ಚಿತ್ರದುರ್ಗ ಬೃಹನ್ಮಠದ ಸಂಯುಕ್ತ ಕಲಾ, ವಿe್ಞÁನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಡಾ. ಬಸವಪ್ರಭು ಸ್ವಾಮೀಜಿ ಉದ್ಘಾಟಿಸಿದರು. ಪಿಎಂಜಿ ರಾಜೇಶ್, ಎನ್.ಬಿ. ತಿಪ್ಪೇಸ್ವಾಮಿ, ಡಾ. ಸಂದೀಪ್, ಪುಷ್ಪವಲ್ಲಿ, ರಕ್ಷಿತಾ ಇತರರಿದ್ದರು.
ಚಿತ್ರದುರ್ಗ: ವಿದ್ಯಾರ್ಥಿಗಳು ೨೦ ವರ್ಷ ಕಷ್ಟಪಟ್ಟರೆ ಮುಂದಿನ ೭೦ ವರ್ಷ ಗೋಲ್ಡನ್ ಲೈ-ïನೊಂದಿಗೆ ಜೀವಿಸಬಹುದು. ಈ ನಿಟ್ಟಿನಲ್ಲಿ ಗುರಿಯತ್ತ ಮನಸು ಹರಿಸಬೇಕು ಎಂದು ಡಾ. ಬಸವಪ್ರಭು ಸ್ವಾಮೀಜಿ ಸಲಹೆ ನೀಡಿದರು.
ನಗರದ ಗಾರೆಹಟ್ಟಿ ಮಹಾಬಲೇಶ್ವರ ದೇಗುಲ ಆವರಣದ ಬೃಹನ್ಮಠ ಸಂಯುಕ್ತ ಕಲಾ, ವಿe್ಞÁನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.
ವಿದ್ಯಾರ್ಥಿ ಜೀವನವನ್ನು ಮೋಜು, ಮಸ್ತಿಯೊಂದಿಗೆ ವಿಲಾಸಿಯಾಗಿ ಕಳೆದರೆ ಮುಂದಿನ ದಿನಗಳು ಬಹಳ ದುಸ್ತರವಾಗಲಿದೆ. ಪಾಲಕರ ಕಷ್ಟ ಹರಿತು ಸುಂದರ ಭವಿಷ್ಯ ರೂಪಿಸಿಕೊಳ್ಳಲು ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.
ಪ್ರಸ್ತುತ ಯುವಕರು ದುಶ್ಚಟಗಳಿಗೆ ದಾಸರಾಗುತ್ತಿz್ದÁರೆ. ಇದರಿಂದ ಬದುಕು ಹಾಳಾಗಲಿದೆ. ಉತ್ತಮ ಉದ್ಯೋಗ, ದುಡಿಮೆ ಚೆನ್ನಾಗಿದ್ದರೆ ಹೆಣ್ಣು ಕೊಡಲು ಯಾರೂ ಹಿಂಜರಿಯುವುದಿಲ್ಲ. ಎಲ್ಲ ಸಮಸ್ಯೆಗಳಿಗೂ ಶಿಕ್ಷಣವೊಂದೇ ಪರಿಹಾರ ಎಂದರು.
ಮಕ್ಕಳಿಗಾಗಿ ತಂದೆ-ತಾಯಿಗಳ ತ್ಯಾಗ ಅವಿಸ್ಮರಣೀಯ. ಆದ್ದರಿಂದ ವೃದ್ಧಾಪ್ಯದಲ್ಲಿ ಅವರನ್ನು ಮರೆಯಬೇಡಿ. ಅಲ್ಲದೆ, ವೃದ್ಧಾಶ್ರಮಕ್ಕೆ ಕಳುಹಿಸದೆ, ಪ್ರೀತಿ-ವಿಶ್ವಾಸದಿಂದ ನೋಡಿಕೊಳ್ಳಿ ಎಂದು ಸಲಹೆ ನೀಡಿದರು.
ಪ್ರಾಚಾರ್ಯ ಪಿಎಂಜಿ ರಾಜೇಶ್ ಮಾತನಾಡಿ, ಜ್ಞಾನವಂತರಿಗೆ ಸಮಾಜದಲ್ಲಿ ಗೌರವ ಹೆಚ್ಚು ಎಂಬುದನ್ನು ಮರೆಯಬಾರದು. ಗುರು-ಹಿರಿಯರಿಗೆ ವಿಧೇಯರಾಗಿರಬೇಕು. ವಿದ್ಯಾರ್ಥಿಗಳಿಗೆ ಅಗತ್ಯ ಸಿಇಟಿ, ಎನ್‌ಇಟಿ ತರಬೇತಿ ನೀಡಲಾಗುತ್ತಿದೆ ಎಂದರು.
ಪ್ರಾಚಾರ್ಯರಾದ ಎನ್.ಬಿ. ತಿಪ್ಪೇಸ್ವಾಮಿ, ಡಾ. ಸಂದೀಪ್, ಮುಖ್ಯ ಶಿಕ್ಷಕಿ ಪುಷ್ಪವಲ್ಲಿ, ರಕ್ಷಿತಾ, ಶಿವಕುಮಾರ್, ಭೈರೇಶ, ಪ್ರೀತಿ, ಅರ್ಚನಾ ಇತರರಿದ್ದರು.