ಮಲ್ಲಾಪುರ ಕೆರೆ ಸಂರಕ್ಷಣೆಗೆ ಒತ್ತಾಯಿಸಿ ಡಿಸಿಎಂಗೆ ಪತ್ರ

ಚಿತ್ರದುರ್ಗ ಹೊರವಲಯದಲ್ಲಿರುವ ಮಲ್ಲಾಪುರ ಕೆರೆ
ಚಿತ್ರದುರ್ಗ ಹೊರವಲಯದಲ್ಲಿರುವ ಮಲ್ಲಾಪುರ ಕೆರೆ
Published on

ಪ್ರಮುಖ ಮುಖ್ಯಾಂಶಗಳು

  • ಕೆರೆ ನೀರಿನ ಮಾಲಿನ್ಯ
  • ನಿವÊತ್ತ ಹಿರಿಯ ಭೂವಿಜ್ಞಾನಿ
  • ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
ಚಿತ್ರದುರ್ಗ: ಚಿತ್ರದುರ್ಗ ಹೊರವಲಯದ ಮಲ್ಲಾಪುರ ಕೆರೆ ನೀರಿನ ಮಾಲಿನ್ಯ ನಿಯಂತ್ರಿಸುವAತೆ ಸಂಬAಽಸಿದ ಅಽಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಕೋರಿ ನಿವÊತ್ತ ಹಿರಿಯ ಭೂವಿಜ್ಞಾನಿ, ಜಿಲ್ಲಾ ರೆಡ್ಡಿ ಜನಸಂಘದ ಕಾರ್ಯದರ್ಶಿ ಜೆ. ಪರಶುರಾಮ
ಅವರು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.
ಮಲ್ಲಾಪುರ ಕೆರೆಗೆ ನಿತ್ಯವೂ ನಗರದ ಕೊಳಚೆ ನೀರು ಸೇರುತ್ತಿದೆ. ಇದರಿಂದ ನೈಟ್ರೇಜ್, ಸಲ್ಪೇಟ್ಸ್, ಫ್ಲೋರೈಡ್ ಮತ್ತು ವಿಷಪೂರಿತ ವಸ್ತುಗಳು ಸೇರಿ ಕೆರೆ ನೀರು ಮಾಲಿನ್ಯಗೊಂಡಿದೆ. ಇದು ಸುತ್ತಮುತ್ತಲಿನ ಅಂತರ್ಜಲದ ಮಾಲಿನ್ಯಕ್ಕೂ ಕಾರಣವಾಗುತ್ತಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಮಳೆಗಾಲದಲ್ಲಿ ಕೆರೆ ಕೋಡಿ ಬಿದ್ದು ಹೆಚ್ಚಿನ ನೀರು ಗೋನೂರು, ದ್ಯಾಮವ್ವನಹಳ್ಳಿ, ಕಲ್ಲಹಳ್ಳಿ, ಮಧುರೆ ಮತ್ತು ರಾಣೆಕೆರೆ ಸೇರುತ್ತಿದೆ. ಆ ಪ್ರದೇಶಗಳ ಸುತ್ತ ಮುತ್ತಲಿನ ಅಂತರ್ಜಲ ಮಲೀವಾಗಿ ಕುಡಿಯಲು ಯೋಗ್ಯವಿಲ್ಲದಂತಾಗುತ್ತಿದೆ. ಲವಣಾಂಶ ಮತ್ತು ಖನಿಜಾಂಶ ನಿ ಗದಿಪಡಿಸಿರುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿವೆ.
ಆದ್ದರಿಂದ ಕೆರೆ ಮಾಲಿನ್ಯ ತಪ್ಪಿಸಲು, ಕೊಳಚೆ ನೀರನ್ನುವೈಜ್ಞಾನಿಕವಾಗಿ ಶುದ್ಧೀಕರಿಸಿ ಕೆರೆಗೆ ಬಿಡಬೇಕು. ಈ ಹಿನ್ನೆಲೆಯಲ್ಲಿ ಚಿತ್ರದುರ್ಗ ನಗರಸಭೆ ಹಾಗೂ ಜಿಲ್ಲಾಡಳಿತಕ್ಕೆ ಸೂಕ್ತ ನಿರ್ದೇಶನ ನೀಡುವಂತೆ ಪರಶುರಾಮ್ ಡಿಸಿಎಂಗೆ ಬರೆದಿರುವ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net