ರಕ್ತದಾನದಿಂದ ಉಳಿಯಲಿವೆ ಹಲವರ ಜೀವ

ಚಿತ್ರದುರ್ಗದ ಸಿಎಂಸಿಆರ್‌ಐನಲ್ಲಿ ಶನಿವಾರ ಆಯೋಜಿಸಿದ್ದ ರಕ್ತದಾನಿಗಳ ದಿನಾಚರಣೆ ಹಾಗೂ ರಕ್ತದಾನ ಶಿಬಿರದಲ್ಲಿ ಡೀನ್ ಡಾ.ಬಿ. ವೈ. ಯುವರಾಜ್ ರಕ್ತದಾನ ಮಾಡಿದರು. ಡಾ.ಪಿ. ಶಶಿಕಲಾ, ಡಾ. ರೂಪಾ, ಡಾ.ಜಿ.ಎಚ್. ಮೇಘಾ, ಡಾ. ಕವಿತಾ, ಡಾ.ಬಿ.ಜೆ. ಬಿಂದು ಇತರರು ಇದ್ದರು.
ಚಿತ್ರದುರ್ಗದ ಸಿಎಂಸಿಆರ್‌ಐನಲ್ಲಿ ಶನಿವಾರ ಆಯೋಜಿಸಿದ್ದ ರಕ್ತದಾನಿಗಳ ದಿನಾಚರಣೆ ಹಾಗೂ ರಕ್ತದಾನ ಶಿಬಿರದಲ್ಲಿ ಡೀನ್ ಡಾ.ಬಿ. ವೈ. ಯುವರಾಜ್ ರಕ್ತದಾನ ಮಾಡಿದರು. ಡಾ.ಪಿ. ಶಶಿಕಲಾ, ಡಾ. ರೂಪಾ, ಡಾ.ಜಿ.ಎಚ್. ಮೇಘಾ, ಡಾ. ಕವಿತಾ, ಡಾ.ಬಿ.ಜೆ. ಬಿಂದು ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಚಿತ್ರದುರ್ಗ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ
  • ರಕ್ತದಾನ ಸಂಸ್ಕೃತಿ
  • ಕೃತಕವಾಗಿ ಉತ್ಪಾದನೆ ಸಾಧ್ಯವಿಲ್ಲ.
ಚಿತ್ರದುರ್ಗ: ಪ್ರತಿ ರಕ್ತದಾನಕ್ಕೆ ಹಲವು ಜೀವಗಳನ್ನು ಉಳಿಸುವ ಸಾಮರ್ಥ್ಯವಿದೆ ಎಂದು ದಾವಣಗೆರೆ ಎಸ್‌ಎಸ್ ವೈದ್ಯಕೀಯ ವಿಜ್ಞಾನ ಸಂಸ್ಥೆ ಉಪ ಪ್ರಾಚಾರ್ಯೆ ಡಾ.ಪಿ. ಶಶಿಕಲಾ ಹೇಳಿದರು.
ನಗರದ ಚಿತ್ರದುರ್ಗ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಪೆಥಾಲಜಿ ವಿಭಾಗ ಹಾಗೂ ಜಿಲ್ಲಾ ರಕ್ತ ಕೇಂದ್ರ ದಿAದ ವಿಶ್ವ ರಕ್ತದಾನಿಗಳ ದಿನಾಚರಣೆ ಹಾಗೂ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿ, ಸಾರ್ವಜನಿಕರು, ವಿಶೇಷÀವಾಗಿ ಯುವಜನರು ನಿಯಮಿತವಾಗಿ ರಕ್ತದಾನ ಮಾಡುವ ಸಂಸ್ಕೃತಿ ಬೆಳೆಸಿಕೊಳ್ಳಬೇಕು ಎಂದರು.
ಜಿಲ್ಲಾಸ್ಪತ್ರೆ ರಕ್ತನಿಽ ಕೇಂದ್ರದ ಅಽಕಾರಿ ಡಾ. ರೂಪಾ ಮಾತನಾಡಿ, ರಕ್ತದಾನಕ್ಕೂ ಮುನ್ನ ರಕ್ತನಿಽಯಲ್ಲಿ ವಿವಿಧ ಪರೀಕ್ಷೆಗಳನ್ನು ಕ ಡ್ಡಾಯವಾಗಿ ಮಾಡಿಸಿಕೊಳ್ಳಬೇಕು. ರಕ್ತವನ್ನು ಕೃತಕವಾಗಿ ಉತ್ಪಾದನೆ ಮಾಡುವುದು ಸಾಧ್ಯವಿಲ್ಲ. ಹಾಗಾಗಿ ರಕ್ತದಾನವೊಂದೇ ಜೀವ ಉಳಿಸಲು ಇರುವ ಏಕೈಕ ಮಾರ್ಗ ಎಂದರು.
ಸಿಎAಸಿಆರ್‌ಐ ವೈದ್ಯಕೀಯ ಅಽÃಕ್ಷಕಿ ಡಾ.ಜಿ.ಎಚ್. ಮೇಘಾ ಮಾತನಾಡಿ, ತುರ್ತು ಸಂದರ್ಭಗಳಲ್ಲಿ ಸಕಾಲಕ್ಕೆ ರಕ್ತ ಪೂರೈಕೆ ಮಾಡಿ ಜೀವ ಉಳಿಸುತ್ತಿರುವ ಜಿಲ್ಲಾ ರಕ್ತನಿಽ ಕಾರ್ಯ ವೈಖರಿಯನ್ನು ಶ್ಲಾಘಿಸಿದರು.
ಎಸ್‌ಎಸ್‌ಎಂಎಸ್ ರಕ್ತಬ್ಯಾಂಕ್ ಉಸ್ತುವಾರಿ ಅಽಕಾರಿ ಡಾ. ಕವಿತಾ, ಪೆಥಾಲಜಿ ವಿಭಾಗದ ಮುಖ್ಯಸ್ಥೆ ಡಾ.ಬಿ.ಜೆ. ಬಿಂದು, ಸಹಾಯಕ ಪ್ರಾಧ್ಯಾಪಕಿ ಡಾ. ನಂದಿನಿ ಎಸ್. ನಾಯಕ್, ನಿವಾಸಿ ವೈದ್ಯರಾದ ಡಾ. ಮೋನಿಕಾ ಮತ್ತು ಡಾ. ಶಕೀಬ್ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net