ಒಳ ಮೀಸಲಾತಿ ಗೊಂದಲ ಸರಿಪಡಿಸಲಿ

 ಚಿತ್ರದುರ್ಗ ಬಿಜೆಪಿ ಕಚೇರಿಯಲ್ಲಿ ಭಾನುವಾರ ಏರ್ಪಡಿಸಿದ್ದ ಡಾ.ಬಾಬುಜಗಜೀವನರಾಂ ಅವರ ಜನ್ಮ ದಿನಾಚರಣೆಯಲ್ಲಿ ಜಿ. ಎಚ್.ಮೋಹನ್‌ಕುಮಾರ್, ಪರಶುರಾಂ, ತಿಪ್ಪೇಸ್ವಾಮಿ, ಮಾಧುರಿ ಗಿರೀಶ್, ಧನಂಜಯ, ಸುರೇಶ್, ಎ.ಮುರಳಿ ಇತರರು ಇದ್ದರು.
ಚಿತ್ರದುರ್ಗ ಬಿಜೆಪಿ ಕಚೇರಿಯಲ್ಲಿ ಭಾನುವಾರ ಏರ್ಪಡಿಸಿದ್ದ ಡಾ.ಬಾಬುಜಗಜೀವನರಾಂ ಅವರ ಜನ್ಮ ದಿನಾಚರಣೆಯಲ್ಲಿ ಜಿ. ಎಚ್.ಮೋಹನ್‌ಕುಮಾರ್, ಪರಶುರಾಂ, ತಿಪ್ಪೇಸ್ವಾಮಿ, ಮಾಧುರಿ ಗಿರೀಶ್, ಧನಂಜಯ, ಸುರೇಶ್, ಎ.ಮುರಳಿ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಾ.ಬಾಬು ಜಗಜೀವನರಾಂ ಅವರ ಜನ್ಮ ದಿನಾಚರಣೆ
  • ಬಿಜೆಪಿ ಜಿಲ್ಲಾ ಕಚೇರಿ
  • ಮುಖ್ಯಮಂತ್ರಿ ಸಿದ್ದರಾಮಯ್ಯ
ಚಿತ್ರದುರ್ಗ: ಒಳ ಮೀಸಲಾತಿ ಜಾರಿಗೊಳಿಸುವಲ್ಲಿ ರಾಜಕಾರಣ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕರ‍್ಯದರ್ಶಿ ಜಿ.ಎಚ್.ಮೋಹನ್‌ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಪಕ್ಷದ ಜಿಲ್ಲಾ ಕಚೇರಿಯಲ್ಲಿ ಭಾನುವಾರ ಡಾ.ಬಾಬು ಜಗಜೀವನರಾಂ ಅವರ ಜನ್ಮ ದಿನಾಚರಣೆಯಲ್ಲಿ ಮಾತನಾಡಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ಡಾ.ಬಾಬು ಜಗಜೀವನರಾಂ ಅವರನ್ನು ಅಗೌರವದಿಂದ ನಡೆಸಿಕೊಂಡಿರುವ ಕಾಂಗ್ರೆಸ್ಸಿಗೆ, ಈ ಇಬ್ಬರು ಮಹನೀಯರ ಜಯಂತಿ ಆಚರಿಸುವ ನೈತಿಕತೆಯಿಲ್ಲ ಎಂದರು.
ರಾಜ್ಯ ಸರ್ಕಾರ ಮೊದಲು ಒಳ ಮೀಸಲಾತಿ ಗೊಂದಲಗಳನ್ನು ಸರಿಪಡಿಸಲಿ. ಬಾಬೂಜಿ ಅವರು ಬಾಲ್ಯದಲ್ಲೇ ಶೋಷಣೆ, ಅಸ್ಪÈ ಶ್ಯತೆಯ ನೋವುಂಡವರು. ರೈತರ ಕಷ್ಟಗಳನ್ನರಿತು ಕÊಷಿಗೆ ಹೆಚ್ಚಿನ ಒತ್ತು ಕೊಟ್ಟಿದ್ದರಿಂದಾಗಿ ಹಸಿರು ಕ್ರಾಂತಿಯ ಹರಿಕಾರರೆಂ ದು ಖ್ಯಾತಿ ಪಡೆದರು ಎಂದರು.
ಎಸ್‌ಸಿ ಮೋರ್ಚಾ ಜಿಲ್ಲಾಧ್ಯಕ್ಷ ಪರಶುರಾಂ, ನಿಕಟಪೂರ್ವ ಅಧ್ಯಕ್ಷ ತಿಪ್ಪೇಸ್ವಾಮಿ, ಉಪಾಧ್ಯಕ್ಷ ಧನಂಜಯ, ಎ.ಮುರಳಿ, ಮಾಧುರಿ ಗಿರೀಶ್, ಸುರೇಶ್, ನಾಗರಾಜ್, ನವೀನ್, ಪ್ರದೀಪ್, ಕಲ್ಲೇಶ್, ಬಸಣ್ಣ, ಹನುಮಂತ, ಪ್ರಸನ್ನ, ವಿರೂಪಾಕ್ಷ, ಕೆಂಚಪ್ಪ, ದುರುಗೇಶ್, ಕೆ.ಶಿವಣ್ಣಾಚಾರ್, ರಾಜಣ್ಣ, ಆರ್.ಶೋಭರಾಜ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net