ಕಾಯ್ದೆ, ಕಾನೂನು ಅರಿಯುವುದು ಸಹಕಾರಿಗಳ ಜವಾಬ್ದಾರಿ

ಚಿತ್ರದುರ್ಗದಲ್ಲಿ ಮಂಗಳವಾರ ಚಿತ್ರದುರ್ಗ, ಹಿರಿಯೂರು ತಾಲೂಕು ಪ್ಯಾಕ್ಸ್ ಅಧ್ಯಕ್ಷರು, ಸಿಇಒಗಳಿಗೆ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮವನ್ನು ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಇಲ್ಯಾಸ್ ಉಲ್ಲಾ ಷರೀಫ್ ಉದ್ಘಾಟಿಸಿದರು. ಒ. ಮಂಜುನಾಥ್, ಎಚ್.ಎಂ. ದ್ಯಾಮಣ್ಣ, ಜೆ. ರವಿಕುಮಾರ್, ಆರ್.ಎಸ್. ದಿಲೀಪ್ ಇತರರು ಇದ್ದರು.
ಚಿತ್ರದುರ್ಗದಲ್ಲಿ ಮಂಗಳವಾರ ಚಿತ್ರದುರ್ಗ, ಹಿರಿಯೂರು ತಾಲೂಕು ಪ್ಯಾಕ್ಸ್ ಅಧ್ಯಕ್ಷರು, ಸಿಇಒಗಳಿಗೆ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮವನ್ನು ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಇಲ್ಯಾಸ್ ಉಲ್ಲಾ ಷರೀಫ್ ಉದ್ಘಾಟಿಸಿದರು. ಒ. ಮಂಜುನಾಥ್, ಎಚ್.ಎಂ. ದ್ಯಾಮಣ್ಣ, ಜೆ. ರವಿಕುಮಾರ್, ಆರ್.ಎಸ್. ದಿಲೀಪ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಿಸಿಸಿ ಬ್ಯಾಂಕ್ ಎಂಡಿ ಇಲ್ಯಾಸ್‌ಉಲ್ಲಾ ಷರೀಫ್ ಅಭಿಮತ
  • ಚಿತ್ರದುರ್ಗ, ಹಿರಿಯೂರು ಪ್ಯಾಕ್ಸ್ ಅಧ್ಯಕ್ಷರು,ಸಿಇಒಗಳಿಗೆ ತರಬೇತಿ
  • ರಾಜ್ಯ ಸಹಕಾರ ಮಹಾಮಂಡಳ
ಚಿತ್ರದುರ್ಗ: ಸಹಕಾರಿ ಕಾಯ್ದೆ, ಕಾನೂನುಗಳನ್ನು ತಿಳಿದುಕೊಳ್ಳುವುದು ಸಹಕಾರಿ ಪ್ರತಿನಿಽಗಳು, ಅಽಕಾರಿ ಹಾಗೂ ಸಿಬ್ಬಂದಿ ಜವಾಬ್ದಾರಿಯಾಗಿದೆ ಎಂದು ಡಿಸಿಸಿ ಬ್ಯಾಂಕ್ ಎಂಡಿ ಇಲ್ಯಾಸ್‌ಉಲ್ಲಾ ಷರೀಫ್ ಅಭಿಪ್ರಾಯಪಟ್ಟರು.
ಸಹಕಾರ ಇಲಾಖೆ, ರಾಜ್ಯ ಸಹಕಾರ ಮಹಾಮಂಡಳ ಹಾಗೂ ಜಿಲ್ಲಾ ಸಹಕಾರ ಯೂನಿಯನ್ ಇವುಗಳ ಸಂಯುಕ್ತಾಶ್ರಯದಲ್ಲಿ ಚಿತ್ರದುರ್ಗ ಮತ್ತು ಹಿರಿಯೂರು ತಾಲೂಕುಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು, ಮುಖ್ಯ ಕಾರ್ಯನಿರ್ವ ಹಣಾಽಕಾರಿಗಳಿಗೆ ನಗರದ ಸಹಕಾರ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಒಂದು ದಿನದ ಜಿಲ್ಲಾ ವಿಶೇಷ ತರಬೇತಿ
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಹಕಾರಿಗಳು ಕಾನೂನು, ಕಾಯ್ದೆಗಳನ್ನು ಅರಿತುಕೊಂಡರೆ ಸಹಕಾರ ಸಂಘಗಳ ಏಳಿಗೆಗೆ ಅನುಕೂಲವಾಗಲಿದೆ. ವಿವಿಧೋದ್ದೇಶ ವ್ಯವಹಾರಗಳನ್ನು ಅನುಷ್ಠಾನಗೊಳಿಸಿದಾಗ ಸಂಘಗಳು ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಆರ್ಥಿಕ ಸಂಸ್ಥೆಯಾಗಿ ದೊಡ್ಡ ಮಟ್ಟದಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯವಿದೆ ಎಂದರು.
ಸದಸ್ಯರಿಗೆ ಸಾಲ ಕೊಡಿಸುವುದು, ಅಕ್ಕಿ, ಗೋಽ ಮಾರಾಟಕ್ಕೆ ಸೀಮಿತವಾಗದೆ ಕೇಂದ್ರದ ಹಲವು ಯೋಜನೆಗಳಾದ ಪೆಟ್ರೋಲ್ ಬಂಕ್, ಜನೌಷಽ ಕೇಂದ್ರ ಮತ್ತಿತರ ವಾಣಿಜ್ಯ ಚಟುವಟಿಕೆಗಳನ್ನು ಕೈಗೊಳ್ಳಬೇಕು. ನಿತ್ಯದ ವ್ಯವಹಾರ ಕಂಪ್ಯೂಟರೀಕರಣ ದೊA ದಿಗೆ ಪಾರದರ್ಶಕ, ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ಸಹಕಾರ ಕ್ಷೇತ್ರದ ಅಭಿವೃದ್ಧಿ ಖಂಡಿತ ಸಾಧ್ಯವಿದೆ ಎಂದರು.
ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಒ. ಮಂಜುನಾಥ್ ಮಾತನಾಡಿ, ಸಹಕಾರಿಗಳಿಗೆ ತರಬೇತಿ ಅಗತ್ಯವಿದೆ. ಇದರಿಂದ ಕಾಯ್ದೆ, ನಿಯಮಗಳಲ್ಲಾಗುವ ತಿದ್ದುಪಡಿಗಳ ಅರಿವು ಸಾಧ್ಯವಾಗಲಿದೆ. ಮುಖ್ಯ ಕಾರ್ಯನಿರ್ವಾಹಕರು ಯಾವುದೇ ರಾಜಕೀಯ ಹಸ್ತಕ್ಷೇಪಕ್ಕೆ ಜಗ್ಗದೆ ಕೆಲಸ ಮಾಡಬೇಕು ಎಂದರು.
ನಿರ್ದೇಶಕ ಎಚ್.ಎಂ. ದ್ಯಾಮಣ್ಣ ಮಾತನಾಡಿ, ಅಗಲಿದ ಸಹಕಾರ ರತ್ನ ಡಿ. ಸುಧಾಕರ್ ಅವರು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಅತ್ಯುನ್ನತ ಸೇವೆ ಸಲ್ಲಿಸಿದ್ದಾರೆ. ಸಹಕಾರ ಕ್ಷೇತ್ರದಲ್ಲಿ ಅವರ ಹೆಸರು ಅಜರಾಮರವಾಗಿ ಉಳಿದಿದೆ ಎಂದರು.
ನಿರ್ದೇಶಕ ಆರ್. ರಾಮರೆಡ್ಡಿ, ಅಧ್ಯಕ್ಷತೆವಹಿಸಿದ್ದ ಯೂನಿಯನ್ ಅಧ್ಯಕ್ಷ ಎಚ್.ಎನ್. ತಿಪ್ಪೇಸ್ವಾಮಿ ಮಾತನಾಡಿದರು. ಉಪಾಧ್ಯಕ್ಷ ಜೆ.ಆರ್. ರವಿಕುಮಾರ್, ಸಹಕಾರ ಸಂಘಗಳ ಉಪನಿಬಂಧಕ ಆರ್.ಎಸ್. ದಿಲೀಪ್ ಕುಮಾರ್, ಡಿಸಿಸಿ ಬ್ಯಾಂಕ್ ಮೇಲ್ವಿಚಾರ ಕರಾದ ದೀಪಕ್, ಮುಖೇಶ್, ರಂಗಸ್ವಾಮಿ ಇತರರು ಇದ್ದರು. ಜಯಶ್ರೀ ಪಿ. ಹುನಗುಂದ ಸ್ವಾಗತಿಸಿ, ಟಿ.ಎನ್. ಶ್ರೀನಿವಾಸ್, ವಂ ದಿಸಿದರು. ನಾಗರಾಜಪಾಟೀಲ್ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net