ಚಿತ್ರದುರ್ಗದಲ್ಲಿ ಭಾನುವಾರ ಡಾ.ಚಾಂದಿನಿ ಖಲೀದ್ ಅವರ ಹುಡುಕಾಟ ಶುರುವಾಗಿದೆ ಕವನ ಸಂಕಲನವನ್ನು ಬಿ.ಕೆ.ರಹಮತ್‌ವು¯್ಲÁ ಬಿಡುಗಡೆಗೊಳಿಸಿದರು. ದಯಾ ಪುತ್ತೂರ್ಕರ್, ಶಾರದಾ ಜೈರಾಮï, ವೀಣಾ ಜಯರಾಮï, ಡಾ. ಚಾಂದಿನಿ ಖಲೀದ್ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಶಾಂತಿಯಿAದ ವಿಶ್ವವನ್ನೇ ಗೆಲ್ಲಬಹುದು
ಸಮಾಜ ಸುಧಾರಣೆಗಾಗಿ ಹುಡುಕಾಟ ಅಗತ್ಯ
ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ
ಚಿತ್ರದುರ್ಗ : ದೇಶದ ಜನರು ಸೌಹಾರ್ದ, ಸಹಬಾಳ್ವೆಯಿಂದ ಬದುಕುತ್ತಿರುವಾಗ ಅಮೆರಿಕ ಅಧ್ಯಕ್ಷ ಟ್ರಂಪ್ ನರಕಕ್ಕೆ ಹೋಲಿಸಿ, ಡ್ರU್ಸï ದಂಧೆಯಲ್ಲಿ ಮುಂಚೂಣಿಯಲ್ಲಿದೆ ಎಂದು ಹೀಯಾಳಿಸಿರುವುದಕ್ಕೆ ಇರಾನ್ ರಾಯಭಾರಿ ಭಾರತ ಸ್ವರ್ಗವಿದ್ದಂತೆ ಎಂಬುದಾಗಿ ತಿರುಗೇಟು ನೀಡಿz್ದÁರೆ. ಇದನ್ನು ಮೊದಲು ಅರಿತುಕೊಳ್ಳಬೇಕು ಎಂದು ವಕೀಲ ಬಿ.ಕೆ.ರಹಮತ್‌ವು¯್ಲÁ ಸಲಹೆ ನೀಡಿದರು.
ನಗರದ ರೋಟರಿ ಬಾಲಭವನದಲ್ಲಿ ಭಾನುವಾರ ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ, ಇನ್ನರ್‌ವ್ಹೀಲ್ ಕ್ಲಬ್ ಸಹಯೋಗದಲ್ಲಿ ಹಮ್ಮಿಕೊಂಡಿದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ, ಚುಟುಕು ಕವಿಗೋಷ್ಠಿ, ಡಾ.ಚಾಂದಿನಿ ಖಲೀದ್ ಅವರ ಹುಡುಕಾಟ ಶುರುವಾಗಿದೆ ಕನವ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದರು.
ಸರ್ವ ಜನಾಂಗದ ಶಾಂತಿಯ ತೋಟವಾದ ಭಾರತವನ್ನು ಹೀಯಾಳಿಸಿರುವುದು ತಪ್ಪು. ದೇಶದ ಪ್ರತಿಯೊಬ್ಬ ಪ್ರಜೆಯೂ ಇದನ್ನು ಪ್ರಬಲವಾಗಿ ಖಂಡಿಸಬೇಕಿದೆ. ಅಮೆರಿಕಾ-ಇರಾನ್ ನಡುವಿನ ಯುದ್ಧದಿಂದಾಗಿ ಸಾವಿರಾರು ಅಮಾಯಕರ ಜೀವಗಳು ಬಲಿಯಾಗಿವೆ. ಶಾಂತಿಯಿAದ ಮಾತ್ರವೇ ಜಗತ್ತನ್ನು ಗೆಲ್ಲಬಹುದು ಎಂದು ಸಲಹೆ ನೀಡಿದರು.
ಚಾಂದಿನಿ ವೃತ್ತಿಯಲ್ಲಿ ಹಿಂದಿ ಶಿಕ್ಷಕರು. ಆದರೆ, ಕನ್ನಡದ ಮೇಲೆ ಅಪಾರ ಅಭಿಮಾನ ಹೊಂದಿದ್ದಾರೆ. ಹೀಗಾಗಿ ಕವನ ಸಂಕಲನ ಗಳನ್ನು ಹೊರತರಲು ಸಾಧ್ಯವಾಗುತ್ತಿದೆ. ಸಮಾಜ ಸುಧಾರಣೆಯಲ್ಲಿ ಪ್ರತಿ ಹೆಜ್ಜೆಗೂ ಹುಡುಕಾಟ ನಡೆಸಬೇಕಿದೆ ಎಂದರು.
ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಸಂಸ್ಥಾಪಕಿ ದಯಾ ಪುತ್ತೂರ್ಕರ್ ಮಾತನಾಡಿ, ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಯಾವುದೇ ಜಾತಿ, ಧರ್ಮಕ್ಕೆ ಮೀಸಲಾದವರಲ್ಲ. ಸಂವಿಧಾನದ ಮೂಲಕ ಸಮಾನತೆಯ ಸಂದೇಶ ಸಮಾಜಕ್ಕೆ ನೀಡಿz್ದÁರೆ. ಅವರ ಆಶಯದಂತೆ ಶಿಕ್ಷಣ, ಸಂಘಟನೆ, ಹೋರಾಟಕ್ಕೆ ಪ್ರತಿಯೊಬ್ಬರು ಆದ್ಯತೆ ಕೊಡಬೇಕೆಂದು ಹೇಳಿದರು.
ವೇದಿಕೆ ಅಧ್ಯಕ್ಷೆ ಶಾರದಾ ಜೈರಾಮï, ಉಪಾಧ್ಯಕ್ಷ ಡಾ.ಬಸವರಾಜ್ ಹರ್ತಿ, ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ವೀಣಾ ಜಯರಾಮï, ಪ್ರಾಚಾರ್ಯ ಡಾ.ಪಿ.ಆರಡಿ ಮಲ್ಲಯ್ಯ ಕಟ್ಟೇರ, ಶಿಕ್ಷಣ ಇಲಾಖೆ ವಿಷಯ ಪರಿವೀಕ್ಷಕ ಸಿ.ರಂಗಾನಾಯ್ಕ್, ಡಾ.ಚಾಂದಿನಿ ಖಲೀದ್ ಇತರರಿದ್ದರು.