ರಾಜ್ಯದ ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ, ಯುಕೆಜಿ ಸ್ಥಾಪಿಸಲು ರಾಜ್ಯ ಸರ್ಕಾರ ಮುಂದಡಿ ಇಟ್ಟಿದೆ. ಉನ್ನತೀಕರಿಸಿದ ೨೩ ೩೯ ಮಿನಿ ಅಂಗನವಾಡಿಗಳ ಸಹಿತ ರಾಜ್ಯದಲ್ಲಿ ೭೨೨೬೧ ಅಂಗನವಾಡಿಗಳಿವೆ. ಇವುಗಳ ಪೈಕಿ ಎಲ್ಲ ಜಿಲ್ಲೆಯ ಆಯ್ದ ಅಂಗನ ವಾಡಿಗಳಲ್ಲಿ ಈಗ ಸ್ಥಾಪಿಸಲಿರುವ ಎಲ್‌ಕೆಜಿ, ಯುಕೆಜಿ ಶಾಲೆಗಳಿಗೆ ನ. ೨೮ರಂದು ಚಾಲನೆ ಸಿಗಲಿದೆ.
ರಾಜ್ಯದ ಅಂಗನವಾಡಿ ಕೇಂದ್ರಗಳ ಪೈಕಿ ಅಂದಾಜು ೫ ಸಾವಿರ ಕೇಂದ್ರಗಳಲ್ಲಿ ಎಲ್‌ಕೆಜಿ, ಯುಕೆಜಿ ಶಾಲೆಗಳನ್ನು ಪ್ರಾರಂಭಿಸ ಲಾಗುತ್ತಿದೆ. ೪-೫ ವರ್ಷದೊಳಗಿನ ಮಕ್ಕಳಿಗೆ ಎಲ್‌ಕೆಜಿ, ೫-೬ ವರ್ಷದೊಳಗಿನ ಮಕ್ಕಳಿಗೆ ಯುಕೆಜಿ ಶಿಕ್ಷಣ ಬೋಽಸಲಾಗುತ್ತದೆ.
ಪಠ್ಯ, ಬೋಧಕರ ಕೈಪಿಡಿ ಪೂರೈಕೆಯಾಗಿದೆ. ಕನಿಷ್ಠ ದ್ವಿತೀಯ ಪಿಯುಸಿ ವಿದ್ಯಾರ್ಹತೆ ಹೊಂದಿರುವ ಅಂಗನವಾಡಿ ಕಾರ್ಯಕರ್ತೆ ಯರು, ಎಲ್‌ಕೆಜಿ, ಯುಕೆಜಿ ಶಿಕ್ಷಕರಾಗಿಯೂ ಕೆಲಸ ನಿರ್ವಹಿಸಲಿದ್ದಾರೆ. ಇವರಿಗೆ ಅಗತ್ಯ ತರಬೇತಿ ಕೊಡಲಾಗುತ್ತದೆ. ಕಳೆದ ಜೂನ್‌ನಿಂದಲೇ ಆರಂಭವಾಗಬೇಕಿದ್ದ ಈ ಶಾಲೆಗಳಲ್ಲಿ, ಮಕ್ಕಳಿಗೆ ಅಕ್ಷರಾಭ್ಯಾಸದೊಂದಿಗೆ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಪಠ್ಯ ಬೋಽಸಲಾಗುತ್ತದೆ.
೧೯೭೫ ಅಕ್ಟೋಬರ್ ೨ರಂದು ದೇಶಾದ್ಯಂತ ಐಸಿಡಿಎಸ್ ಜಾರಿಯಾಗಿತ್ತು. ಕರ್ನಾಟಕದ ಮೈಸೂರು ಜಿಲ್ಲೆ ಟಿ. ನರಸೀಪುರ ಹಾ ಗೂ ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಗಳಲ್ಲಿ ಅಂಗನವಾಡಿ ಕೇಂದ್ರಗಳು ಆರಂಭವಾಗಿದ್ದವು. ೧೯೯೧ರ ಹೊತ್ತಿಗೆ ರಾಜ್ಯದ ಎಲ್ಲ ಜಿಲ್ಲೆಗಳಿಗೂ ವಿಸ್ತರಿಸಲಾಯಿತು.
ಸುವರ್ಣ ಮಹೋತ್ಸವ
ಐಸಿಡಿಎಸ್ ಯೋಜನೆಗೆ ೫೦ ವರ್ಷ ಸಂದಿದೆ. ಇದರ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸುವರ್ಣ ಮಹೋ ತ್ಸವ ಆಚರಿಸುತ್ತಿದೆ. ನ. ೨೮ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಮಾರಂಭ ಹಮ್ಮಿಕೊಂಡಿದೆ. ಅಂದು ಎಲ್‌ಕೆಜಿ, ಯುಕೆಜಿ ಉದ್ಘಾಟನೆ ಹಾಗೂ ಎಲ್ಲ ೩೧ ಜಿಲ್ಲೆಗಳ ಒಂದು ಕೇಂದ್ರದಲ್ಲಿ ಎಲ್‌ಕೆಜಿ, ಯುಕೆಜಿಗೆ ವರ್ಚ್ಯುವಲ್ ಮೂಲಕ ಗಣ್ಯರು ಚಾಲನೆ ನೀಡಲಿದ್ದಾರೆ.
ಅಕ್ಕಪಡೆಗೆ ಚಾಲನೆ
ಅಂದಿನ ಸಮಾರಂಭದಲ್ಲಿ ಅಕ್ಕಪಡೆಗೆ ಚಾಲನೆ ನೀಡಲಾಗುತ್ತದೆ. ಜಿಲ್ಲೆಗೊಂದರAತೆ ಅಕ್ಕ ಪಡೆ ಆರಂಭವಾಗುತ್ತಿದೆ. ಇದರಲ್ಲಿರುವ ೧೦ ಸಿಬ್ಬಂದಿಗೆ ಸಮವಸ್ತç ಹಾಗೂ ಪಡೆಗೆ ಪ್ರತ್ಯೇಕ ವಾಹನ ಒದಗಿಸಲಾಗುತ್ತಿದೆ.
ಗೃಹಲಕ್ಷಿ÷್ಮÃ ಸಹಕಾರಿ ಬ್ಯಾಂಕ್
ಅAದು ಗೃಹಲಕ್ಷಿ÷್ಮÃ ಸಹಕಾರಿ ಬ್ಯಾಂಕ್ ಕೂಡ ಉದ್ಘಾಟನೆಯಾಗಲಿದೆ. ಪ್ರತಿ ಜಿಲ್ಲೆಗೆ ೬೬ ಗೃಹಲಕ್ಷಿ÷್ಮÃ ಫಲಾನುಭವಿಗಳು ಬ್ಯಾಂಕ್ ಸದಸ್ಯರಾಗಿದ್ದಾರೆ. ನ.೨೯ರಂದು ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ನಿರ್ದೇಶಕರ ಆಯ್ಕೆ ಚುನಾವಣೆ ನಡೆಯಲಿದೆ ಎನ್ನಲಾಗಿದೆ. ಸಮಾರಂಭದಲ್ಲಿ ಗೃಹಲಕ್ಷಿ÷್ಮÃ ಫಲಾನುಭವಿಗಳು, ಅಂಗನವಾಡಿ ಕಾರ್ಯಕರ್ತೆಯರು, ಇಲಾಖೆ ಅಽಕಾರಿ, ಸಿಬ್ಬಂದಿ ಪಾಲ್ಗೊಳ್ಳಲಿದ್ದಾರೆ.
ವಿಶೇಷವಾಗಿ ಬೆಂಗಳೂರು ಸಮೀಪದ ಐದಾರು ಜಿಲ್ಲೆಗಳಿಂದ ಒಂದು ಜಿಲ್ಲೆಗೆ ೧೫೦೦ ಗೃಹಲಕ್ಷಿ÷್ಮÃ ಫಲಾನುಭವಿಗಳು-ಅಂಗ ನವಾಡಿ ಕಾರ್ಯಕರ್ತೆಯರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಇವರಿಗಾಗಿ ತಲಾ ಒಂದು ಜಿಲ್ಲೆಗೆ ೩೦ ಬಸ್‌ಗಳನ್ನು ನಿಗದಿ ಪಡಿಸಲಾಗಿದೆ.
"
ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ ಯುಕೆಜಿ ಆರಂಭಿಸುತ್ತಿರುವುದು ಒಳ್ಳೆಯ ಕಾರ್ಯಕ್ರಮ. ಎಲ್ಲ ಪಾಲಕರಿಗೂ ಮಕ್ಕಳಿಗೆ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ ಕೊಡಿಸುವ ಆರ್ಥಿಕ ಶಕ್ತಿ ಇರುವುದಿಲ್ಲ. ನಮ್ಮ ಜಿಲ್ಲೆಯಲ್ಲಿ ೨೦೦ ಎಲ್‌ಕೆಜಿ, ಯುಕೆಜಿ ಶಾಲೆಗಳನ್ನು ಪ್ರಾರಂಭಿಸಲಾಗುತ್ತಿದೆ.