

ಚಿತ್ರದುರ್ಗ: ಜಿಲ್ಲಾ ರಕ್ಷಣಾಧಿಕಾರಿ ರಂಜಿತ್‌ಕುಮಾರ್ ಬಂಡಾರು ಅವರನ್ನು ಬುಧವಾರ ರಾಜ್ಯ ಸರ್ಕಾರ ವರ್ಗಾವಣೆ ಮಾಡಿ ಆದೇಶಿಸಿದೆ. ಅವರ ಸ್ಥಾನಕ್ಕೆ ಬೆಂಗಳೂರು ಡಿಸಿಪಿ (ಆಡಳಿತ)ಯಾಗಿದ್ದ ಕುಶಾಲ್ ಚೌಕ್ಸೆ ಅವರನ್ನು ನೇಮಿಸಲಾಗಿದೆ. Kushal Choukse
ರಂಜಿತ್‌ಕುಮಾರ್ ಬಂಡಾರು ಅವರನ್ನು ಕುಶಾಲ್ ಚೌಕ್ಸೆ ಅವರು ಸೇವೆ ಸಲ್ಲಿಸುತ್ತಿದ್ದ ಹುದ್ದೆಗೆ ವರ್ಗಾಯಿಸಲಾಗಿದೆ.
ಮಧ್ಯಪ್ರದೇಶ ಮೂಲದ ಚೌಕ್ಸೆ ಅವರು 2018ರ ಬ್ಯಾಚ್, ಕರ್ನಾಟಕ ಕೇಡರ್‌ನ ಐಪಿಎಸ್ ಅಧಿಕಾರಿಯಾಗಿದ್ದಾರೆ.