ಸಂತಾನದ ನಡುವೆ ಇರಲಿ ಅಂತರ

ಚಿತ್ರದುರ್ಗದಲ್ಲಿ ಬುಧವಾರ ಆರೋಗ್ಯ ಇಲಾಖೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಡಿಎಚ್‌ಒ ಡಾ.ಜಿ.ಪಿ. ರೇಣುಪ್ರಸಾದ್, ಡಾ.ಡಿ.ಎಂ. ಅಭಿನವ್, ಡಾ. ವಿನಯ್‌ರಾಜ್, ಡಾ. ಶಶಿಕಿರಣ್, ಡಾ. ರೇಖಾ ಇತರರು ಇದ್ದರು.
ಚಿತ್ರದುರ್ಗದಲ್ಲಿ ಬುಧವಾರ ಆರೋಗ್ಯ ಇಲಾಖೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಡಿಎಚ್‌ಒ ಡಾ.ಜಿ.ಪಿ. ರೇಣುಪ್ರಸಾದ್, ಡಾ.ಡಿ.ಎಂ. ಅಭಿನವ್, ಡಾ. ವಿನಯ್‌ರಾಜ್, ಡಾ. ಶಶಿಕಿರಣ್, ಡಾ. ರೇಖಾ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಿಎಚ್‌ಒ ಡಾ.ಜಿ.ಪಿ. ರೇಣುಪ್ರಸಾದ್ ಸಲಹೆ
  • ನೂತನ ಗರ್ಭ ನಿರೋಧಕ,
  • ಡಿಂಪಾ ಚುಚ್ಚುಮದ್ದು ಕುರಿತು ಕಾರ್ಯಾಗಾರ
ಚಿತ್ರದುರ್ಗ: ಒಂದು ಮಗುವಿನಿಂದ ಮತ್ತೊಂದು ಮಗುವಿಗೆ ಕೆಲ ವರ್ಷಗಳ ಅಂತರವಿರಲಿ ಎಂದು ಡಿಎಚ್‌ಒ ಡಾ.ಜಿ.ಪಿ.ರೇಣುಪ್ರ ಸಾದ್ ಪಾಲಕರಿಗೆ ಸಲಹೆ ನೀಡಿದರು.
ಜಿಲ್ಲಾ ಆರೋಗ್ಯಾಽಕಾರಿ ಕಚೇರಿಯಲ್ಲಿ ಬುಧವಾರ ತಾಲೂಕು ಆರೋಗ್ಯ ಶಿಕ್ಷಣ ಶಿಕ್ಷಣಾಽಕಾರಿ, ಶುಶ್ರೂಷಾಽಕಾರಿ ಹಾಗೂ ಪ್ರಾ ಥಮಿಕ ಆರೋಗ್ಯ ಸುರಕ್ಷತಾಽಕಾರಿಗಳಿಗೆ ಆಯೋಜಿಸಿದ್ದ ಕುಟುಂಬ ಕಲ್ಯಾಣ ಕಾರ್ಯಕ್ರಮದ ನೂತನ ಗರ್ಭ ನಿರೋಧಕ ಗಳು ಮತ್ತು ಡಿಂಪಾ ಚುಚ್ಚುಮದ್ದು ಬಗ್ಗೆ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ನೂತನ ಗರ್ಭ ನಿರೋಧಕಗಳನ್ನು ಬಳಸುವುದರೊಂದಿಗೆ ಒಂದು ಮಗುವಿನಿಂದ ಮತ್ತೊಂದು ಮಗುವಿನ ನಡುವೆ ಅಂತರ ಕಾ ಪಾಡಿಕೊಳ್ಳಬೇಕು. ಜನಸಂಖ್ಯೆ ನಿಯಂತ್ರಣ ಹಾಗೂ ತಾಯಿ, ಮಗುವಿನ ಆರೋಗ್ಯ ಕಾಪಾಡಲು ಕುಟುಂಬ ಯೋಜನೆ ಬಹು ಮುಖ್ಯ ಎಂದರು.
ಜಿಲ್ಲಾ ಆರ್‌ಸಿಎಚ್ ಅಽಕಾರಿ ಡಾ.ಡಿ.ಎಂ.ಅಭಿನವ್ ಮಾತನಾಡಿ, ಗುಣಮಟ್ಟದ ಹೆರಿಗೆ ಮತ್ತು ಸೇವಾ ಸೌಲಭ್ಯ ನೀಡಬೇಕು. ತು ರ್ತು ಸಂದರ್ಭಗಳಲ್ಲಿ ಔಷಧ ದಾಸ್ತಾನು ಕೊರತೆಯಾದರೆ ಜನ ಆರೋಗ್ಯ ಸಮಿತಿ, ಆರೋಗ್ಯ ರಕ್ಷಾ ಸಮಿತಿ ಅನುದಾನ ಬಳಕೆ ಮಾಡಿಕೊಂಡು ಸಾರ್ವಜನಿಕರಿಗೆ ಆರೋಗ್ಯ ಸೇವೆ ಒದಗಿಸಬೇಕು ಎಂದರು.
ಭರಮಸಾಗರ ಸಿಎಚ್‌ಸಿ ಹೆರಿಗೆ ಮತ್ತು ಸ್ತೀರೋಗ ತಜ್ಞ ಡಾ. ವಿನಯ್‌ರಾಜ್, ಜಿ.ಎನ್.ಕೆರೆ ಆಡಳಿತ ವೈದ್ಯಾಽಕಾರಿ ಡಾ. ಶಶಿ ಕಿರಣ್ ಹಾಗೂ ಡಾ. ರೇಖಾ ಅವರು ಉಪನ್ಯಾಸ ನೀಡಿದರು. ತಾಲೂಕು ಆರೋಗ್ಯ ಶಿಕ್ಷಣಾಽಕಾರಿ ಬಿ. ಮೂಗಪ್ಪ, ಶುಶ್ರೂಷಾಽ ಕಾರಿ ಸರಸ್ವತಿ, ಎಂಆ್ಯAಡ್‌ಡಿ ಮ್ಯಾನೇಜರ್ ಕುಮಾರ್, ಕಾರ್ಯಕ್ರಮ ಅನುಷ್ಠಾನ ಸಹಾಯಕಿ ಭವ್ಯಾ, ಸಿಬ್ಬಂದಿ ಶ್ರೀದೇವಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net