ಬೆಳೆ ವಿಮೆ ನೋಂದಣಿಯಲ್ಲಿ ಕಲಬುರಗಿ, ದಕ್ಷಿಣ ಕನ್ನಡ ಮುಂದು

 ಚಿತ್ರದುರ್ಗ ತಾಲೂಕು ಗೋನೂರಲ್ಲಿ ಈಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಟಿ.ರಘುಮೂರ್ತಿ ಅವರ ಬರ ಅಧ್ಯಯನ ನಡೆಸಿದ ಸಾಂಕೇತಿಕ ಚಿತ್ರ.
ಚಿತ್ರದುರ್ಗ ತಾಲೂಕು ಗೋನೂರಲ್ಲಿ ಈಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಟಿ.ರಘುಮೂರ್ತಿ ಅವರ ಬರ ಅಧ್ಯಯನ ನಡೆಸಿದ ಸಾಂಕೇತಿಕ ಚಿತ್ರ.
Published on

ಪ್ರಮುಖ ಮುಖ್ಯಾಂಶಗಳು

  • *ಹವಾಮಾನ ಆಧರಿತ ವಿಮೆಗೆ ೭೫೭೦೫೩ ಬೆಳೆಗಾರರು ನೋಂದಣಿ
  • *-Àಸಲ್ ಬಿಮಾಗೆ ೩೪ ಲಕ್ಷ ನೋಂದಣಿ
  • ಬರಗಾಲ ಘೋಷಣೆ ನಿರೀಕ್ಷೆಯಲ್ಲಿ ಅನ್ನದಾತ

ಡಿಪಿಎನ್ ಶ್ರೇಷ್ಠಿ, ಚಿತ್ರದುರ್ಗ


ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಹಾಗೂ ಹವಾಮಾನ ಆಧಾರಿತ ಬೆಳೆ ವಿಮೆ ನೋಂದಣಿ ಪೂರ್ಣ ಗೊಂಡಿದ್ದು, ಒಟ್ಟು ೪೧.೭೧ ಲಕ್ಷಕ್ಕೂ ಅಽಕ ರೈತರು ನೋಂದಾಯಿಸಿಕೊAಡಿದ್ದಾರೆ. ಪ್ರಧಾನ ಮಂತ್ರಿ -Àಸಲ್ ಬಿಮಾ ಯೋಜ ನೆಯಡಿ ಉತ್ತರ ಕರ್ನಾಟಕದ ಜಿಲ್ಲೆಗಳು ಮುಂಚೂಣಿಯಲ್ಲಿದ್ದರೆ, ಹವಾಮಾನ ಆಧಾರಿತ ಬೆಳೆ ವಿಮೆಯಲ್ಲಿ ಕರಾವಳಿ ಹಾಗೂ ಮಲೆನಾಡು ಭಾಗದ ಜಿಲ್ಲೆಗಳು ಹೆಚ್ಚಿನ ಪ್ರಮಾಣದಲ್ಲಿ ನೋಂದಣಿಯಾಗಿವೆ.
ರಾಜ್ಯ ಬರದ ಸಂಕಷ್ಟಕ್ಕೆ ಸಿಲುಕಿರುವ ಈ ಸಂದರ್ಭದಲ್ಲಿ ಬೆಳೆ ವಿಮೆ ಆಸರೆಯಾಗಲಿದೆ ಎಂಬ ಆಶಯದೊಂದಿಗೆ ರಾಜ್ಯಸರ್ಕಾರ ಹೆಚ್ಚಿನ ಸಂಖ್ಯೆಯಲ್ಲಿ ವಿಮೆಗೆ ನೋಂದಣಿ ಮಾಡಿಸುವಂತೆ ರೈತರಲ್ಲಿ ಮನವಿ ಮಾಡಿತ್ತು. ಇತರ ಬೆಳೆಗೆ ಜು.೩೧ಮತ್ತು ರಾಗಿ ನೋಂದಣಿಗೆ ಆ. ೧೫ ಕೊನೆಯ ದಿನವಾಗಿತ್ತು.
ಪ್ರಧಾನ ಮಂತ್ರಿ ಫಸಲ್ ಬಿಮಾದಡಿ ಬಿತ್ತನೆ ವೈಫ ಲ್ಯಕ್ಕೆ ವಿಮಾ ಮೊತ್ತದ ಶೇ.೨೫ ಪರಿಹಾರ ಸಿಗಲಿದೆ. ವಿಮೆಗೆ ನೋಂದಣಿ ಮಾಡಿದ ರೈತರ ವಿವರ ಅಪ್‌ಲೋಡ್‌ಗೆ ಇರುವ ೧೫ ದಿನಗಳ ಸಮಯಾವಕಾಶ ಪೂರ್ಣವಾದ ಬಳಿಕ ನೋಂದಾಯಿತ ರೈತರ ಸಂಖ್ಯೆ ಅಂತಿಮವಾಗಲಿದೆ.
ರಾಜ್ಯಾದ್ಯAತ ಒಟ್ಟು ೩೪,೧೪,೦೮೭ ರೈತರು ಪ್ರಧಾನ ಮಂತ್ರಿ -Àಸಲ್ ಬಿಮಾ ಯೋಜನೆಯಡಿ ಹಾಗೂ ೭,೫೭,೦೫೩ ರೈತರು ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿ ನೋಂದಣಿ ಮಾಡಿಸಿಕೊಂಡಿದ್ದಾರೆ.
ಪ್ರಧಾನ ಮಂತ್ರಿ -Àಸಲ್ ಬಿಮಾ ಯೋಜನೆಯಡಿ ಕಲಬುರಗಿ ಜಿಲ್ಲೆಯಲ್ಲಿ ಗರಿಷ್ಠ ೪,೭೨,೬೮೬ ರೈತರು ನೋಂದಣಿ ಮಾಡಿಕೊಂಡಿದ್ದರೆ, ಬೀದರ್ (೪,೧೭,೬೮೧) ಮತ್ತು ವಿಜಯಪುರ (೨,೭೬,೦೩೫) ನಂತರದ ಸ್ಥಾನಗಳಲ್ಲಿವೆ. ದಕ್ಷಿಣ ಕನ್ನಡದಲ್ಲಿ ಅತಿ ಕಡಿಮೆ (೨೩೫) ನೋಂದಣಿಯಾಗಿದೆ.
ಕರಾವಳಿಗೆ ಅಗ್ರಸ್ಥಾನ: ಹವಾಮಾನ ಆಧಾರಿತ ಬೆಳೆ ವಿಮೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗರಿಷ್ಠ ೨,೦೭,೯೪೦ ರೈತರು ನೋಂ ದಣಿ ಮಾಡಿಸಿಕೊಂಡಿದ್ದರೆ, ಶಿವಮೊಗ್ಗ (೧,೦೮,೯೯೧) ಹಾಗೂ ಚಿಕ್ಕಮಗಳೂರು (೬೫,೬೦೮) ನಂತರದ ಸ್ಥಾನದಲ್ಲಿವೆ. ಚಾಮರಾಜನಗರದಲ್ಲಿ ಅತಿ ಕಡಿಮೆ (೦೪) ರೈತರು ನೋಂದಾಯಿಸಿದ್ದಾರೆ.

ಸಚಿವರ ಪ್ರವಾಸ


ರಾಜ್ಯದ ಹಲವೆಡೆ ಮಳೆ ಕೊರತೆ ಅಽಕವಿದ್ದು, ಜಿಲ್ಲಾ ಪ್ರಕೃತಿ ವಿಕೋಪ ಪರಿಹಾರ ಕಾರ್ಯಗಳ ಉಸ್ತುವಾರಿ ಹೊತ್ತಿದ್ದ ಸಚಿವರು ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಬರಗಾಲ, ಕುಡಿವ ನೀರು, ಜಾನುವಾರುಗಳಿಗೆ ಮೇವು ಇತ್ಯಾದಿ ಸಮಸ್ಯೆಗಳನ್ನು ಪರಿಶೀಲಿಸಿದ್ದಾರೆ.
ಪರಿಶೀಲನಾ ಸಭೆ ನಡೆಸಿದ್ದು, ಸರ್ಕಾರಕ್ಕೆ ಸಮಗ್ರವಾಗಿ ವರದಿ ಸಲ್ಲಿಸಲಿದ್ದಾರೆ.
ವರದಿ ಕೈ ಸೇರುತ್ತಿದ್ದಂತೆ ವೈಜ್ಞಾನಿಕವಾಗಿ ಬರ ಪರಿಸ್ಥಿತಿ ಕುರಿತಂತೆ ಘೋಷಣೆ ಮಾಡುವುದಾಗಿ ಸಿಎಂ ಡಿ.ಕೆ. ಶಿವಕುಮಾರ್ ಭರವಸೆ ನೀಡಿದ್ದಾರೆ. ಕೇಂದ್ರಕ್ಕೂ ಬರ ಪರಿಸ್ಥಿತಿ ಕುರಿತಂತೆ ರಾಜ್ಯ ಸರ್ಕಾರ ಮನವರಿಕೆ ಮಾಡಿಕೊಡಲಿದೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಬಿತ್ತನೆ ವೈಫಲ್ಯದಡಿ ಚಳ್ಳಕೆರೆ, ಮೊಳಕಾಲ್ಮೂರು ತಾಲೂಕುಗಳಲ್ಲಿ ಶೇಂಗಾ, ಹಿರಿಯೂರು ಶೇಂಗಾ, ಸರ‍್ಯ ಕಾಂತಿ, ಚಿತ್ರದುರ್ಗ, ಹೊಳಲ್ಕೆರೆ ಮೆಕ್ಕೆಜೋಳ ಹಾಗೂ ಹೊಸದುರ್ಗ ತಾಲೂಕುಗಳಲ್ಲಿ ರಾಗಿಗೆ ಬಿತ್ತನೆ ವೈಫಲ್ಯದಡಿ ಪರಿಹಾರ ಸಿಗಲಿದೆ.
ಕೃಷಿ ಬೆಳೆಗಳಾದ ಶೇಂಗಾ, ಮೆಕ್ಕೆಜೋಳ, ಸರ‍್ಯಕಾಂತಿ, ರಾಗಿ, ತೊಗರಿ, ಹತ್ತಿ, ಹೆಸರುಕಾಳು, ಹುರುಳಿ, ರಾಗಿ, ಸಾವೆ ಹಾಗೂ ತೋಟಗಾರಿಕೆಯ ಈರುಳ್ಳಿ, ಕೆಂಪು ಮೆಣಸಿನಕಾಯಿ, ಟೊಮ್ಯಾಟೊ ಮತ್ತು ಹವಾಮಾನ ಆಧರಿಸಿದ ವಿಮೆಗೆ ತೋಟಗಾರಿಕೆ ಬೆಳೆಗಳಾದ ಅಡಿಕೆ, ದಾಳಿಂಬೆ ಹಾಗೂ ಮಾವು ನಿಗದಿಯಾಗಿದೆ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.

ಅವಳಿ ಜಿಲ್ಲೆಗಳ ಸಾಧನೆ


ಚಿತ್ರದುರ್ಗ ಜಿಲ್ಲೆ ೨.೩೬ ಲಕ್ಷಕ್ಕೂ ಅಽಕ ನೋಂದಣಿಯೊAದಿಗೆ ಮಧ್ಯ ಕರ್ನಾಟಕದಲ್ಲೇ ಅಗ್ರಗಣ್ಯ ಪ್ರಗತಿ ಸಾಽಸಿದೆ.

-Àಸಲ್ ಬಿಮಾದಲ್ಲಿ ೧,೮೯,೬೭೫ ರೈತರು ನೋಂದಾಯಿಸಿಕೊAಡಿದ್ದು, ರಾಜ್ಯದಲ್ಲಿ ೫ನೇ ಗರಿಷ್ಠ ನೋಂದಣಿಯಾಗಿದೆ. ಹವಾಮಾನ ಆಧಾರಿತ ವಿಮೆಯಲ್ಲಿ ೪೭,೧೭೮ ರೈತರು ನೋಂದಾಯಿಸಿದ್ದು, ರಾಜ್ಯದಲ್ಲಿ ೬ನೇ ಸ್ಥಾನದಲ್ಲಿದೆ.

ದಾವಣಗೆರೆ ಜಿಲ್ಲೆಯಲ್ಲಿ ಒಟ್ಟು ೧,೨೪,೦೨೦ ರೈತರು ವಿಮಾ ರಕ್ಷಣೆ ಪಡೆದುಕೊಂಡಿದ್ದಾರೆ. ೭೮,೩೨೧ ರೈತರು ಪ್ರಧಾನ ಮಂತ್ರಿ -Àಸಲ್ ಬಿಮಾ ಯೋಜನೆಗೆ ಒಳಪಟ್ಟಿದ್ದು, ರಾಜ್ಯದಲ್ಲಿ ೧೫ನೇ ಸ್ಥಾನದಲ್ಲಿದೆ. ಹವಾಮಾನ ಆಧಾರಿತ ವಿಮೆಯಲ್ಲಿ ತೋಟಗಾರಿಕೆ ಮತ್ತು ವಾಣಿಜ್ಯ ಬೆಳೆಗಳಿಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ೪೫,೬೯೯ ರೈತರು ನೋಂದಾಯಿಸಿಕೊAಡು ರಾಜ್ಯದಲ್ಲಿ ೭ನೇ ಸ್ಥಾನ ಪಡೆದಿದೆ.
----------
"

ಮಳೆ ಕೊರತೆ ಹಿನ್ನೆಲೆಯಲ್ಲಿ ವಿಮಾ ಘಟಕದ ವ್ಯಾಪ್ತಿ ಶೇ.೭೫ಕ್ಕಿಂತ ಹೆಚ್ಚಿನ ಪ್ರದೇಶದಲ್ಲಿ ಬಿತ್ತನೆ ವಿಫಲವಾಗಿದ್ದರೆ ವಿಮಾ ಮೊತ್ತದ ಶೇ. ೨೫ ಪರಿಹಾರ ದೊರೆಯಲಿದೆ. ಇನ್ನುಳಿದಂತೆ ಬೆಳೆ ಇಳುವರಿ ಸಂದರ್ಭದಲ್ಲಿ ಬೆಳೆ ಕಟಾವು ಸಮೀಕ್ಷೆ ನಡೆಸಲಾಗುತ್ತದೆ. ಸರಾಸರಿ ಇಳುವ ರಿಗಿಂತ ವಾಸ್ತವದಲ್ಲಿ ಕಡಿಮೆ ಇಳುವರಿ ಆಗಿದ್ದರೆ ವಿಮೆ ನೆರವು ಸಿಗಲಿದೆ. ಹವಾಮಾನ ಆಧರಿಸಿದ ವಿಮಾ ಪರಿಹಾರಕ್ಕೆ ಮಳೆ ಪ್ರಮಾಣ, ತಾಪಮಾನ, ಆರ್ದ್ರತೆ ಇತ್ಯಾದಿ ಅಂಶಗಳನ್ನು ಪರಿಗಣಿಸಲಾಗುತ್ತದೆ.

— ಬಿ.ಮಂಜುನಾಥ್, ಜಂಟಿ ಕೃಷಿ ನಿರ್ದೇಶಕರು,ಚಿತ್ರದುರ್ಗ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net