕ್ಷ ಎಲ್.ಇ. ಶ್ರೀನಿವಾಸ್‌ಬಾಬುಲಿಂಗA, ನಿರ್ದೇಶಕರು ಇದ್ದರು. ನಿರ್ದೇಶಕರಾದ ಪಿ.ಎಲ್. ಸುರೇಶ್‌ರಾಜು ಸ್ವಾಗತಿಸಿ ದರು. ಶ. ಮಂಜುನಾಥ್ ವಂದಿಸಿದರು. ಶಾಖಾ ವ್ಯವಸ್ಥಾಪಕ ಬಿ.ಎಸ್. ತಿಪ್ಪೇಸ್ವಾಮಿ ವರದಿ ವಾಚಿಸಿದರು. ಮುಖ್ಯಕಾರ್ಯ ನಿರ್ವಹಣಾಽಕಾರಿ ಕೆ.ಆರ್. ಮಲ್ಲಿಕಾರ್ಜುನ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net