ಚಿತ್ರದುರ್ಗದ ಸರಸ್ವತಿ ಕಾನೂನು ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಪದವಿ ಪ್ರದಾನ ಸಮಾರಂಭವನ್ನು ಗೋವಿಂದ ಎಂ. ಕಾರಜೋಳ ಉದ್ಘಾಟಿಸಿದರು. ಎಚ್.ಹನುಮಂತಪ್ಪ, ಫಾತ್ಯಾರಾಜನ್, ಡಿ.ಕೆ.ಶೀಲಾ,ಪ್ರೊ.ಎಂ. ಎಸ್. ಸುಧಾದೇವಿ ಇತರರು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಸಂಸದ ಗೋವಿಂದ ಎಂ. ಕಾರಜೋಳ ಅಭಿಮತ
ಸರಸ್ವತಿ ಕಾನೂನು ಕಾಲೇಜಿನಲ್ಲಿ ಪದವಿ ಪ್ರದಾನ ಸಮಾರಂಭ
ವಕೀಲರ ಮಹತ್ವ ಹೆಚ್ಚಾಗಿದೆ
ಚಿತ್ರದುರ್ಗ: ವಕೀಲರು ಧ್ವನಿ ಇಲ್ಲದವರ ಧ್ವನಿಯಾಗಿ ಸತ್ಯ, ಧರ್ಮದ ಪರವಾಗಿ ನಿಲ್ಲಬೇಕು ಎಂದು ಸಂಸದ ಗೋವಿಂದ ಎಂ. ಕಾರಜೋಳ ಹೇಳಿದರು.
ನಗರದ ಸರಸ್ವತಿ ಕಾನೂನು ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಪದವಿ ಪ್ರದಾನ, ಕಾನೂನು ವಿದ್ಯಾರ್ಥಿಗಳ ವೇದಿಕೆಯ ಕ್ರೀಡಾ ಮತ್ತು ಎನ್ನೆಸ್ಸೆಸ್ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಕ್ಷಿದಾರರ ಪರವಾಗಿ ವಾದಿಸುವುದರೊಂದಿಗೆ ದೇಶದಲ್ಲಿ ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ಹೊಣೆಗಾರಿಕೆ ವಕೀಲರ ಮೇಲಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ದೇಶಕ್ಕೆ ಕೊಡುಗೆಯಾಗಿ ಕೊಟ್ಟಿರುವ ಸಂವಿಧಾನದಲ್ಲಿ ಎಲ್ಲರಿಗೂ ಬದುಕುವ ಸಮಾನ ಹ ಕ್ಕಿದೆ.
ಚಿತ್ರದುರ್ಗದಲ್ಲಿ ಬಡವರು, ಶೋಷಿತ ವರ್ಗದವರು ವಕೀಲರಾಗಿದ್ದಾರೆಂದರೆ ಅದಕ್ಕೆ ಈ ಕಾಲೇಜು ಕಾರಣ. ದೇಶದಾದ್ಯಂತ ಅಂದಾಜು ೫.೫೩ ಕೋಟಿ ಪ್ರಕರಣಗಳು ಇನ್ನೂ ಇತ್ಯರ್ಥವಾಗಿಲ್ಲ. ಕರ್ನಾಟಕದಲ್ಲೂ ವ್ಯಾಜ್ಯಗಳ ಸಂಖ್ಯೆ ಹೆಚ್ಚಳದಿಂದ ಧಾರ ವಾಡ, ಕಲಬುರಗಿಯಲ್ಲಿ ಹೈಕೋರ್ಟ್ ನ್ಯಾಯಪೀಠ ಸ್ಥಾಪನೆಯಾಗಿದೆ ಎಂದು ಹೇಳಿದರು.
ಇಂದು ವಕೀಲರ ಮಹತ್ವ ಹೆಚ್ಚಾಗಿದೆ. ಕಾನೂನು ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯಾಗಿದೆ. ದಶಕಗಳ ಹಳೆಯ ಕಾನೂನುಗಳನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬದಲಾಯಿಸಿದೆ. ಕೃತಕ ಬುದ್ಧಿಮತ್ತೆ ಮೂಲಕ ಸುಪ್ರೀಂಕೋರ್ಟ್ ತೀರ್ಪನ್ನು ಕನ್ನಡಕ್ಕೆ ತರ್ಜುಮೆ ಮಾಡಬಹುದಾಗಿದೆ. ಇದರಿಂದ ಸಾಮಾನ್ಯ ಕಕ್ಷಿದಾರನಿಗೂ ತೀರ್ಪು ಅರ್ಥವಾಗಲಿದೆ ಎಂದರು.
ದೇಶದ ಪ್ರತಿಯೊಬ್ಬ ಬಡವನಿಗೂ ಕಾನೂನು ರಕ್ಷಾ ಕವಚವಾಗಬೇಕಿದೆ. ಕಾನೂನು ಪದವೀಧರರು ಮುಂದೆ ನ್ಯಾಯವಾದಿಗಳಾಗಿ ಸಮಾಜದ ಕಟ್ಟಕಡೆ ವ್ಯಕ್ತಿಗೂ ನ್ಯಾಯ ಕೊಡಿಸಬೇಕೆಂದು ಸಂಸದರು ಸಲಹೆ ನೀಡಿದರು.
ಸರಸ್ವತಿ ಎಜುಕೇಷನ್ ಸೊಸೈಟಿ ಕಾರ್ಯದರ್ಶಿ ಡಿ.ಕೆ. ಶೀಲಾ ಮಾತನಾಡಿ, ವೃತ್ತಿ ಯಶಸ್ವಿಗೆ ನಿರಂತರ ಪರಿಶ್ರಮ, ಸಮಯ, ಬದ್ಧತೆ ಇರಬೇಕು. ಪಾಲಕರ ಕನಸನ್ನು ನನಸು ಮಾಡಬೇಕು. ವೃತ್ತಿಯಲ್ಲಿ ಎದುರಾಗುವ ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸಬೇಕು ಎಂದರು.
ಪ್ರಾಚಾರ್ಯೆ ಪ್ರೊ.ಎಂ.ಎಸ್. ಸುಧಾದೇವಿ ಮಾತನಾಡಿದರು. ಸರಸ್ವತಿ ಕಾನೂನು ಎಜುಕೇಷನ್ ಸೊಸೈಟಿ ಅಧ್ಯಕ್ಷ, ರಾಜ್ಯಸಭೆ ಮಾಜಿ ಸದಸ್ಯ ಎಚ್.ಹನುಮಂತಪ್ಪ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ -Áತ್ಯರಾಜನ್, ಸದಸ್ಯ ಅನ್ವರ್, ಸಹಾಯಕ ಪ್ರಾಧ್ಯಾಪ ಕ ಡಾ.ಎನ್.ಡಿ.ಗೌಡ ಇತರರು ಇದ್ದರು.
ಪೂರ್ಣಚಂದ್ರ ತೇಜಸ್ವಿ ಪ್ರಾರ್ಥಿಸಿದರು. ಸಹಾಯಕ ಪ್ರಾಧ್ಯಾಪಕ ಡಾ.ಡಿ.ಬಿ.ರವಿಕುಮಾರ್ ಅವರು ಕಾಲೇಜಿನ ಕಾನೂನು ವೇದಿ ಕೆಯ ವಾರ್ಷಿಕ ವರದಿ ಮಂಡಿಸಿದರು. ಸಹಾಯಕ ಪ್ರಾಧ್ಯಾಪಕಿ ಎಂ. ಸಾಯಿನಿಕಿತಾ ವಂದಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಪಿ. ಸಿ. ಮುರುಗೇಶ್ ನಿರೂಪಿಸಿದರು. ಹೆಚ್ಚು ಅಂಕ ಪಡೆದ ಹಾಗೂ ಪಠ್ಯೇತರ ವಿಷಯಗಳಲ್ಲಿ ರಾಷ್ಟçಮಟ್ಟದಲ್ಲಿ ಭಾಗವಹಿಸಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕನಸು ನನಸಾಗಲಿದೆ
ಜುಲೈನಲ್ಲಿ ನಡೆಯುವ ಮುಂದಿನ ಸಂಸತ್ ಅಽವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆ ಪಾಸ್ ಆಗಿ ಜಾರಿಯಾದರೆ ಲೋಕ ಸಭೆಯಲ್ಲಿ ಮಹಿಳಾ-ಪುರುಷ ಸಂಸದರು ೫೦:೫೦ ಅನುಪಾತದಲ್ಲಿರುತ್ತದೆ. ಇದರಿಂದ ೧೨ನೇ ಶತಮಾನದಲ್ಲಿ ಬಸವಣ್ಣ ಹಾಗೂ ಅವರ ಸಮಕಾಲೀನರು ಕಂಡಿದ್ದ ಕನಸು ನನಸಾಗಲಿದೆ ಎಂದು ಗೋವಿಂದ ಕಾರಜೋಳ ಹೇಳಿದರು.