ಜ್ಞಾನ ಸಂಪಾದನೆಯಿಂದ ಸಾಧನೆ ಮಾಡಲು ಸಾಧ್ಯ Certificate

ಚಿಕ್ಕಜಾಜೂರಿನ ಎಸ್‌ಕೆಡಿಆರ್‌ಡಿಪಿಯ ಸಿಎಸ್‌ಸಿ ಕೇಂದ್ರದಲ್ಲಿ ನಡೆದ ಆನ್‌ಲೈನ್ ಒಲಂಪಿಯಾಡ್ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿದ ಹಿರೇಕಂದವಾಡಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಮುಖ್ಯ ಶಿಕ್ಷಕ ನಟರಾಜ್, ಬಿ.ಆರ್. ಈಶ್ವರಪ್ಪ, ವಲಯ ಮೇಲ್ವಿಚಾರಕಿ ಶಾರದಾ, ನೋಡೆಲ್ ಅಧಿಕಾರಿ ಅಜಯ್, ಸೇವಾ ಪ್ರತಿನಿಧಿ ಸಂಗೀತ, ಶ್ರುತಿ ಇತರರಿದ್ದರು. Certificate

Published on

ಪ್ರಮುಖ ಮುಖ್ಯಾಂಶಗಳು

  • ಮುಖ್ಯ ಶಿಕ್ಷಕ ನಟರಾಜ್ ಹೇಳಿಕೆ
  • ಪ್ರಮಾಣ ಪತ್ರ ವಿತರಣೆ
ಚಿಕ್ಕಜಾಜೂರು: ಜ್ಞಾನ ಸಂಪಾದನೆ ಒಂದು ಯೋಗವಿದ್ದಂತೆ. ಅದನ್ನು ಕರಗತ ಮಾಡಿಕೊಂಡವರು ಸಾಧಕರಾಗುತ್ತಾರೆ ಎಂದು ಮುಖ್ಯ ಶಿಕ್ಷಕ ನಟರಾಜ್ ಹೇಳಿದರು. Certificate
ಎಸ್‌ಕೆಡಿಆರ್‌ಡಿಪಿಯ ಸಿಎಸ್‌ಸಿ ಕೇಂದ್ರದಲ್ಲಿ ಇತ್ತೀಚೆಗೆ ನಡೆದ ಆನ್‌ಲೈನ್ ಒಲಂಪಿಯಾಡ್ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿದ ಚಿಕ್ಕಜಾಜೂರು ಸಮೀಪದ ಹಿರೇಕಂದವಾಡಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಶನಿವಾರ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.
ತಾಲೂಕಿನಲ್ಲಿ 652 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಶೇ. 80ರಷ್ಟು ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಪ್ರಮಾಣ ಪತ್ರ ವಿತರಿಸಲಾಯಿತು. ಒಲಂಪಿಯಾಡ್ ಪರೀಕ್ಷೆ ಗಣಿತ, ವಿಜ್ಞಾನ, ಇಂಗ್ಲಿಷ್ ಮತ್ತು ಸಾಮಾನ್ಯ ಜ್ಞಾನ ವಿಷಯಗಳಲ್ಲಿ ವಿದ್ಯಾರ್ಥಿಗಳ ಸಾಮರ್ಥ್ಯ ಹೆಚ್ಚಿಸಲು ಸಹಾಯ ಮಾಡುತ್ತದೆ. ಈ ಪರೀಕ್ಷೆ ಕೇವಲ ಶಾಲಾ ಪಠ್ಯಕ್ರಮಕ್ಕೆ ಸೀಮಿತವಾಗದೆ ವಿದ್ಯಾರ್ಥಿಗಳನ್ನು ಆಳವಾದ ಜ್ಞಾನ ಮತ್ತು ಸಮಸ್ಯೆ ಪರಿಹರಿಸಲು, ಕೌಶಲ ಹೆಚ್ಚಿಸಲು ವಿನ್ಯಾಸಗೊಳಿದ ಪರೀಕ್ಷೆಯಾಗಿದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆ ಗುರುತಿಸಲು ಸಹಕಾರಿಯಾಗಿದೆ ಎಂದರು.
ರೈತ ಸಂಘದ ಅಧ್ಯಕ್ಷ ಇ.ಆರ್. ಈಶ್ವರಪ್ಪ, ಸಹ ಶಿಕ್ಷಕರಾದ ವೀರಭದ್ರ ನಾಯ್ಕ, ವಲಯ ಮೇಲ್ವಿಚಾರಕಿ ಶಾರದಾ, ತಾಲೂಕು ನೋಡಲ್ ಅಧಿಕಾರಿ ಅಜಯ್, ಸೇವಾ ಪ್ರತಿನಿಧಿಗಳಾದ ಸಂಗೀತ, ಶ್ರುತಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net