ಜುಲೈ ಮೊದಲ ವಾರ ಬೆಂಗಳೂರಲ್ಲಿ ಪಪೂ ಕಾಲೇಜು ಉಪನ್ಯಾಸಕರ ಪ್ರತಿಭಟನೆ

ಪಿಎಂಜಿ ರಾಜೇಶ್
ಪಿಎಂಜಿ ರಾಜೇಶ್
Published on

ಪ್ರಮುಖ ಮುಖ್ಯಾಂಶಗಳು

  • ಪ್ರೌಢಶಾಲೆಗಳಲ್ಲಿ ಬೋಧನೆಗೆ ವಿರೋಧ
  • ಇಲಾಖೆಯನ್ನೇ ರದ್ದುಗೊಳಿಸುವ ಹುನ್ನಾರ ಆರೋಪ
  • ರಾಜ್ಯ ಸರ್ಕಾರದ ಪ್ರಸ್ತಾವನೆ
ಚಿತ್ರದುರ್ಗ: ಪದವಿ ಪೂರ್ವ ಕಾಲೇಜು ಉಪನ್ಯಾಸಕರನ್ನು ಪ್ರೌಢಶಾಲೆಗಳಿಗೆ ಬೋಽಸಲು ನಿಯೋಜಿಸುವ ರಾಜ್ಯ ಸರ್ಕಾರದ ಪ್ರಸ್ತಾವನೆ ವಿರೋಽಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜುಲೈ ಮೊದಲ ವಾರ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಧರಣಿ ನಡೆಸಲಾಗುವುದು ಎಂದು ರಾಜ್ಯ ಪದವಿ ಪೂರ್ವ ಪ್ರಾಂಶುಪಾಲರ ಸಂಘದ ಜಿಲ್ಲಾಧ್ಯಕ್ಷ ಪಿಎಂಜಿ ರಾಜೇಶ್ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ೯ ಮತ್ತು ೧೦ನೇ ತರಗತಿಗಳಲ್ಲಿ ಬೋಽಸಲು ಪ.ಪೂ. ಉಪನ್ಯಾಸಕ ರನ್ನು ನಿಯೋಜಿಸುವ ಉದ್ದೇಶದಿಂದ ಸರ್ಕಾರ ಮಂಡಿಸಿರುವ ಕರಡು ತಿದ್ದುಪಡಿ ಶೈಕ್ಷಣಿಕ ಹಿತದÊಷ್ಟಿಯಿಂದ ಸಮರ್ಥವಾಗಿಲ್ಲ.
ಇದು ರಾಷ್ಟೀಯ ಶಿಕ್ಷಣ ನೀತಿ ೨೦೨೦ರ ಮತ್ತು ರಾಷ್ಟಿçÃಯ ಶಾಲಾ ಶಿಕ್ಷಣ ಪಠ್ಯಕ್ರಮ ಚೌಕಟ್ಟು ೨೦೨೩ರ ಮೂಲ ಆಶಯಗ ಳಿಗೆ ವಿರುದ್ಧವಾಗಿದೆ. ಸರ್ಕಾರದ ಈ ನಿರ್ಧಾರ ಲಕ್ಷಾಂತರ ವಿದ್ಯಾರ್ಥಿಗಳು, ಸಾವಿರಾರು ಉಪನ್ಯಾಸಕರ ಮೇಲೆ ದುಷ್ಪರಿಣಾಮ ಬೀರಲಿದೆ. ಶಿಕ್ಷಣ ತಜ್ಞರು ಮತ್ತಿತರೊಂದಿಗೆ ಸಮಾಲೋಚಿಸದೆ ಏಕಪಕ್ಷೀಯ ನಿರ್ಧಾರಕ್ಕೆ ಮುಂದಾಗಿರುವುದು ಪ್ರಜಾಸತ್ತಾತ್ಮಕ ಸರ್ಕಾರದ ಲಕ್ಷಣವಲ್ಲ ಎಂದು ಹೇಳಿದರು.
ಸರ್ಕಾರ ಪ್ರಸ್ತಾವನೆಯನ್ನು ತಕ್ಷಣ ಹಿಂಪಡೆದು ಉಪನ್ಯಾಸಕರ ಸ್ವತಂತ್ರ ವೃಂದದ ಅಸ್ತಿತ್ವ ಮತ್ತು ಗೌರವವನ್ನು ರಕ್ಷಿಸಬೇಕು. ಶೈಕ್ಷಣಿಕ ಶ್ರೇಷ್ಠತೆ, ವಿಷಯ ಪರಿಣತಿ ಕಾಪಾಡಬೇಕು. ಇದರ ಸಮಗ್ರ ಅಧ್ಯಯನಕ್ಕೆ ಉನ್ನತ ಮಟ್ಟದ ತಜ್ಞರ ಸಮಿತಿ ರಚಿಸ ಬೇಕೆಂದು ಜಿಲ್ಲಾಧ್ಯಕ್ಷ ರಾಜೇಶ್ ಆಗ್ರಹಿಸಿದರು.
ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಬಸವರಾಜು ಮಾತನಾಡಿ, ಪಿಯುಸಿ ವಿದ್ಯಾರ್ಥಿಗಳಿಗೆ ಬೋಧನೆಗೆ ಸಮಯ ಸಾಕಾಗುತ್ತಿಲ್ಲ. ಅಂತಹುದರಲ್ಲಿ ೯,೧೦ನೇ ತರಗತಿ ವಿದ್ಯಾರ್ಥಿಗಳಿಗೆ ಬೋಽಸಬೇಕೆನ್ನುವುದು ಸರಿಯಲ್ಲ. ಇದರಿಂದ ಉಪನ್ಯಾಸಕರಿಗೆ ಹಿಂಬಡ್ತಿ ನೀಡಿದಂತೆ ಆಗುತ್ತದೆ.
ಈ ತರಗತಿಗಳ, ಪಿಯುಸಿ ಪಠ್ಯಕ್ರಮ ಹಾಗೂ ಬೋಧನೆ ಕ್ರಮಗಳು ಬೇರೆ ಬೇರೆಯಾಗಿವೆ ಎಂದು ಪ್ರತಿಪಾದಿಸಿದರು. ಸರ್ಕಾರದ ಉದ್ದೇಶಿತ ತೀರ್ಮಾವನ್ನು ವಿರೋಽಸಿ ಪತ್ರ ಚಳವಳಿ ನಡೆಸಲಾಗುವುದು. ಭವಿಷ್ಯದಲ್ಲಿ ಪ.ಪೂ.ಶಿಕ್ಷಣ ಇಲಾಖೆಯನ್ನೇ ರದ್ದು ಮಾಡುವ ಹುನ್ನಾರ ಇದಾಗಿದೆ.
ಇದಕ್ಕೆ ಈ ಪ್ರಸ್ತಾವನೆ ಪೀಠಿಕೆ ಆಗಿದೆ. ಈಗಾಗಲೇ ಈ ಇಲಾಖೆಯಿಂದ ಪರೀಕ್ಷಾ ವಿಭಾಗವನ್ನು ತೆಗೆದು ಎಸ್‌ಎಸ್‌ಎಲ್‌ಸಿ ಮಂಡ ಳಿಗೆ ಕೊಡಲಾಗಿದೆ. ಮುಂದಿನ ದಿನಗಳಲ್ಲಿ ನಮ್ಮ ಹುದ್ದೆ ಗಳಿಗೂ ಕುತ್ತು ಬರುವ ಸಂಭವವಿದೆ ಎಂದು ಆತಂಕ ವ್ಯಕ್ತ ಪಡಿಸಿದರು.
ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಹಲವು ವರ್ಷಗಳಿಂದÀ ಖಾಲಿ ಇರುವ ನೌಕರ ಹುದ್ದೆಗಳನ್ನು ಭರ್ತಿ ಮಾಡಿಲ್ಲ. ಅವರ ಕೆಲಸವನ್ನು ಸಸಉಪನ್ಯಾಸಕರೇ ಮಾಡುವ ಅನಿವಾರ್ಯತೆ ಇದೆ. ಒಂದೊAದು ತರಗತಿಗಳಲ್ಲಿ ಕನಿಷ್ಠ ೭೦-೩೨೦ ವಿದ್ಯಾರ್ಥಿ ಗಳು ಇರ ಬೇಕೆಂದು ಸೂಚಿಸಲಾಗಿದೆ. ಇದರಿಂದ ಬೋಧನಾ ಗುಣಮಟ್ಟ ಕುಸಿಯಲಿದೆ ಎಂದರು. ಪ್ರಾಂಶುಪಾಲರ ಹಾಗೂ ಉಪನ್ಯಾಸಕರ ಸಂಘಗಳ ಪದಾಽಕಾರಿಗಳಾದ ಕಾಂತರಾಜ್, ಕೆ.ಎಸ್. ವೀಣÁ, ನಾಗರಾಜ್, ರಘು, ವಸಂತ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net