ಕೇಂದ್ರೀಯ ವಿದ್ಯಾಲಯಕ್ಕೆ ಶೀಘ್ರ ಸ್ವಂತ ಕಟ್ಟಡ

ಚಿತ್ರದುರ್ಗದ ಕೇಂದ್ರೀಯ ಮಹಾವಿದ್ಯಾಲಯದಲ್ಲಿ ಶನಿವಾರ ವಿದ್ಯಾರ್ಥಿಗಳೊಟ್ಟಿಗೆ ಗೋವಿಂದ ಎಂ. ಕಾರಜೋಳ, ಲೀಲಾಧರ್ ಠಾಕೂರ್, ಲಿಂಗರಾಜ್, ಪರಶುರಾಮ್, ಪ್ರೇಮನಾಥ್, ಭರತ್ ಇತರರಿದ್ದರು.
ಚಿತ್ರದುರ್ಗದ ಕೇಂದ್ರೀಯ ಮಹಾವಿದ್ಯಾಲಯದಲ್ಲಿ ಶನಿವಾರ ವಿದ್ಯಾರ್ಥಿಗಳೊಟ್ಟಿಗೆ ಗೋವಿಂದ ಎಂ. ಕಾರಜೋಳ, ಲೀಲಾಧರ್ ಠಾಕೂರ್, ಲಿಂಗರಾಜ್, ಪರಶುರಾಮ್, ಪ್ರೇಮನಾಥ್, ಭರತ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ೮೦೦ ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ
  • ಸಂಸದ ಗೋವಿಂದ ಕಾರಜೋಳ ಭರವಸೆ
  • ಕೇಂದ್ರ ಶಿಕ್ಷಣ ಇಲಾಖೆಗೆ ಕೋರಿಕೆ
ಚಿತ್ರದುರ್ಗ: ತಾಲೂಕಿನ ಜಾಲಿಕಟ್ಟೆ ಬಳಿ ಮೀಸಲಿರುವ ೫ ಎಕರೆ ಜಾಗದಲ್ಲಿ ಶೀಘ್ರ ಕೇಂದ್ರೀಯ ಮಹಾವಿದ್ಯಾಲಯಕ್ಕೆ ಕಟ್ಟಡ ನಿರ್ಮಿಸಲಾಗುವುದು ಎಂದು ಸಂಸದ ಗೋವಿಂದ ಎಂ. ಕಾರಜೋಳ ಭರವಸೆ ನೀಡಿದರು.
ನಗರದ ಕೇಂದ್ರೀಯ ವಿದ್ಯಾಲಯಕ್ಕೆ ಶನಿವಾರ ಭೇಟಿ ನೀಡಿ ೨೦೨೬-೨೭ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ಮಾತನಾಡಿದರು.
ಕಟ್ಟಡ ನಿರ್ಮಾಣ ಕುರಿತಂತೆ ಈಗಾಗಲೇ ಸಮಗ್ರ ಯೋಜನಾ ವರದಿ ಸಿದ್ಧಪಡಿಸಲಾಗಿದೆ. ಶೀಘ್ರ ಅನುದಾನ ಮಂಜೂರಾತಿಗೆ ಕೇಂದ್ರ ಶಿಕ್ಷಣ ಇಲಾಖೆಗೆ ಕೋರಿಕೆ ಸಲ್ಲಿಸಲಾಗುವುದು. ಮುಂಬರುವ ದಿನಗಳಲ್ಲಿ ೮೦೦ ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಒದಗಿ ಸಲಾಗುವುದು ಎಂದು ಆಶ್ವಾಸನೆ ನೀಡಿದರು.
ದೇಶಾದ್ಯಂತ ೧೨೫೬ಕ್ಕೂ ಹೆಚ್ಚು ಕೇಂದ್ರಿಯ ವಿದ್ಯಾಲಯಗಳಿದ್ದು, ಒಟ್ಟು ೧೩.೫ ಲಕ್ಷ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಚಿತ್ರದುರ್ಗದಲ್ಲಿ ಪ್ರಸಕ್ತ ವರ್ಷ ಒಂದರಿAದ ೫ನೇ ತರಗತಿವರೆಗೆ ೨೦೦ ವಿದ್ಯಾರ್ಥಿಗಳ ದಾಖಲಾತಿ ಪೂರ್ಣಗೊಂಡು ಚಿತ್ರದು ರ್ಗದ ಸರ್ಕಾರಿ ವಿಜ್ಞ್ಞಾನ ಕಾಲೇಜಿನಲ್ಲಿ ತಾತ್ಕಾಲಿಕವಾಗಿ ಶಾಲೆ ಆರಂಭಿಸಲಾಗಿದೆ ಎಂದು ತಿಳಿಸಿದರು.
ಭಾರತೀಯ ರಕ್ಷಣಾ ಪಡೆ, ಸಶಸö ಪಡೆ, ಕೇಂದ್ರ ಸರ್ಕಾರದ ವರ್ಗಾವಣೆಗೊಳ್ಳುವ ಉದ್ಯೋಗಿಗಳ ಮಕ್ಕಳಿಗೆ ದೇಶದ ಯಾವು ದೇ ಭಾಗಕ್ಕೆ ಹೋದರೂ ಶಿಕ್ಷಣಕ್ಕೆ ತೊಂದರೆಯಾಗದAತೆ ಒಂದೇ ರೀತಿಯ ಪಠ್ಯಕ್ರಮ ಒದಗಿಸುವ ಉದ್ದೇಶದಿಂದ ಈ ಶಾಲೆಗ ಳು ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು.
ಶಿಕ್ಷಣ ಕ್ಷೇತ್ರದಲ್ಲಿ ಶ್ರೇಷ್ಠತೆ ಕಾಯ್ದುಕೊಳ್ಳುವುದು, ಉತ್ತಮ ಗುಣಮಟ್ಟದ ಶಿಕ್ಷಣ ನೀಡುವುದು, ದೇಶದ ವಿವಿಧ ರಾಜ್ಯ, ಭಾಷೆ ಮತ್ತು ಸಂಸ್ಕೃತಿಗಳ ಮಕ್ಕಳು ಒಟ್ಟಿಗೆ ಕಲಿಯುವುದರಿಂದ ಮಕ್ಕಳಲ್ಲಿ ಭಾರತೀಯತೆ ಮತ್ತು ರಾಷ್ಟಿçÃಯ ಭಾವೈಕ್ಯತೆ ಬೆಳೆಸುವುದು ಈ ಶಾಲೆಯ ಮುಖ್ಯ ಉದ್ದೇಶವಾಗಿದೆ ಎಂದರು.
ಕೇAದ್ರೀಯ ವಿದ್ಯಾಲಯದ ಪ್ರಾಚಾರ್ಯ ಮನಿಷ್ ಶೈನಿ, ಮುಖಂಡರಾದ ಲೀಲಾಧರ್ ಠಾಕೂರ್, ಮಾಡನಾಯಕನಹಳ್ಳಿ ಲಿಂಗ ರಾಜ್, ನಾಗರಾಜ್ ಬೇದ್ರೆ, ಪರಶುರಾಮ್, ಪ್ರೇಮನಾಥ್, ಭರತ್, ಸತೀಶ್, ಬ್ಯಾಲಹಾಳ್ ರವಿಕುಮಾರ್, ನಾಗೇಂದ್ರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net