ಸ್ವಾಮಿನಾಥನ್ ವರದಿ ಜಾರಿಯಾಗಲಿ

ಚಿತ್ರದುರ್ಗದಲ್ಲಿ ಶನಿವಾರ ಏರ್ಪಡಿಸಿದ್ದ ನುಲೇನೂರು ಶಂಕರಪ್ಪ ಹಸಿರು ಪುರಸ್ಕಾರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹೋರಾಟಗಾರ್ತಿ ಎಸ್.ವರಲಕ್ಷಿ÷್ಮÃ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ದರ್ಶನ್ ಪುಟ್ಟಣ್ಣಯ್ಯ, ಬಡಲಗರಪುರ ನಾಗೇಂದ್ರ, ಬಿ.ಎ.ಲಿಂಗಾರೆಡ್ಡಿ, ಕಮಲಮ್ಮ ಶಂಕರಪ್ಪ, ಡಾ.ರವಿಶಂಕರ್ ಇದ್ದರು.
ಚಿತ್ರದುರ್ಗದಲ್ಲಿ ಶನಿವಾರ ಏರ್ಪಡಿಸಿದ್ದ ನುಲೇನೂರು ಶಂಕರಪ್ಪ ಹಸಿರು ಪುರಸ್ಕಾರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹೋರಾಟಗಾರ್ತಿ ಎಸ್.ವರಲಕ್ಷಿ÷್ಮÃ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ದರ್ಶನ್ ಪುಟ್ಟಣ್ಣಯ್ಯ, ಬಡಲಗರಪುರ ನಾಗೇಂದ್ರ, ಬಿ.ಎ.ಲಿಂಗಾರೆಡ್ಡಿ, ಕಮಲಮ್ಮ ಶಂಕರಪ್ಪ, ಡಾ.ರವಿಶಂಕರ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿಕೆ
  • ಹಸಿರು ಪುರಸ್ಕಾರ ಪ್ರಶಸ್ತಿ ಪ್ರದಾನ
  • ನುಲೇನೂರು ಶಂಕರಪ್ಪ ಪ್ರತಿಷ್ಠಾನ
ಚಿತ್ರದುರ್ಗ: ರೈತರ ಬದುಕು ಹಸನಾಗಲು ಡಾ.ಸ್ವಾಮಿನಾಥನ್ ವರದಿ ಜಾರಿಯಾಗಬೇಕು ಎಂದು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.
ನಗರದ ಲಿಡ್ಕರ್ ಭವನದಲ್ಲಿ ಶನಿವಾರ ರೈತ ನಾಯಕ ನುಲೇನೂರು ಶಂಕರಪ್ಪ ಪ್ರತಿಷ್ಠಾನದಿಂದ ಹಮ್ಮಿಕೊಂಡಿದ್ದ ಹಸಿರು ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ವರದಿ ಜಾರಿಯಾಗದೆ ವರ್ಷಕ್ಕೆ ೩ ಲಕ್ಷ ಕೋಟಿ ರೂ.ಗಳಂತೆ ಕಳೆದ ೯ ವರ್ಷಗಳಿಂದ ಅಂದಾಜು ೨೪ ಲಕ್ಷ ಕೋಟಿ ರೂ.ದೇಶದ ರೈತರಿಗೆ ನಷ್ಟವಾಗಿದೆ ಎಂದರು.
ಕೇಂದ್ರ ಸರ್ಕಾರ ೨೦ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಿರುವುದರಿಂದಲೂ ರೈತರು ನಷ್ಟ ಅನುಭವಿಸುವಂತಾಗಿದೆ. ಬ್ರಿಟಿಷ ರಿಂದಾಗಿ ಗ್ರಾಮೀಣ ಕೈಗಾರಿಕೆಗಳಿಗೆ ಪೆಟ್ಟು ಬಿದ್ದು, ದೇಶದ ಜಿಡಿಪಿ ಕುಸಿಯಿತು. ಸ್ವಾತಂತ್ರ‍್ಯ ನಂತರದಲ್ಲೂ ಪರಿಸ್ಥಿತಿ ಸುಧಾರಿ ಸಿಲ್ಲ. ರಚನಾತ್ಮಕ ಹೋರಾಟಗಳಿಂದ ಬದುಕು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದರು.
ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ೮೦ರ ದಶಕದಲ್ಲಿದ್ದ ಹೋರಾಟದ ಸೂರ್ತಿ ಮರೆಯಾಗಿದೆ. ರೈತ ಚಳವಳಿ ಉತ್ತುಂಗದಲ್ಲಿದ್ದ ಕಾಲದಲ್ಲಿ ದಲಿತ ಚಳವಳಿ ಕೂಡ ಉತ್ತುಂಗದಲ್ಲಿತ್ತು. ರೈತ, ದಲಿತ, ಕಾರ್ಮಿಕ ಚಳವಳಿಗಳು ಒಂ ದಾಗ ಬೇಕಿದೆ. ಕಾಮ್ರೆಡ್ ಎಸ್.ವರಲಕ್ಷಿ÷್ಮÃ ಅವರ ಹೋರಾಟದಿಂದ ಮಹಿಳಾ ಹೋರಾಟಕ್ಕೆ ಶಕ್ತಿ ಬಂದಿದೆ ಎಂದರು.
ಉಪಾಧ್ಯಕ್ಷ ಶಿವಾನಂದ ಕುಗ್ವೆ ಮಾತನಾಡಿ, ಚಂದ್ರಗುತ್ತಿಯಲ್ಲಿ ನಡೆಯುತ್ತಿದ್ದ ಬೆತ್ತಲೆ ಸೇವೆ ವಿರುದ್ಧ ಹೋರಾಟ ನಡೆಸಿದ್ದಾಗ ಸರ್ಕಾರ ಅನಿಷ್ಟ ಪದ್ಧತಿ ನಿಷೇಽಸಿತು. ದಲಿತ, ರೈತ ಸಂಘಟನೆಗಳು ಹಲವು ಹೋರಾಟಗಳ ಮೂಲಕ ನಿರಂತರವಾಗಿ ಪ್ರಭುತ್ವ ವನ್ನು ಎಚ್ಚರಿಸುವ ಕೆಲಸ ಮಾಡುತ್ತಿವೆ ಎಂದರು.
ಹಸಿರು ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹೋರಾಟಗಾರ್ತಿ ವರಲಕ್ಷಿ÷್ಮÃ, ೩೦ ವರ್ಷಗಳ ಹೋರಾಟದ ಜೀವನದಲ್ಲಿ ಎಂದಿಗೂ ಪ್ರಶಸ್ತಿ,ಪುರಸ್ಕಾರಗಳಿಗೆ ಒಪ್ಪಿರಲಿಲ್ಲ. ಆದರ್ಶ ರೈತ ನಾಯಕರೊಬ್ಬರ ಹೆಸರಲ್ಲಿ ಗುರುತಿಸುವುದಕ್ಕೆ ನನ್ನದೊಂದು ಲಾಲ್‌ಸಲಾಂ, ಪುರಸ್ಕಾರವನ್ನು ಅಂಗನವಾಡಿ, ಆಶಾ ಕರ‍್ಯಕರ್ತೆಯರಿಗೆ ಅರ್ಪಿಸುವೆ. ಸೇವಾ ಭದ್ರತೆ ಒದಗಿಸುವಂತೆ ಸರ್ಕಾರವನ್ನು ಒತ್ತಾಯಿ ಸುತ್ತ ಬಂದಿದ್ದೇವೆ. ಹಸಿರು,ನೀಲಿ, ಕೆಂಪು (ರೈತ,ದಲಿತ, ಕಾರ್ಮಿಕ) ಒಂದಾದರೆ ಪ್ರಭುತ್ವದ ಹತ್ತಿಕ್ಕುವ ನಡೆಗಳನ್ನು ಸಮರ್ಥ ಎದುರಿಸಬಹುದು ಎಂದರು.
ಪ್ರಾಸ್ತಾವಿಕ ಮಾತನಾಡಿದ ಚಿಕ್ಕಪ್ಪನಹಳ್ಳಿ ಷಣ್ಮುಖ, ರೈತ ಮುಖಂಡ ನುಲೇನೂರು ಶಂಕರಪ್ಪ, ದಲಿತ ನಾಯಕ ಎಂ.ಜಯಣ್ಣ ಹಾಗೂ ಸಾಮಾಜಿಕ ಹೋರಾಟಗಾರ ಮುರುಘರಾಜೇಂದ್ರ ಒಡೆಯರ್ ಹೆಸರಲ್ಲಿ ಪ್ರತಿ ವರ್ಷ ರಾಜ್ಯಮಟ್ಟದ ಪ್ರಶಸ್ತಿ ಕೊಡುವ ಚಿಂತನೆ ಇತ್ತು. ಈಗ ಶಂಕರಪ್ಪ ಹೆಸರಲ್ಲಿ ಪ್ರಥಮವಾಗಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಜಯಣ್ಣ, ಒಡೆಯರ್ ಹೆಸರಲ್ಲೂ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ, ಚಿಂತಕ ಜೆ.ಯಾದವರೆಡ್ಡಿ, ಜಿಲ್ಲಾ ಕಾರ್ಯ ನಿ ರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಿ.ಎಸ್.ವಿನಾಯಕ್ ತೊಡರನಾಳ್, ರೈತ ಮಖಂಡರಾದ ಕೆ.ಪಿ.ಭೂತಯ್ಯ, ಹಂಪಯ್ಯನ ಮಾಳಿಗೆ ಧನಂಜಯ, ಎ.ಗೋವಿಂದರಾಜು, ಯಶ್ವಂತ್, ಕಾರ್ಮಿಕ ಮುಖಂಡ ಜೆ.ಸಿ.ಸುರೇಶ್‌ಬಾಬು ಹಾಗೂ ಶಂಕರಪ್ಪ ಪುತ್ರ ಡಾ.ರವಿಶಂಕರ್ ಮಾತನಾಡಿದರು.
ಅರುಣ್‌ಕುಮಾರ್ ಕುರುಡಿ, ಬಸ್ತಿಹಳ್ಳಿ ಸುರೇಶ್‌ಬಾಬು, ಕೆ.ಸಿ.ಹೊರಕೇರಪ್ಪ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಮಲ್ಲಾಪುರ ತಿಪ್ಪೇ ಸ್ವಾಮಿ, ಕಮಲಮ್ಮ ನುಲೇನೂರು ಶಂಕರಪ್ಪ ಇದ್ದರು. ಜಡೇಕುಂಟೆ ಮಂಜುನಾಥ್ ಸ್ವಾಗತಿಸಿ, ನವೀನ್ ಮಸ್ಕಲ್ ವಂದಿಸಿದರು.
ಹೂವು ಮಳೆಗರೆದು ಗೌರವ
ಪ್ರಶಸ್ತಿ ಪುರಸ್ಕೃತ ವರಲಕ್ಷಿ÷್ಮÃ ಅವರನ್ನು ಹೂವಿನ ಮಳೆಗರೆಯುವ ಮೂಲಕ ವೇದಿಕೆಗೆ ಕರೆತರಲಾಯಿತು. ೨೫ ಸಾವಿರ ರೂ.ನಗದು,ನೆನಪಿನ -Àಲಕ ಹಾಗೂ ಮೊಳಕಾಲ್ಮೂರು ಕೈಮಗ್ಗದ ರೇಷ್ಮೆ ಸೀರೆಯನ್ನು ನೀಡಿ ಅವರು ಗೌರವಿಸಲಾಯಿತು.
-----
"

ಕೋಟ್..ತಮ್ಮ ತಂದೆ ಹೋರಾಟದಲ್ಲಿ ಎಂದಿಗೂ ತತ್ವ, ಸಿದ್ಧಾಂತ ದೂರ ಸರಿದವರಲ್ಲ. ಹಣಕ್ಕಾಗಿ ಯಾರೊಂದಿಗೂ ರಾಜಿಯಾದವರಲ್ಲ. ಕಡು ಕಷ್ಟದಲ್ಲೂ ಹಾದಿ ತಪ್ಪಿದವರಲ್ಲ. ರೈತ ಸಂಘದ ಎಲ್ಲ ಬಣಗಳು ಒಂದಾದರೆ ಸರ್ಕಾರಗಳನ್ನು ದಿಟ್ಟವಾಗಿ ಎದುರಿಸಲು ಸಾಧ್ಯವಾಗಲಿದೆ.

"

ಕೋಟ್..ಭದ್ರಾಮೇಲ್ದಂಡೆ ಅನುಷ್ಠಾನ ಯೋಜನೆ ಹೋರಾಟದಲ್ಲಿ ಶಂಕರಪ್ಪ ಮುಂಚೂಣಿ ನಾಯಕರಾಗಿದ್ದರು. ಯೋಜನೆಗೆ ಅನುದಾನ ನೀಡುವಲ್ಲಿ ರಾಜ್ಯಸರ್ಕಾರ ಉದಾಸೀನ ತೋರುತ್ತಿದೆ. ಸರ್ಕಾರದ ಬಳಿ ಹಣ ಇಲ್ಲದಿದ್ದರೆ ಬಾಂಡ್ ಬಿಡುಗಡೆ ಮಾಡಿಕೊಳ್ಳಲು ಜಿಲ್ಲೆ ಜನರು ಸಿದ್ಧರಿದ್ದಾರೆ.----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net