ಕಡ್ಲೆಗುದ್ದು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಚಿತ್ರದುರ್ಗದ ಬಹುಮುಖಿ ಕಲಾ ಕೇಂದ್ರ ಆಯೋಜಿಸಿದ್ದ ಕನ್ನಡ ಗೀತ ಗಾಯನ ಕಾರ್ಯಕ್ರಮದಲ್ಲಿ ಭೀಮಣ್ಣ, ಉಷಾ, ಮಂಜುನಾಥ್, ಕರಿಬಸಪ್ಪ, ಸುಲೋಚನ, ಪವಿತ್ರಾ, ರೇಖಾ ಮಂಜಪ್ಪ, ನಟರಾಜ್, ನಾಗರಾಜ್, ಮಹಂತೇಶ್ ಹಾಗೂ ಗ್ರಾಮಸ್ಥರು ಇದ್ದರು. Culture
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಮುಖ್ಯ ಶಿಕ್ಷಕ ಡಾ. ಮಹೇಶ್ ಅನಿಸಿಕೆ
ಕಡ್ಲೆಗುದ್ದು ಶಾಲೆಯಲ್ಲಿ ಗೀತಗಾಯನ ಕಾರ್ಯಕ್ರಮ
ಸಿರಿಗೆರೆ: ಕರ್ನಾಟಕ ಕಲೆ, ಸಂಸ್ಕೃತಿಯ ತವರೂರಾಗಿದ್ದು, ಕಲಾವಿದರನ್ನು ಗೌರವಿಸುವ ಸಂಸ್ಕೃತಿ ನಮ್ಮದಾಗಿದೆ ಎಂದು ಮುಖ್ಯ ಶಿಕ್ಷಕ ಡಾ. ಮಹೇಶ್ ಹೇಳಿದರು. Culture
ಸಮೀಪದ ಕಡ್ಲೆಗುದ್ದು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಚಿತ್ರದುರ್ಗದ ಬಹುಮುಖಿ ಕಲಾ ಕೇಂದ್ರ ಆಯೋಜಿಸಿದ್ದ ಕನ್ನಡ ಗೀತ ಗಾಯನ ಕಾರ್ಯಕ್ರಮವನ್ನು ತಬಲಾ ನುಡಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಕಲಾವಿದರು ಕಲೆಗಾಗಿ ತಮ್ಮ ಬದುಕನ್ನೇ ಮುಡುಪಾಗಿಟ್ಟವರು. ಅಂತಹ ಅತ್ಯುತ್ತಮ ಕಲಾವಿದರನ್ನು ವಿದ್ಯಾರ್ಥಿಗಳಿಗೆ ಪರಿಚಿಯಿಸುತ್ತಿರುವುದು ಶ್ಲಾಘನೀಯ ಎಂದರು.
ಇಂದಿನ ಮಕ್ಕಳು ಮೊಬೈಲ್ಎಂಬ ಮಾಯಾ ಲೋಕದಲ್ಲಿ ಮುಳುಗಿ ನಮ್ಮ ಜನಪದ ಕಲೆ, ಸಂಸ್ಕೃತಿ ಮರೆಯುತ್ತಿದ್ದಾರೆ. ಚಲನಚಿತ್ರದ ಹಾಡುಗಳ ಹೊರತು ಇತರ ಯಾವುದೇ ಗೀತೆಗಳು ವಿದ್ಯಾರ್ಥಿಗಳಿಗೆ ಹಾಡಲು ಬರುತ್ತಿಲ್ಲ. ಇಂತಹ ಸಂದರ್ಭದಲ್ಲಿ ಹೆಸರಾಂತ ಕಲಾವಿದರನ್ನು ಕಡ್ಲೆಗುದ್ದು ಗ್ರಾಮಕ್ಕೆ ಆಹ್ವಾನಿಸಿ, ಜಾನಪದ, ಭಾವಗೀತೆ, ರಂಗಗೀತೆ, ತತ್ವಪದಗಳನ್ನು ಹಾಡಿಸಿ ಮಕ್ಕಳಿಗೆ ಪರಿಚಯಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗಾಯಕರಾದ ಹರೀಶ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ ಪರಿಚಯ ಮಾಡುವುದು ಕಲಾವಿದರ ಜವಾಬ್ದಾರಿಯಾಗಿದೆ ಎಂದರು. ಸಂಸ್ಥೆ ಕಾರ್ಯದರ್ಶಿ ಮಧು ಮಾತನಾಡಿ, ಬಹುಮುಖಿ ಕಲಾ ಕೇಂದ್ರವು ಸಮಾಜಕ್ಕೆ ಪೂರಕ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದೆ ಎಂದರು.
ಕಲಾವಿದರಾದ ನನ್ನಿಹಾಳ ಹನುಮಂತಪ್ಪ, ಜಯಣ್ಣ, ಚನ್ನಬಸಪ್ಪ, ಶ್ರೀನಿವಾಸಮೂರ್ತಿ ಹಾಗೂ ಸಂಗಡಿಗರು ಜನಪದ, ಭಾವಗೀತೆ, ಬಯಲಾಟ ರಂಗಗೀತೆಗಳನ್ನು ಪ್ರಸ್ತುತ ಪಡಿಸಿದರು.