ಕೆಂಪೇಗೌಡರ ದೂರದೃಷ್ಟಿ ಆಡಳಿತಗಾರರಿಗೆ ಆದರ್ಶ

ಚಿತ್ರದುರ್ಗದಲ್ಲಿ ಶನಿವಾರ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಕೆ.ಸಿ. ವೀರೇಂದ್ರಪಪ್ಪಿ ಬಹುಮಾನ ವಿತರಿಸಿದರು. ಬಿ.ಟಿ. ಕುಮಾರಸ್ವಾಮಿ, ಎಂ.ಕೆ. ತಾಜ್‌ಪೀರ್, ಆರ್. ಶಿವಣ್ಣ ಇತರರಿದ್ದರು.
ಚಿತ್ರದುರ್ಗದಲ್ಲಿ ಶನಿವಾರ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಕೆ.ಸಿ. ವೀರೇಂದ್ರಪಪ್ಪಿ ಬಹುಮಾನ ವಿತರಿಸಿದರು. ಬಿ.ಟಿ. ಕುಮಾರಸ್ವಾಮಿ, ಎಂ.ಕೆ. ತಾಜ್‌ಪೀರ್, ಆರ್. ಶಿವಣ್ಣ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ವೀರೇಂದ್ರಪಪ್ಪಿ ಅಭಿಮತ
  • ನಾಡಪ್ರಭು ಜಯಂತಿಯಲ್ಲಿ ಬಹುಮಾನ ವಿತರಣೆ
  • ಪರಿಸರ ಸಂರಕ್ಷಣೆಗೂ ಒತ್ತು
ಚಿತ್ರದುರ್ಗ: ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ದೂರದೃಷ್ಟಿ, ಆಡಳಿತ ವೈಖರಿ ಇಂದಿನ ರಾಜಕಾರಣಿಗಳು, ಅಽಕಾರಿಗಳು ಒಳಗೊಂಡು ಇಡೀ ಆಡಳಿತ ವರ್ಗಕ್ಕೆ ಸ್ಪೂರ್ತಿಯಾಗಿದೆ ಎಂದು ಶಾಸಕ ಕೆ.ಸಿ. ವೀರೇಂದ್ರಪಪ್ಪಿ ಹೇಳಿದರು.
ಜಿ¯್ಲÁಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ಇವುಗಳ ಆಶ್ರಯದಲ್ಲಿ ಡಿಸಿ ಕಚೇರಿ ಸಭಾಂಗಣದಲ್ಲಿ ಶನಿ ವಾರ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ ಅವರ ಜಯಂತ್ಯುತ್ಸವದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾ ಡಿದರು.
ವಿಜಯನಗರ ಸಾಮ್ರಾಜ್ಯದ ವೈಭವೋಪೇತ ನಗರಿಯಾಗಿದ್ದ ಹಂಪಿಯಿAದ ಪ್ರೇರಿತರಾಗಿದ್ದ ಕೆಂಪೇಗೌಡರು, ಆ ಮಾದರಿ ಯ ¯್ಲೆÃ ಬೆಂಗಳೂರನ್ನು ಸುಂದರ ನಗರಿಯನ್ನಾಗಿಸಲು ಸಂಕಲ್ಪ ಮಾಡಿ ಯಶಸ್ವಿಯಾದರು. ಕೇವಲ ವ್ಯಾಪಾರವಷ್ಟೇ ಅಲ್ಲದೆ, ಪರಿಸರ ಸಂರಕ್ಷಣೆಗೂ ಒತ್ತು ನೀಡಿದರು.
ನೀರಿನ ದಾಹ ನೀಗಿಸಲು ಬೃಹತ್ ಕೆರೆಗಳನ್ನೂ ನಿರ್ಮಿಸಿದರು. ಹೀಗಾಗಿ ಜಾಗತಿಕ ಮಟ್ಟದಲ್ಲಿ ಭಾರತದ ಸಿಲಿಕಾನ್ ಸಿಟಿ ಎಂದು ಹೆಮ್ಮೆಯಿಂದ ಕರೆಯುವ ಬೆಂಗಳೂರಿಗೆ ಭದ್ರ ಅಡಿಪಾಯ ಹಾಕಿದ ಮಹಾನುಭಾವ ಎಂದು ಬಣ್ಣಿಸಿದರು.
ಒಕ್ಕಲಿಗರ ಅಭಿವೃದ್ಧಿ ನಿಗಮದಿಂದ ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯಡಿ ಸುಮಾರು ೧೮ ಕ್ಕೂ ಹೆಚ್ಚು ಅರ್ಹ -Àಲಾನುಭವಿಗಳಿಗೆ ಆರ್ಥಿಕ ನೆರವು ನೀಡಲಾಗಿದೆ.
ಅದೇ ರೀತಿ ಗಂಗಾ ಕಲ್ಯಾಣ ಯೋಜನೆಯಡಿ ೧೯ -Àಲಾನುಭವಿಗಳಿಗೆ ಉಚಿತ ಕೊಳವೆಬಾವಿ ಸೌಲಭ್ಯ ಕಲ್ಪಿಸಿಕೊಡಲಾಗಿದೆ. ಸರ್ಕಾರದ ಯೋಜನೆಗಳನ್ನು ಅರ್ಹರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಎಡಿಸಿ ಬಿ.ಟಿ. ಕುಮಾರಸ್ವಾಮಿ ಮಾತನಾಡಿ, ಕೆಂಪೇಗೌಡರು ನಾಡಪ್ರಭು ಮಾತ್ರವಲ್ಲ. ಸಮರ್ಥ ಆಡಳಿತಗಾರ, ಅತ್ಯಂತ ದೂರ ದೃಷ್ಟಿಯುಳ್ಳ ನಾಯಕರಾಗಿದ್ದರು. ಮೂಲತಃ ಕೃಷಿಕರಾಗಿದ್ದ ಅವರು ವ್ಯಾಪಾರಕ್ಕೂ ಒತ್ತು ನೀಡಿದರು. ನಗರದಲ್ಲಿ ವಿವಿಧ ವೃತ್ತಿ ಗಳಿಗೆ ಅನುಗುಣವಾಗಿ ಪ್ರತ್ಯೇಕ ಪೇಟೆಗಳನ್ನು ನಿರ್ಮಿಸಿದ್ದು, ಕೆರೆ-ಕಟ್ಟೆಗಳನ್ನು ಕಟ್ಟಿಸಿದ್ದು, ಅವರ ಜನಪರ ಕಾಳಜಿಗೆ ಸಾಕ್ಷಿಯಾಗಿವೆ ಎಂದರು.
ಬೆAಗಳೂರು ಅಭಿವೃದ್ಧಿ ಪ್ರಾಽಕಾರ ಪರಿಸರ ಸಂರಕ್ಷಣೆ ದೃಷ್ಟಿಯಿಂದ ೧೫ ಲಕ್ಷ ಗಿಡ ನೆಡುವ ಬೃಹತ್ ಅಭಿಯಾನಕ್ಕೆ ಮುಂದಾ ಗಿದೆ. ಉದ್ಯಾನ ನಗರಿಯಯಲ್ಲಿ ಹಸಿರು ಕಾಪಾಡುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಸಿöÃರೋಗ ಮತ್ತು ಪ್ರಸೂತಿ ತe್ಞÉ ಡಾ.ಎಸ್. ಸೌಮ್ಯಾ ಮಾತನಾಡಿ, ದೇಶದಲ್ಲಿ ಅತ್ಯುನ್ನತ ವ್ಯಾಪಾರ ಕೇಂದ್ರ ಹಾಗೂ ತಾಂತ್ರಿಕ ಕೌಶಲದ ಕೇಂದ್ರವಾಗಿ ಬೆಳೆದಿರುವ ಬೆಂಗಳೂರಿನ ಯಶಸ್ಸಿಗೆ ಕೆಂಪೇಗೌಡರೇ ಕಾರಣ ಎಂದು ತಿಳಿಸಿದರು.
ವಿದ್ಯಾರ್ಥಿ ಸ್ನೇಹಿ ನಗರವಾಗಿ ಹೊರಹೊಮ್ಮಿರುವ ಬೆಂಗಳೂರು ಇಂದು ಜಾಗತಿಕ ಮಟ್ಟದ ಅತ್ಯುತ್ತಮ ನಗರಗಳ ಪಟ್ಟಿಯಲ್ಲಿ ೮೧ ನೇ ಸ್ಥಾನ ಪಡೆದಿದೆ. ಇದಕ್ಕೆ ಅಡಿಪಾಯ ಹಾಕಿದ ಕೆಂಪೇಗೌಡರು ಕೇವಲ ವೀರ ಯೋಧ ಮಾತ್ರವಲ್ಲ. ಅತ್ಯುತ್ತಮ ಆರ್ಥಿಕ ಚಿಂ ತಕ, ಮುತ್ಸದ್ದಿ ನಾಯಕ.
೧೬ನೇ ಶತಮಾನದಲ್ಲೇ ಯೋಜನಾಬದ್ಧ ಕನಸನ್ನು ನನಸು ಮಾಡಿದ ಮಹಾಪುರುಷ ಎಂದು ಬಣ್ಣಿಸಿದರು. ಕೆಂಪೇಗೌಡರ ಪರಿ ಶ್ರಮ, ಬದ್ಧತೆ ಹಾಗೂ ನೈತಿಕತೆಯ ವ್ಯಕ್ತಿತ್ವ ಇಂದಿನ ಆಡಳಿತಗಾರರಿಗೆ ಮಾದರಿ ಎಂದರು.
ಜಯAತ್ಯುತ್ಸವ ಪ್ರಯುಕ್ತ ಶಿಕ್ಷಣ ಇಲಾಖೆಯಿಂದ ಕೆಂಪೇಗೌಡರ ಜೀವನ ಮತ್ತು ಸಾಧನೆ ಕುರಿತು ಆಯೋಜಿಸಿದ್ದ ಪ್ರಬಂಧ, ಕವನ ವಾಚನ, ಚಿತ್ರಕಲೆ ಹಾಗೂ ಆಶು ಭಾಷಣ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗನ್ನು ಪುರಸ್ಕರಿಸಲಾಯಿತು.
ಕೂಡಾ ಅಧ್ಯಕ್ಷ ಎಂ.ಕೆ. ತಾಜ್‌ಪೀರ್, ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಽಕಾರದ ಜಿ¯್ಲÁಧ್ಯಕ್ಷ ಆರ್. ಶಿವಣ್ಣ, ಉಪಾಧ್ಯಕ್ಷ ಡಿ. ಎನ್. ಮೈಲಾರಪ್ಪ, ಎಸಿ ಡಾ.ಕೆ.ಜೆ. ಕಾಂತರಾಜ್, ತಹಶೀಲ್ದಾರ್ ಬಿ.ಎಂ. ಗೋವಿಂದರಾಜ್, ಬಿಇಒ ಗಿರಿಜಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ್, ಜಿ¯್ಲÁ ಒಕ್ಕಲಿಗರ ಸಂಘದ ಅಧ್ಯಕ್ಷ ಜಿ.ಪಿ. ಚೇತನ್, ಕಾ ರ್ಯದರ್ಶಿ ಎಸ್. ಜಗನ್ನಾಥ್, ಲಕ್ಷಿ÷್ಮÃಕಾಂತ್, ಕಂದಿಕೆರೆ ಸುರೇಶ್‌ಬಾಬು, ಪ್ರಸನ್ನ, ಶಬೀನಾ ಬಾನು, ಡಾ. ನವೀನ್ ಮಸ್ಕಲ್ ಇತರರು ಇದ್ದರು.
ಕೋಟ್ಯಂತರ ಜನರಿಗೆ ಉದ್ಯೋಗದ ನೆಲೆಯಾದ ಬೆಂಗಳೂರು
ನಾಡಪ್ರಭು ಕೇಂಪೇಗೌಡರು ನಿರ್ಮಿಸಿದ ಬೆಂಗಳೂರು ಇಂದು ನಿರುದ್ಯೋಗಿಗಳು, ಕೂಲಿ ಕಾರ್ಮಿಕರು ಸೇರಿ ಕೋಟ್ಯಂತರ ಜನರಿಗೆ ಉದ್ಯೋಗದ ನೆಲೆಯಾಗಿದೆ ಶಾಸಕ ಟಿ. ರಘುಮೂರ್ತಿ ಹೇಳಿದರು.
ಚಳ್ಳಕೆರೆ ತಾಲೂಕು ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ ಜಯಂತ್ಯುತ್ಸವದಲ್ಲಿ ಮಾತನಾಡಿದರು.
೧೬ ನೇ ಶತಮಾನದಲ್ಲೆ ಕೆಂಪೇಗೌಡರ ದೂರದೃಷ್ಟಿಯಿಂದ ನಿರ್ಮಾಣಗೊಂಡ ಬೆಂಗಳೂರು ಪ್ರಸ್ತುತ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಕೆಂಪೇಗೌಡರ ಆಡಳಿತ ಸಮಾನತೆಯ ಪ್ರತೀಕವಾಗಿತ್ತು. ಪ್ರತಿ ಸಮುದಾಯಗಳ ಹಿತ ಕಾಪಾಡುವ, ಕೃಷಿಗೆ ಉತ್ತೇಜನ ನೀಡುವ ಉದ್ದೇಶದಿಂದ ಕೆರೆಕಟ್ಟೆಗಳನ್ನು ನಿರ್ಮಿಸಿದ್ದಾರೆ. ಅವರ ಕಾಲದಲ್ಲಿ ಸಾಕಷ್ಟು ದೇವಾಲಯಗಳು ತಲೆ ಎತ್ತವೆ ಎಂದು ಹೇಳಿದರು.
ಮಾತಿಗೆ ಬದ್ದ:
ಪರಶುರಾಮಪುರವನ್ನು ತಾಲೂಕು ಕೇಂದ್ರವಾಗಿ ಘೋಷಣೆ ಮಾಡಿಸದಿದ್ದಲ್ಲಿ ಮುಂದಿನ ಚುನಾವಣೆಯಲ್ಲಿ ಸ್ವರ್ಧೆ ಮಾಡುವುದಿಲ್ಲ ಎಂದು ಕಳೆದ ವಿಧಾನ ಸಭಾ ಚುನಾವಣೆ ಪ್ರಚಾರದಲ್ಲಿ ಗೋಸಿಕೆರೆ, ಚೌಳೂರು ಭಾಗದಲ್ಲಿ ಹೇಳಿರುವ ಮಾತಿಗೆ ಈಗಲೂ ಬದ್ದ ನಿದ್ದೇನೆ. ಈ ಕುರಿತು ಸದನಲ್ಲೂ ಪ್ರಸ್ತಾಪ ಮಾಡಿದ್ದೇನೆ.
ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕಂದಾಯ ಸಚಿವ ಡಾ. ಜಿ.ಪರಮೇಶ್ವರ ಅವರಿಗೆ ಮನವರಿಕೆ ಮಾಡಿಕೊಟ್ಟು ತಾಲೂಕು ಕೇಂದ್ರ ಮಾಡಿಸುವುದು ಶತಸಿದ್ದ ಎಂದು ಹೇಳಿದರು.
ನಗರದ ಎಪಿಎಂಸಿ ಬಳಿ ಕೆಂಪೇಗೌಡ ವೃತ್ತ ಮತ್ತು ನಗರದಲ್ಲಿ ಕೆಂಪೇಗೌಡ ಭವನ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು ಎಂದು ಹೇಳಿದರು.
ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಸ್. ಕೇಶವ ಮೆಡಿಕಲï ಮಾತನಾಡಿ, ಬರದ ತಾಲೂಕಿನಲ್ಲಿ ವೇದಾವತಿ ನದಿಗೆ ಐದಾರು ಚೆಕ್ ಡ್ಯಾಂ ನಿರ್ಮಿಸಿ, ೦.೨೫ ಟಿಎಂಸಿ ನೀರು ಹರಿಸುವ ಕಾರ್ಯದಿಂದ ಶಾಸಕ ರಘುಮೂರ್ತಿ ಅಧುನಿಕ ಭಗೀರಥನಂತೆ ಕಾಣುತ್ತಾರೆ.
ಕ್ಷೇತ್ರದಲ್ಲಿ ಇಂಜಿನಿಯರಿAಗ್ ಕಾಲೇಜು, ಮಿನಿ ವಿಧಾನ ಸೌಧ ರೀತಿಯಲ್ಲಿ ತಾಲೂಕು ಕಚೇರಿ, ಬೃಹತ್ ಕಟ್ಟಡಗಳು ಮತ್ತು ರಸ್ತೆ ವಿಸ್ತರಣೆ ಕಾಮಗಾರಿಗಳನ್ನು ನಡೆಸಿರುವ ಶಾಸಕರು ಕೆಂಪೇಗೌಡರ ಚಿಂತನೆಯAತೆ ನಡೆಯುತಿದ್ದಾರೆ. ಕಳೆದ ಚುನಾವಣೆಯಲ್ಲಿ ಮಾತುಕೊಟ್ಟಂತೆ ಪರಶುರಾಮಪುರವನ್ನು ತಾಲೂಕು ಕೇಂದ್ರ ಮಾಡಿಸಬೇಕು. ನಗರದಲ್ಲಿ ಕೆಂಪೇಗೌಡರ ಹೆಸರಿನ ವೃತ್ತ ಮತ್ತು ಭವನ ನಿರ್ಮಿಸಬೆಕು ಎಂದು ಮನವಿ ಮಾಡಿದರು.
ವಿಶೇಷ ಉಪನ್ಯಾಸ ನೀಡಿದ ನಿವೃತ್ತ ಪ್ರಾಚಾರ್ಯ ಡಾ.ಸಿ. ಶಿವಲಿಂಗಪ್ಪ, ವಿಜಯನಗರದ ಸಾಮಂತ ರಾಜನಾಗಿದ್ದ ಕೆಂಪೇ ಗೌಡರು ವ್ಯಾಪಾರೋದ್ಯಮದ ದೃಷ್ಟಿಯಿಂದ ನಿರ್ಮಿಸಿದ ಬೆಂಗಳೂರು ಇಂದು ಬೃಹತ್ ನಗರವಾಗಿದೆ. ಆಯಗಾರರ ಹಿತದಂತೆ ಗ್ರಾಮಗಳು, ರಾಜಬೀದಿಗಳು, ದ್ವಾರಬಾಗಿಲು, ಮಾರುಕಟ್ಟೆ, ಕೆರೆಕಟ್ಡೆಗಳನ್ನು ಕಟ್ಟಿಸಿದ ಕೆಂಪೇಗೌಡರ ಆದರ್ಶಗಳನ್ನು ಜನಪದರು ಹಾಡು ಕಟ್ಟಿ ಸ್ಮರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಮುಖಂಡ ಹೆಗ್ಗೆರೆ ಆನಂದಪ್ಪ, ಗ್ಯಾರಂಟಿ ಸಮಿತಿ ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ ಮಾತನಾಡಿದರು. ಗ್ರೇಡ್ ೨ ತಹಸೀಲ್ದಾರ್ ಬಿ. ಆರ್.ಮುನಿವೆಂಕಟಪ್ಪ, ನಿವೃತ್ತ ಪ್ರಾಚಾರ್ಯ ಎಂ. ರವೀಶ್, ಕೆ. ವೀರಭದ್ರಯ್ಯ, ತಬಲ ರಂಗಸ್ವಾಮಿ, ಬಿ.ಟಿ. ರಮೇಶ್‌ಗೌಡ, ಕಲಮರಹಳ್ಳಿ ಶಿವಣ್ಣ, ಕಾಪರಹಳ್ಳಿ ಮಹಾಲಿಂಗಪ್ಪ, ಬೆಳೆಗೆರೆ ಚಂದ್ರಣ್ಣ ಇದ್ದರು.
ನಾಡಪ್ರಭು ಕೆಂಪೇಗೌಡರ ಕಾರ್ಯಗಳು ಶಾಶ್ವತ
ಕೃಷಿ ಸಂಸ್ಕೃತಿಯ ಮಹಾಪೋಷಕರಾಗಿದ್ದ ನಾಡಪ್ರಭು ಕೆಂಪೇಗೌಡರು ಸಮಾಜದ ಕಟ್ಟಕಡೆ ವ್ಯಕ್ತಿಗಳ ಅನುಕೂಲಕ್ಕೆ ಕೆರೆಕಟ್ಟೆ ಕಟ್ಟಿಸಿ ಕುಡಿಯುವ ನೀರು ಹಾಗೂ ನೀರಾವರಿಗೆ ವಿಶೇಷ ಆದ್ಯತೆ ನೀಡಿದ್ದು ಸ್ಮರಣೀಯ ಎಂದು ತಾಪಂ ಮಾಜಿ ಸದಸ್ಯೆ ಜಿ. ಕಲ್ಪ ನಾ ಹೇಳಿದರು.
ಹಿರಿಯೂರು ತಾಲೂಕಿನ ಖಂಡೇನಹಳ್ಳಿಯಲ್ಲಿ ಶನಿವಾರ ನಾಡಪ್ರಭು ಕೆಂಪೇಗೌಡ ಯುವ ಸೇನೆ ಆಯೋಜಿಸಿದ್ದ ಕೆಂಪೇಗೌಡ ಜಯಂತ್ಯುತ್ಸವದಲ್ಲಿ ಮಾತನಾಡಿದರು.
ಕೆಂಪೇಗೌಡರು ದೂರದೃಷ್ಟಿಯ ಜನಪರ ಕಾಳಜಿಯ ಆಡಳಿತಗಾರರಾಗಿದ್ದರು. ಸುಗಮ ಆಡಳಿತ ಹಾಗೂ ಎಲ್ಲ ಸಮುದಾಯ ಗಳಿಗೂ ಆದ್ಯತೆ ನೀಡುವ ಉದ್ದೇಶದಿಂದ ತರಗುಪೇಟೆ, ಬಳೇಪೇಟೆ, ಚಿಕ್ಕಪೇಟೆ, ಕುಂಬಾರ ಬೀದಿ ಹೀಗೆ ತಳಸಮುದಾಯ ದವರಿಗೂ ವಿಶೇಷ ಗಮನ ಹರಿಸಿದ್ದರು.
ಕೆಂಪಾAಬುದಿ ಸೇರಿ ಹತ್ತಾರು ಕೆರೆಗಳನ್ನು ನಿರ್ಮಿಸಿ ಅನ್ನದಾತರಿಗೆ ಅನುಕೂಲ ಮಾಡಿಕೊಟ್ಟಿದ್ದರು. ಅವರ ಆದರ್ಶಗಳನ್ನು ಇಂ ದಿನ ಆಡಳಿತಗಾರರೂ ಅನುಸರಿಸಬೇಕಿದೆ ಎಂದರು.
ಕೆAಪೇಗೌಡ ಯುವಕ ಸಂಘದ ಅಧ್ಯಕ್ಷ ಕೆ.ಎನ್. ಶಿವಮೂರ್ತಿ ಮಾತನಾಡಿ, ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರು ಮಹಾ ನ್ ಕನಸುಗಾರ. ಮಾನವೀಯ ಅನುಕಂಪ ಹೊಂದಿದ್ದ ಸೂಕ್ಷ÷್ಮ ಪ್ರe್ಞÉಯ ಆಡಳಿತಗಾರರಾಗಿದ್ದರು. ನೀರಾವರಿ, ಮಾರುಕಟ್ಟೆ ಸೌಲಭ್ಯ ಒದಗಿಸುವ ಮೂಲಕ ಆಡಳಿತದ ಬಗ್ಗೆ ತಮಗೆ ಇದ್ದ ಅಪಾರ ಅನುಭವವನ್ನು ಮೆರೆದರು. ಹಾಗಾಗಿ ಬೆಂಗಳೂರು ಇಂದು ವಿಶ್ವಭೂಪಟದಲ್ಲಿ ರಾರಾಜಿಸುವಂತಾಗಿದೆ ಎಂದರು.
ಗ್ರಾಪA ಮಾಜಿ ಅಧ್ಯಕ್ಷ ಕೆ.ಜಿ. ತಿಮ್ಮರಾಯಪ್ಪ ಮಾತನಾಡಿ, ಜÁತ್ಯತೀತ ವ್ಯಕ್ತಿತ್ವದ ಕೆಂಪೇಗೌಡರ ಜಯಂತಿಯನ್ನು ಎಲ್ಲರೂ ಒಟ್ಟಾಗಿ ಆಚರಿಸಬೇಕಿದೆ. ಆ ಮೂಲಕ ಎಲ್ಲ ಜÁತಿ ಧರ್ಮದವರು ಸಹಬಾಳ್ವೆ ನಡೆಸುವ ಮೂಲಕ ಸಾಮಾಜಿಕ ಸಾಮರಸ್ಯ ಸಾರಬೇಕಿದೆ ಎಂದರು.
ಜಿ. ತಿಪ್ಪೇಸ್ವಾಮಿ, ವೆಂಕಟೇಶ್, ನಾಗೇಂದ್ರಪ್ಪ, ಲೋಕೇಶ್, ಕೆ.ಟಿ. ವೀರೇಂದ್ರಪಾಟೀಲ್, ಶ್ರೀನಿವಾಸ್, ಜಿ. ಗೋವಿಂದರಾಜ್, ಹೆಂಜÁರಪ್ಪ, ಈರಣ್ಣ, ರಘುವೀರ್, ಗೋವಿಂದರಾಜು, ಸೌಮ್ಯಾ, ಶಿವಣ್ಣ, ಅಂಬುಜಾ, ರಕ್ಷಿತ್, ಚಿಕ್ಕಣ್ಣ, ಮಧು, ಕೃಷ್ಣಮೂರ್ತಿ, ಮಂಜುನಾಥ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net