ಚಿತ್ರದುರ್ಗದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಕೋರ್ಟ್ಗಳ ಸರ್ಕಾರಿ ಅಭಿಯೋಜಕರನ್ನು ಪೊಲೀಸ್ ಇಲಾಖೆ ಯಿಂದ ಗೌರವಿಸಲಾಯಿತು. ಎಸ್‌ಪಿ ರಂಜಿತ್‌ಕುಮಾರ್ ಬಂಡಾರು, ಎನ್.ಎಸ್. ಮಲ್ಲಯ್ಯ, ಕೆ.ಬಿ. ನಾಗವೇಣಿ, ಶಂಶೀರ್‌ಆಲಿಖಾನ್, ಟಿ. ಮಂಜಣ್ಣ, ಮಂಜುನಾಥ್, ರಾಜು, ಚಿದಾನಂದ ಇದ್ದಾರೆ.
ಚಿತ್ರದುರ್ಗ: ಪ್ರಮುಖ ಅಪರಾಧ ಪ್ರಕರಣಗಳಲ್ಲಿ ಸರ್ಕಾರದ ಪರ ಸಮರ್ಥವಾಗಿ ವಾದ ಮಂಡಿಸುವ ಮೂಲಕ ಅಪರಾಽಗಳಿಗೆ ಶಿಕ್ಷೆಯಾಗುವಂತೆ ಕಾರ್ಯನಿರ್ವಹಿಸಿರುವ ಸರ್ಕಾರಿ ಅಭಿಯೋಜಕರು ಮತ್ತು ಸಹಾಯಕ ಸರ್ಕಾರಿ ಅಭಿಯೋಜಕರು ತಮ್ಮ ಈ ಉತ್ತಮ ಕಾರ್ಯವನ್ನು ಹೀಗೆ ಮುಂದುವರಿಸಲಿ ಎಂದು ಎಸ್‌ಪಿ ರಂಜಿತ್‌ಕುಮಾರ್ ಬಂಡಾರು ಆಶಿಸಿದರು.
ಜಿಲ್ಲೆಯಲ್ಲಿ ೨೦೨೬ನೇ ಸಾಲಿನ ಪ್ರಮುಖ ಪ್ರಕರಣಗಳಲ್ಲಿ ಸಮರ್ಥವಾಗಿ ವಾದ ಮಂಡಿಸಿ ಅಪರಾಽಗಳಿಗೆ ಶಿಕ್ಷೆ ಕೊಡಿಸಿದ ಅಭಿ ಯೋಜಕರಿಗೆ ಜಿಲ್ಲಾ ರಕ್ಷಣಾಽಕಾರಿ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಕಾನೂನು ಬಾಹಿರ ಕೃತ್ಯಗಳಲ್ಲಿ ಭಾಗಿಯಾಗುವ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಅಭಿಯೋಜಕರು ತಮ್ಮ ಕರ್ತವ್ಯವವನ್ನು ಯಶಸ್ವಿಯಾಗಿ ನಿರ್ವಹಿಸಲಿ ಎಂದರು.
ಈ ಸಂದರ್ಭದಲ್ಲಿ ಅವರು ಅಭಿಯೋಜಕರನ್ನು ಗೌರವಿಸಿ ಪ್ರಶಂಸನಾ ಪತ್ರ ವಿತರಿಸಿದರು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾ ಲಯದ ಸರ್ಕಾರಿ ಅಭಿಯೋಜಕ ಎನ್.ಎಸ್. ಮಲ್ಲಯ್ಯ,೨ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋ ಜಕಿ ಕೆ.ಬಿ. ನಾಗವೇಣಿ.
೧ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರ್ಕಾರಿ ಅಭಿಯೋಜಕ ಶಂಶೀರ್ ಆಲಿಖಾನ್, ಬಾಲ ನ್ಯಾಯ ಮಂಡಳಿ ಕಾನೂನು ಅಽಕಾರಿ(ಕಿರಿಯ)ಟಿ. ಮಂಜಣ್ಣ.
ಸಿಜೆಎಂ ನ್ಯಾಯಾಲಯದ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕ ಮಂಜುನಾಥ್, ೨ನೇ ಎಸಿಜೆ-ಜೆಎಂಎ-ïಸಿ ಸಹಾಯಕ ಸರ್ಕಾರಿ ಅಭಿಯೋಜಕ ರಾಜು, ಹಿರಿಯೂರು ಎಸಿಜೆ- ಜೆಎಂಎ-ïಸಿ ಸರ್ಕಾರಿ ಅಭಿಯೋಜಕ ಚಿದಾನಂದ ಅವರನ್ನು ಸನ್ಮಾನಿಸ ಲಾಯಿತು.
ಬಹುಮಾನ ವಿತರಣೆ:
ಜಿಲ್ಲಾ ಪೊಲೀಸ್‌ನಿಂದ ಮೊದಲ ಬಾರಿಗೆ ಇಲಾಖೆ ಅಽಕೃತ ಸಾಮಾಜಿಕ ಜಾಲತಾಣದಲ್ಲಿ ಮೇ ೧ರಿಂದ ೧೫ ರವರೆಗೆ ಆಯೋಜಿ ಸಿದ್ದ Summer Time Quiz-2026ರ ವಿಜೇತರಿಗೆ ಶುಕ್ರವಾರ ನಗರದ ಡಿಎಆರ್ ಸಭಾಂಗಣದಲ್ಲಿ ಆಯೋಜಿಸಿದ್ದ ಸಮಾ ರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಲಾಯಿತು.
ಈ ಕ್ವಿಜ್ ಕಾರ್ಯಕ್ರಮದಡಿ ನಿತ್ಯ ಬೆಳಗ್ಗೆ ೯ ಮತ್ತು ಸಂಜೆ ೬ಕ್ಕೆ ಕಾ ನೂನು ಅರಿವು, ಅಪರಾಧ ತಡೆಗಟ್ಟುವಿಕೆ ಹಾಗೂ ಸಂಚಾರ ನಿಯಮಗಳ ಕುರಿತಂತೆ ಜಾಗೃತಿ ಪ್ರಶ್ನೆಗಳನ್ನು ಕೇಳಲಾಗುತ್ತಿತ್ತು.
ಅಂದಾಜು ೬೦೦೦ ಜನರು ಪ್ರಶ್ನೆಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಉತ್ತರಿಸಿದ್ದು,ನಿತ್ಯ ನಾಲ್ವರು ವಿಜೇತರಂತೆ ೧೫ ದಿನಗಳ ಅವಽಯಲ್ಲಿ ಆಯ್ಕೆಯಾದ ೬೦ ಮಂದಿಗೆ ಎಸ್‌ಪಿ ರಂಜಿತ್‌ಕುಮಾರ್ ಬಂಡಾರು ಹೆಲ್ಮೆಟ್, ಪ್ರಶಂಸನಾ ಪತ್ರ ವಿತರಿಸಿದರು.
ಸುರಕ್ಷತಾ ಸಂಚಾರಕ್ಕೆ ಹೆಲ್ಮೆಟ್, ಸಂಚಾರಿ ನಿಯಮಗಳನ್ನು ದ್ವಿಚಕ್ರ ಮೋಟಾರು ವಾಹನ ಸವಾರರು ಹಾಗೂ ಇತರೆ ವಾಹ ನಗಳ ಸವಾರರಿಗೆ ಸಲಹೆ ನೀಡಿದರು. ಡಿಎಆರ್ ಡಿವೈಎಸ್‌ಪಿ ಶ್ರೀನಿವಾಸ್ ಮತ್ತಿತರ ಪೊಲೀಸ್ ಅಽಕಾರಿಗಳು ಇದ್ದರು.