

ಪ್ರಮುಖ ಮುಖ್ಯಾಂಶಗಳು
ಚಿತ್ರದುರ್ಗ:
ದೇಶ ಎಷ್ಟೇ ಪ್ರಗತಿ ಸಾಽಸಿದರೂ ಮಾನವ ಕಳ್ಳಸಾಗಾಣೆ ಸಮಾಜದಲ್ಲಿ ಕಪ್ಪುಚುಕ್ಕಿಯಾಗಿ ಕಾಡುತ್ತಿರುವ ಸಮಸ್ಯೆ ಯಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಽÃಶ ಜಿ.ಡಿ. ಮಹಾವರ್ಕರ್ ಕಳವಳ ವ್ಯಕ್ತಪಡಿಸಿದರು.
ಮಾನವ ಹಕ್ಕುಗಳ ರಕ್ಷಣೆ, ಸೌಹಾರ್ದಯುತ ವಾತಾವರಣ ನಿರ್ಮಾಣಕ್ಕೆ ಈ ಕಳ್ಳ ಸಾಗಾಣಿಕೆ ತಡೆಯುವುದು ಅತ್ಯಂತ ಪ್ರಮುಖ ವಾದುದು ಎಂದರು.
ಡಿಎಚ್‌ಒ ಡಾ. ಸುನೀಲ್‌ಕುಮಾರ್ ಮಾತನಾಡಿ, ತಂತ್ರಜ್ಞಾನ ಬೆಳೆದಂತೆ ಸೈಬರ್ ಅಪರಾಧ, ಮಾನವ ಕಳ್ಳಸಾಗಾಣಿಕೆಯಂತ ಹ ಗಂಭೀರ ಸವಾಲುಗಳು ಹೆಚ್ಚಾಗುತ್ತಿವೆ. ಹೀಗಾಗಿ ಜಾಲಕ್ಕೆ ಸಿಲುಕಿದಾಗ ಸಂತ್ರಸ್ತರು ತೀವ್ರ ಭೀತಿ, ಮಾನಸಿಕವಾಗಿ ದಿಕ್ಕು ತೋಚದ ಸ್ಥಿತಿಯಲ್ಲಿರುತ್ತಾರೆ.
ಅಂತವರನ್ನು ಶೀಘ್ರ ಗುರುತಿಸಿ, ಸೂಕ್ತ ರಕ್ಷಣೆ ನೀಡುವ, ಸಮಾಲೋಚನೆ ನಡೆಸಿ ಆತ್ಮಸ್ಥೆÊರ್ಯ ತುಂಬುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ತಾಲೂಕು ಮಟ್ಟದ, ಪಿಎಚ್‌ಸಿಗಳ ಸಿಬ್ಬಂದಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಸೂಚಿಸಿದರು.
ಸಾಮಾಜಿಕ ಪಿಡುಗು ನಿವಾರಣೆಗೆ ಬೇಕಿದೆ ಸಹಕಾರ
ಮಾನವ ಕಳ್ಳಸಾಗಾಣಿಕೆ ತಡೆಗೆ ಕಳಕಳಿ ಅಗತ್ಯ