ಚಿತ್ರದುರ್ಗದ ಮುರುಘಾ ಮಠದಲ್ಲಿ ಮಂಗಳವಾರ ಜರುಗಿದ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಡಾ. ಬಸವಕುಮಾರ ಸ್ವಾಮೀಜಿ, ಡಾ. ಬಸವಪ್ರಭು ಸ್ವಾಮೀಜಿ, ಶ್ರೀ ಬಸವನಾಗೀದೇವ ಸ್ವಾಮೀಜಿ, ಶ್ರೀ ಬಸವ ಮಹಾಂತ ಸ್ವಾಮೀಜಿ, ಶ್ರೀ ಬಸವ ಮಲ್ಲಿಕಾರ್ಜುನ ಸ್ವಾಮೀಜಿ, ಶ್ರೀ ಬಸವಲಿಂಗಮೂರ್ತಿ ಸ್ವಾಮೀಜಿ, ರಾಜುಕೋರಿ, ಡಾ. ಸುನಿಲ್‌ಕಲ್ಲೂರ ಇತರರು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಡಾ. ಬಸವಕುಮಾರ ಸ್ವಾಮೀಜಿ ಅನಿಸಿಕೆ
ಮುರುಘಾಮಠದ ವಿವಾಹ ಮಹೋತ್ಸವದಲ್ಲಿ ಸತಿಪತಿಗಳಾದ ೧೮ ಜೋಡಿ
ಬಸವಾದಿ ಶರಣರ ಆಶಯ
ಚಿತ್ರದುರ್ಗ: ಮುರುಘಾ ಮಠದ ಸಾಮೂಹಿಕ ಕಲ್ಯಾಣ ಮಹೋತ್ಸವ ಸಾಮಾಜಿಕ ಬದಲಾವಣೆ ಅಸ್ಮಿತೆಯಾಗಿದೆ ಎಂದು ಮಠದ ಆಡಳಿತ ಮಂಡಳಿ ಸದಸ್ಯ ಡಾ. ಬಸವಕುಮಾರ ಸ್ವಾಮೀಜಿ ಹೇಳಿದರು.
ಶ್ರೀಮಠದಲ್ಲಿ ಮಂಗಳವಾರ ಆಯೋಜಿಸಿದ್ದ ೩೬ನೇ ವರ್ಷದ ೫ನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಮಾತ ನಾ ಡಿ, ಬಸವಾದಿ ಶರಣರ ಆಶಯದಂತೆ ನಡೆಯುವ ವಚನ ಮಾಂಗಲ್ಯ ಸರಳ ಬದುಕಿಗೆ ಸಾಕ್ಷಿಯಾಗಿದೆ. ಶ್ರೀಮಠ ಯಾವತ್ತೂ ಸಾಮಾಜಿಕ ಸಮಾನತೆ ಪರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಜಾತಿ, ಧರ್ಮಗಳ ಗೊಡವೆಯಿಲ್ಲದೆ ವಾರ, ತಿಥಿ, ನಕ್ಷತ್ರಗಳ ಲೆಕ್ಕಾಚಾರವಿಲ್ಲದೆ ಪ್ರತಿ ತಿಂಗಳು ೫ ರಂದು ಈ ಕಾರ್ಯಕ್ರಮ ನಿರಂತರ ೩೬ ವರ್ಷಗಳಿಂದ ನಡೆಯುತ್ತಿದೆ ಎಂದು ಹೇಳಿದರು.
ದುಂದು ವೆಚ್ಚ ಕಡಿತದ ಮೂಲಕ ತಾವೆಲ್ಲ ಸರಳ ವಿವಾಹವಾಗಿದ್ದೀರಿ. ನಿಮ್ಮ ಬದುಕು ಸುಂದರವಾಗುತ್ತದೆ. ಸತಿಪತಿಗಳಿಬ್ಬರೂ ತಗ್ಗಿ ಬಗ್ಗಿ ನಡೆಯಬೇಕು. ಯಾವ ವ್ಯಕ್ತಿ ಬಾಗಿ ನಡೆಯುತ್ತಾನೋ ಅವನ ಬದುಕು ಬಂಗಾರವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ದಾವಣಗೆರೆ ವಿರಕ್ತಮಠದ ಡಾ. ಬಸವಪ್ರಭು ಸ್ವಾಮೀಜಿ ಮಾತನಾಡಿ, ಪರಸ್ಪರರ ನಗು ದಂಪತಿಯ ಸಂಸಾರವನ್ನು ಸುಂದರ ವಾಗಿಸುತ್ತದೆ. ಮೌನ ಸಂಸಾರದಲ್ಲಿ ಮನಸ್ತಾಪ, ಜಗಳ ತಪ್ಪಿಸುತ್ತದೆ. ನದಿ ದಾಟಲು ತೆಪ್ಪಬೇಕು. ಸಂಸಾರದ ನದಿ ದಾಟಲು ತೆಪ್ಪಗಿರಬೇಕಾಗುತ್ತದೆ ಎಂದರು.
ಸತಿ-ಪತಿಗಳ ಶ್ವಾಸವಿರುವ ತನಕ ವಿಶ್ವಾಸವಿದ್ದರೆ ಸಂಸಾರದ ಬಂಧನ ಇನ್ನಷ್ಟು ಗಟ್ಟಿಯಾಗುತ್ತದೆ. ತಾಳ್ಮೆ ದಾಂಪತ್ಯದಲ್ಲಿ ಬಹಳ ಮುಖ್ಯ. ತಾಳ್ಮೆಯಿಂದ ಸಂಸಾರ ಜಯಿಸಲು ಸಾಧ್ಯ. ಹೊಸ ಜೀವನಕ್ಕೆ ಕಾಲಿಡುತ್ತಿರುವ ದಂಪತಿಗಳು ನಗು, ಮೌನ, ವಿಶ್ವಾಸ, ತಾಳ್ಮೆಯನ್ನು ಅಳವಡಿಸಿಕೊಂಡು ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂದರು.
ಛಲವಾದಿ ಗುರುಪೀಠದ ಶ್ರೀ ಬಸವನಾಗೀದೇವ ಸ್ವಾಮೀಜಿ ಮಾತನಾಡಿ. ಒಂದು ಮದುವೆಗೆ ಎಷ್ಟೊ ಕಷ್ಟಪಡಬೇಕಾಗುತ್ತದೆ. ಹೀಗಿರುವಾಗ ಶ್ರೀಮಠ ನಿರಂತರವಾಗಿ ಪ್ರತಿ ತಿಂಗಳು ಈ ಕಾರ್ಯವನ್ನು ಮಾಡಿಕೊಂಡು ಬರುತ್ತಿದೆ. ಬಸವಾದಿ ಶರಣರ ಆದ ರ್ಶಗಳ ಪರಿಕಲ್ಪನೆಯಲ್ಲಿ ನಡೆಯುತ್ತಿದೆ ಎಂದರು.
ಶಿರಸAಗಿಯ ಶ್ರೀ ಬಸವ ಮಹಾಂತ ಸ್ವಾಮೀಜಿ ಮಾತನಾಡಿ, ಸ್ಮಾರ್ಟ್ಪೋನ್‌ಗಳ ವ್ಯಾಮೋಹಕ್ಕೆ ಳಗಾöರುವ ಮಕ್ಕಳನ್ನು ಅದ ರಿಂದ ಹೊರಗೆ ತರಬೇಕಾಗಿದೆ. ಪಾಲಕರು ಮಕ್ಕಳಿಗೆ ಶಿಕ್ಷಣ, ಸಂಸ್ಕಾರ ನೀಡಬೇಕು. ಸತಿ ಪತಿಗಳು ಪರಸ್ಪರ ನಂಬಿಕೆ ಮೂಲಕ ಸ್ನೇಹಿತರಂತೆ ಬದುಕು ಸಾಗಿಸಬೇಕು. ಪ್ರತಿ ತಿಂಗಳ ವಿವಾಹ ಕಾರ್ಯಕ್ರಮ ಶ್ರೀಮಠದ ಶಕ್ತಿಯಾಗಿದೆ ಎಂದರು.
ಬಿಜೆಪಿ ಮುಖಂಡ ರಾಜು ಕೋರಿ, ಮೆದುಳು ಮತ್ತು ನರರೋಗ ತಜ್ಞ ಡಾ. ಸುನಿಲ್‌ಕಲ್ಲೂರ ಅವರನ್ನು ಸನ್ಮಾನಿಸಲಾಯಿತು. ಶ್ರೀ ಬಸವ ಮಲ್ಲಿಕಾರ್ಜುನ ಸ್ವಾಮೀಜಿ, ಶ್ರೀ ಬಸವಲಿಂಗ ಮೂರ್ತಿ ಸ್ವಾಮೀಜಿ, ಪತ್ರಕರ್ತ ಲಿಂಗರಾಜು, ಪೈಲ್ವಾನ್ ತಿಪ್ಪೇಸ್ವಾಮಿ, ಚುಟುಕು ಕವಿ ಗಂಗಾಧರಪ್ಪ ಇದ್ದರು. ೪ ಜೋಡಿ ಅಂತಾರ್ಜಾತಿ ಸೇರಿ ೧೮ ಜೋಡಿಗಳು ದಾಂಪತ್ಯಕ್ಕೆ ಅಡಿಯಿಟ್ಟರು.
ಜಮುರಾ ಕಲಾವಿದರು ಪ್ರಾರ್ಥಿಸಿದರು. ಶಿಕ್ಷಕ ಗಿರೀಶಾಚಾರ್ ಸ್ವಾಗತಿಸಿ, ಟಿ.ಪಿ. ಜ್ಞಾನಮೂರ್ತಿ ವಂದಿಸಿದರು.