ಭೂ ಸುರಕ್ಷಾ ತಂತ್ರಾAಶ ಸದ್ದಿಲ್ಲದೆ ಕ್ರಾಂತಿ

ಚಿತ್ರದುರ್ಗದಲ್ಲಿ ಮಂಗಳವಾರ ಆಯೋಜಿಸಿದ್ದ ದಾಖಲೆಗಳ ಮಹತ್ವ, ಸಂರಕ್ಷಣೆ, ನಿರ್ವಹಣೆ ಹಾಗೂ ಸಾರ್ವಜನಿಕ ದಾಖಲೆಗಳ ನಿಯಮ ಕುರಿತ ಕಾರ್ಯಾಗಾರದಲ್ಲಿ ಎಡಿಸಿ ಬಿ.ಟಿ. ಕುಮಾರಸ್ವಾಮಿ, ಡಾ. ರಂಗಸ್ವಾಮಿ, ಡಾ. ಗವಿಸಿದ್ದಯ್ಯ, ಡಾ. ಜಯಸಿಂಹ, ಡಾ. ನೆಲ್ಕುದ್ರಿ ಸದಾನಂದಪ್ಪ, ಕೆ. ನಾರಾಯಣಬಾಬು ಇದ್ದರು.
ಚಿತ್ರದುರ್ಗದಲ್ಲಿ ಮಂಗಳವಾರ ಆಯೋಜಿಸಿದ್ದ ದಾಖಲೆಗಳ ಮಹತ್ವ, ಸಂರಕ್ಷಣೆ, ನಿರ್ವಹಣೆ ಹಾಗೂ ಸಾರ್ವಜನಿಕ ದಾಖಲೆಗಳ ನಿಯಮ ಕುರಿತ ಕಾರ್ಯಾಗಾರದಲ್ಲಿ ಎಡಿಸಿ ಬಿ.ಟಿ. ಕುಮಾರಸ್ವಾಮಿ, ಡಾ. ರಂಗಸ್ವಾಮಿ, ಡಾ. ಗವಿಸಿದ್ದಯ್ಯ, ಡಾ. ಜಯಸಿಂಹ, ಡಾ. ನೆಲ್ಕುದ್ರಿ ಸದಾನಂದಪ್ಪ, ಕೆ. ನಾರಾಯಣಬಾಬು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಎಡಿಸಿ ಬಿ.ಟಿ. ಕುಮಾರಸ್ವಾಮಿ ಬಣ್ಣನೆ
  • ಜಿಪಂನಲ್ಲಿ ದಾಖಲೆಗಳ ಮಹತ್ವ, ಸಂರಕ್ಷಣೆ, ನಿರ್ವಹಣೆ ಕುರಿತು ಕಾರ್ಯಾಗಾರ
  • ಡಿಜಿಟಲಿಕರಣ
ಚಿತ್ರದುರ್ಗ: ಕಂದಾಯ ಸಚಿವ ಕೃಷ್ಣಬೈರೇಗೌಡ ಅವರ ನೇತÊತ್ವದಲ್ಲಿ ಸರ್ಕಾರ ಭೂ ಸುರಕ್ಷಾ ತಂತ್ರಾAಶ ಅಭಿವೃದ್ಧಿಪಡಿಸಿದ್ದು, ಪಹಣಿ, ಕೈ ಬರಹದ ಪಹಣಿ, ೫ ಸ್ಟಾರ್ ದಾಖಲೆಗಳು, ಮ್ಯುಟೇಷನ್, ಭೂ ಮಂಜೂರಾತಿ ದಾಖಲೆಗಳನ್ನು ಡಿಜಿಟಲಿಕರಣಗೊಳಿ ಸಲಾಗುತ್ತಿದೆ ಎಂದು ಎಡಿಸಿ ಬಿ.ಟಿ. ಕುಮಾರಸ್ವಾಮಿ ಹೇಳಿದರು.
ಜಿಲ್ಲಾಡಳಿತ, ರಾಜ್ಯ ಪತ್ರಗಾರ ಮತ್ತು ಗ್ಯಾಜೆಟಿಯರ್ ಇಲಾಖೆಯಿಂದ ಜಿಪಂನಲ್ಲಿ ಮಂಗಳವಾರ ಆಯೋಜಿಸಿದ್ದ ದಾಖಲೆಗಳ ಮಹತ್ವ, ಸಂರಕ್ಷಣೆ, ನಿರ್ವಹಣೆ ಹಾಗೂ ಸಾರ್ವಜನಿಕ ದಾಖಲೆಗಳ ಅಽನಿಯಮ ೨೦೧೦ ಮತ್ತು ನಿಯಮಗಳು ೨೦೧೩ ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಭೂ ಸುರಕ್ಷಾ ತಂತ್ರಾAಶದಿAದ ಸಾರ್ವಜನಿಕರು ಭೂ ದಾಖಲೆಗಳಿಗೆ ಕಚೇರಿಗಳಿಗೆ ಅಲೆದಾಡುವುದು ತಪ್ಪಲಿದೆ. ಬೆರಳ ತುದಿಯಲ್ಲಿ ದಾಖಲೆಗಳು ಸಿಗಲಿದೆ. ಇದು ಸದ್ದಿಲ್ಲದ ಕ್ರಾಂತಿಯಾಗಿದೆ ಎಂದು ಎಡಿಸಿ ಬಣ್ಣಿಸಿದರು.
ಭೂ ಸುರಕ್ಷಾ ಅಡಿ ಪ್ರತಿ ದಾಖಲೆಯ ಎಲ್ಲ ಪುಟಗಳನ್ನು ಯಥಾವತ್ತಾಗಿ ಸ್ಕ್ಯಾನ್ ಮಾಡುವುದರ ಜತೆಗೆ, ಅದರ ನೈಜತೆಯನ್ನು ಕಚೇರಿ ಮುಖ್ಯಸ್ಥರ ಮುಖಾಂತರ ದÊಢೀಕರಿಸಲಾಗುತ್ತಿದೆ. ಈಗಾಗಲೇ ಸಾರ್ವಜನಿಕರಿಗೆ ಇದರ ಸೌಲಭ್ಯ ದೊರೆಯುತ್ತಿದೆ.
ದಾಖಲೆಗಳಿಗಾಗಿ ಯಾರೂ ಕಚೇರಿಗಳಿಗೆ ಅಲೆಯುವ ಅವಶ್ಯಕತೆ ಇಲ್ಲ. ೨೦೦೦ನೇ ಇಸವಿಯಲ್ಲಿ ಜಾರಿಗೆ ಬಂದ ಭೂಮಿ
ತಂತ್ರಜ್ಞಾನದAತೆ, ಈಗ ಸಾರ್ವಜನಿಕರು ಮೊ ಬೈಲ್‌ನಲ್ಲೇ ಪಹಣಿ, ಮ್ಯುಟೇಷನ್‌ಗಳನ್ನು ವೀಕ್ಷಿಸುವ ಸೌಲಭ್ಯ ಕಲ್ಪಿಸಲಾಗುತ್ತಿದೆ. ಆದ್ದರಿಂದ ಇಲಾಖೆ ಸಿಬ್ಬಂದಿ ದಾಖಲೆಗಳ ಮಹತ್ವ ಅರಿತು ಕೆಲಸ ಮಾಡಬೇಕು ಎಂದು ತಿಳಿಸಿದರು.
ಕಚೇರಿಗಳಲ್ಲಿ ಕಡತÀ ನಿರ್ವಹಣೆ ಮತ್ತು ಸಂರಕ್ಷಣೆ ವಿಚಾರದಲ್ಲಿ ಲೋಪ ಸಲ್ಲದು. ತಪ್ಪಾದರೆ ಮಾಹಿತಿ ಆಯೋಗದ ಮುಂದೆ ಅಽಕಾರಿಗಳು ಆಕ್ಷೇಪಣೆ ಎದುರಿಸುವುದು, ದಂಡ ಕಟ್ಟುವುದು ಹಾಗೂ ನ್ಯಾಯಾಲಯಗಳಲ್ಲಿ ತಲೆ ತಗ್ಗಿಸಿ ನಿಲ್ಲುವಂತಹ ಪ್ರಸಂಗ ಗಳು ಎದುರಾಗುತ್ತವೆ ಎಂದು ಎಚ್ಚರಿಸಿದರು.
ಸಾರ್ವಜನಿಕ ದಾಖಲೆಗಳ ಕಾಯ್ದೆಯ ಮಹತ್ವದ ಬಗ್ಗೆ ಅನೇಕರಿಗೆ ಇನ್ನು ಸರಿಯಾದ ಅರಿವಿಲ್ಲ. ವರ್ಗಾವಣೆಯಾದಂಥ ಸಂದರ್ಭ ದಲ್ಲಿ ಜಾರ್ಜ್ ಕೊಡುವಂಥವರು, ತೆಗೆದುಕೊಳ್ಳುವಂತವರು ನಿರ್ಲಕ್ಷ್ಯ ಮಾಡಬಾರದು. ರೆಕಾರ್ಡ್ಗಳ ಎಲ್ಲ ಹಂತದ ನೌಕರರು, ಅಽ ಕಾರಿಗಳ ಜವಾಬ್ದಾರಿ ಇದೆ ಎಂದರು.
ಜಿಪA ಕಾರ್ಯದರ್ಶಿ ಡಾ. ರಂಗಸ್ವಾಮಿ ಮಾತನಾಡಿದರು. ಕಡತಗಳ ಮಹತ್ವ ಹಾಗೂ ದಾಖಲೆಗಳ ಡಿಜಿಟಲೀಕರಣ ಕುರಿತು ಕರ್ನಾಟಕ ರಾಜ್ಯ ಪತ್ರಗಾರ ಮತ್ತು ಗ್ಯಾಜೆಟಿಯರ್ ಇಲಾಕೆ ನಿರ್ದೇಶಕ ಡಾ. ಗವಿಸಿದ್ದಯ್ಯ, ದಾಖಲೆಗಳ ಸಂರಕ್ಷಣಾ ವಿಧಾನ ಗಳು ಕುರಿತು ಹಿರಿಯ ಸಂಶೋಧಕ ಡಾ. ಜಯಸಿಂಹ, ಸಾರ್ವಜನಿಕ ದಾಖಲೆಗಳ ಅಽನಿಯಮ ೨೦೧೦ ಮತ್ತು ನಿಯಮಗಳು ೨೦೧೩ರ ಪರಿಚಯ ಮತ್ತು ದಾಖಲೆಗಳ ನಿರ್ವಹಣÉ ಕುರಿತು ಜಂಟಿ ನಿರ್ದೇಶಕ ಡಾ. ನೆಲ್ಕುದ್ರಿ ಸದಾನಂದಪ್ಪ, ಸೂಕ್ಷ÷್ಮ್ಮಚಿ ತ್ರೀಕರಣ ವಿಧಾನದಲ್ಲಿ ದಾಖಲೆಗಳ ಸಂರಕ್ಷಣೆ ಕುರಿತು ಕರ್ನಾಟಕ ರಾಜ್ಯ ಪತ್ರಗಾರ ಮತ್ತು ತಾಂತ್ರಿಕ ಅಽಕಾರಿ ಕೆ. ನಾರಾಯಣ ಬಾಬು ಉಪನ್ಯಾಸ ನೀಡಿದರು.
ಪಾರದರ್ಶಕತೆ ಸಾಧ್ಯ
ಇ-ಆಫೀಸ್ ವ್ಯವಸ್ಥೆಯನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸುವುದರಿಂದ ಮತ್ತು ದಾಖಲೆಗಳನ್ನು ನಿಯಮಾನುಸಾರ ವರ್ಗೀಕರಿಸಿ ಸಂರಕ್ಷಿಸುವುದರಿAದ ಸರ್ಕಾರಿ ವ್ಯವಸ್ಥೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಸಾಧ್ಯವಾಗಲಿದೆ ಎಂದು ಡಾ. ರಂಗಸ್ವಾಮಿ ಹೇಳಿದರು.
ಇದರಿಂದ ಅಽಕಾರಿಗಳ ಸ್ವಯಂ ರಕ್ಷಣೆಗೂ ಅನುಕೂಲವಾಗಲಿದೆ. ಇತ್ತೀಚೆಗೆ ಮಾಹಿತಿ ಆಯೋಗವು ಕಡತಗಳ ನಿರ್ವಹಣೆ ಲೋಪಕ್ಕಾಗಿ ಅಽಕಾರಿಯೊಬ್ಬರಿಗೆ ೨೫ ಸಾವಿರ ರೂ. ದಂಡ ವಿಽಸಿ, ಶಿಸ್ತು ಕ್ರಮಕ್ಕೆ ಶಿ-Áರಸು ಮಾಡಿದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net