ಚಿತ್ರದುರ್ಗದ ಮುರುಘಾಮಠದಲ್ಲಿ ಭಾನುವಾರ ಹೇಮರಡ್ಡಿ ಮಲ್ಲಮ್ಮ ಅವರ ಜಯಂತಿ ಆಚರಿಸಲಾಯಿತು. ಡಾ. ಬಸವಕುಮಾರ ಸ್ವಾಮೀಜಿ, ಬಸವ ಭಂಗೇಶ್ವರ ಸ್ವಾಮೀಜಿ, ಬಸವ ಮಹಾಂತ ಸ್ವಾಮೀಜಿ, ಬಸವ ಲಿಂಗಮೂರ್ತಿ ಶರಣರು, ಪಾಲಾಕ್ಷಪ್ಪ, ಚಿದಾನಂದಪ್ಪ, ಡಿ.ಬಿ. ಶಿವಾನಂದಪ್ಪ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಸಾಹಿತಿ ಸಿ.ಬಿ. ಶೈಲಾ ಜಯಕುಮಾರ್ ಬಣ್ಣನೆ
ಮುರುಘಾ ಮಠದಲ್ಲಿ ಮಹಾಸಾದ್ವಿಯ ಜಯಂತಿ ಆಚರಣೆ
ಅಕ್ಕ ಮಹಾದೇವಿ
ಚಿತ್ರದುರ್ಗ: ಸಾಮಾನ್ಯ ವ್ಯಕ್ತಿಯಾಗಿದ್ದ ಹೇಮರಡ್ಡಿ ಮಲ್ಲಮ್ಮ ತಮ್ಮ ಅದ್ವಿತೀಯ ಸಾಧನೆ ಬಲದಿಂದ ಮೇರುಪರ್ವತಕ್ಕೆ ಏರಿದ್ದರು ಎಂದು ಸಾಹಿತಿ ಸಿ.ಬಿ.ಶೈಲಾ ಜಯಕುಮಾರ್ ಬಣ್ಣಿಸಿದರು.
ಮುರುಘಾಮಠದಲ್ಲಿ ಭಾನುವಾರ ಆಯೋಜಿಸಿದ್ದ ಮಹಾಸಾದ್ವಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತ್ಯುತ್ಸವದಲ್ಲಿ ಮಾತನಾಡಿದರು.
ಮಲ್ಲಮ್ಮನವರ ಜೀವನದ ಯಶೋಗಾಥೆಯನ್ನು ಮೂರು ಸಾಲಿನಲ್ಲಿ ವರ್ಣಿಸಲಾಗದು. ಅವರ ಚಿಂತನೆ, ಸಾಧನೆ, ಯೋಗ, ಜ್ಞಾನ, ಕಷ್ಟಗಳನ್ನು ದಿಟ್ಟವಾಗಿ ಎದುರಿಸಿ ಶಕ್ತಿಯಾಗಿ ಬೆಳೆದರು ಎಂದರು.
೧೨ನೇ ಶತಮಾನದಲ್ಲಿ ಅಕ್ಕ ಮಹಾದೇವಿ ನಂತರ ಅಷ್ಟೇ ಪ್ರಮುಖವಾಗಿ ಕೇಳಿಬರುವ ಹೆಸರೇ ಹೇಮರಡ್ಡಿ ಮಲ್ಲಮ್ಮ.ಕೌಟುಂಬಿ ಕ ಅಡೆತಡೆಗಳನ್ನು ಮೀರಿ ಭಗವಂತನನ್ನು ಒಲಿಸಿಕೊಳ್ಳುವ ನಾರಿಯರು ಹಿಮಾಲಯ ಪರ್ವತದೆತ್ತರಕ್ಕೆ ಬೆಳೆಯಬಲ್ಲರು ಎಂಬು ದಕ್ಕೆ ಮಲ್ಲಮ್ಮ ಸಾಕ್ಷಿಯಾಗಿದ್ದಾರೆ ಎಂದು ತಿಳಿಸಿದರು.
ಶ್ರೀ ಮಠದ ಆಡಳಿತ ಮಂಡಳಿ ಸದಸ್ಯ ಡಾ. ಬಸವಕುಮಾರ ಸ್ವಾಮೀಜಿ ಮಾತನಾಡಿ, ಮಲ್ಲಮ್ಮ ಅವರದು ಇಡೀ ಮಾನವ ಕು ಲಕ್ಕೆ ಆದರ್ಶಪ್ರಾಯ ವ್ಯಕ್ತಿತ್ವ. ಹೀಗಾಗಿ ಅವರನ್ನು ಒಂದು ಜಾತಿಗೆ ಸೀಮಿತಗೊಳಿಸದೆ ಅವರಲ್ಲಿದ್ದ ಸರಳತೆ, ಸೌಜನ್ಯ, ವಿನಯ, ತಾಳ್ಮೆಯನ್ನು ನಾವೆಲ್ಲರೂ ಆದರ್ಶವಾಗಿಸಿಕೊಂಡರೆ ಬದುಕು ಹಸನಾಗಲಿದೆ ಎಂದು ತಿಳಿಸಿದರು.
ಬಸವ ಭಂಗೇಶ್ವರ ಸ್ವಾಮೀಜಿ, ಬಸವ ಮಹಾಂತ ಸ್ವಾಮೀಜಿ, ಬಸವ ಲಿಂಗಮೂರ್ತಿ ಶರಣರು, ತಿಪ್ಪೇರುದ್ರ ಸ್ವಾಮೀಜಿ, ಬಸವ ಮಲ್ಲಿಕಾರ್ಜುನ ಸ್ವಾಮೀಜಿ, ಪೂರ್ಣಾನಂದ ಸ್ವಾಮೀಜಿ ಸೇರಿ ಹಲವು ಮಠಾಽÃಶರು ಸಾನ್ನಿಧ್ಯ ವಹಿಸಿದ್ದರು.
ಲಿಂಗಾಯತ ಹೇಮರಡ್ಡಿ ಮಲ್ಲಮ್ಮ ಸಮಾಜದ ಜಿಲ್ಲಾಧ್ಯಕ್ಷ ಡಾ. ಪಾಲಾಕ್ಷಪ್ಪ, ಗೌರವಾಧ್ಯಕ್ಷ ಚಿದಾನಂದಪ್ಪ, ಕಾರ್ಯದರ್ಶಿ ಡಿ.ಬಿ. ಶಿವಾನಂದಪ್ಪ, ಗಂಗಾಧರಪ್ಪ, ರಾಜಣ್ಣ, ಗೋವಿಂದಪ್ಪ, ಬಸವರಾಜ ಕಟ್ಟಿ, ತಿಪ್ಪೇಸ್ವಾಮಿ, ನಾಗರಾಜ ಸಂಗಮ್ ಇತರರಿದ್ದರು.