ಪ್ರತಿಭೆ ಗುರುತಿಸುವುದು ನಮ್ಮೆಲ್ಲರ ಕರ್ತವ್ಯ

 ಚಿತ್ರದುರ್ಗದಲ್ಲಿ ಗುರುವಾರ ಜಿಲ್ಲಾ ರೆಡ್ಡಿ ಜನಸಂಘದಿAದ ಆಯೋಜಿಸಿದ್ದ ಪ್ರತಿಭಾಪುರಸ್ಕಾರ, ಸಾರ್ಥಕ ಸೇವಾ ಅಭಿನಂದನಾ ಸಮಾ ರಂಭವನ್ನು ಸಂಘದ ಉಪಾಧ್ಯಕ್ಷ ಎಂ.ಕೆ. ಅನಂತರೆಡ್ಡಿ ಉದ್ಘಾಟಿಸಿದರು. ಜೆ. ಪರಶುರಾಮ್, ಡಿ.ಕೆ. ಶೀಲಾ, ಜಿ.ವೈ. ಸುರೇಶ್‌ಕುಮಾರ್ ಇತರರು ಇದ್ದರು.
ಚಿತ್ರದುರ್ಗದಲ್ಲಿ ಗುರುವಾರ ಜಿಲ್ಲಾ ರೆಡ್ಡಿ ಜನಸಂಘದಿAದ ಆಯೋಜಿಸಿದ್ದ ಪ್ರತಿಭಾಪುರಸ್ಕಾರ, ಸಾರ್ಥಕ ಸೇವಾ ಅಭಿನಂದನಾ ಸಮಾ ರಂಭವನ್ನು ಸಂಘದ ಉಪಾಧ್ಯಕ್ಷ ಎಂ.ಕೆ. ಅನಂತರೆಡ್ಡಿ ಉದ್ಘಾಟಿಸಿದರು. ಜೆ. ಪರಶುರಾಮ್, ಡಿ.ಕೆ. ಶೀಲಾ, ಜಿ.ವೈ. ಸುರೇಶ್‌ಕುಮಾರ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ರೆಡ್ಡಿ ಜನಸಂಘದಿAದ ಅಭಿನಂದನಾ ಸಮಾರಂಭ
  • ವಿದ್ಯಾರ್ಥಿಗಳು, ನಿವೃತ್ತರು ಸಾಧಕರಿಗೆ ಗೌರವ
  • ಸಂಘದಿAದ ವಿದ್ಯಾರ್ಥಿ ನಿಲಯ ಸ್ಥಾಪನೆ
ಚಿತ್ರದುರ್ಗ: ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವುದು ಸಮುದಾಯ, ಪಾಲಕರು, ಸಂಘ ಸಂಸ್ಥೆಗಳು ಹಾಗೂ ಶಿಕ್ಷಕರ ಕರ್ತವ್ಯವಾಗಿದೆ ಎಂದು ಜಿಲ್ಲಾ ರೆಡ್ಡಿ ಜನ ಸಂಘದ ಉಪಾಧ್ಯಕ್ಷ ಎಂ.ಕೆ. ಆನಂತರೆಡ್ಡಿ ಹೇಳಿದರು.
ಚಿತ್ರದುರ್ಗ ಜಿಲ್ಲಾ ರೆಡ್ಡಿ ಜನ ಸಂಘದಿAದ ನಗರದ ಕಮ್ಮರೆಡ್ಡಿ ಸಮುದಾಯಭವನದಲ್ಲಿ ಆಯೋಜಿಸಿದ್ದ ೨೦೨೪- ೨೫ ನೇ ಸಾಲಿನಲ್ಲಿ ಅತೀ ಹೆಚ್ಚು ಅಂಕಗಳಿಸಿದ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯು ವಿದ್ಯಾಥಿಗಳಿಗೆ ಪ್ರತಿಭಾ ಪುರಸ್ಕಾರ, ನಿವೃತ್ತ ಯೋಧ ರು, ಕೇಂದ್ರ, ರಾಜ್ಯ ಸರ್ಕಾರದ ನಿವೃತ್ತ ಅಽಕಾರಿ, ನೌಕರರು ಮತ್ತು ಸಮಯದಾಯದ ಸಾಧಕರಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ ಅದಕ್ಕೆ ಮನ್ನಣೆ ನೀಡಿದರೆ ಅವರ ಏಳಿಗೆಗೆ ನೆರವಾಗಲಿದೆ. ಈ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಿದರೆ ಮಕ್ಕಳ ಭವಿಷ್ಯ ರೂಪಿಸಬಹುದು ಎಂದರು.
ಸಂಘದ ಕಾರ್ಯದರ್ಶಿ ಡಿ.ಕೆ. ಶೀಲಾ ಮಾತನಾಡಿ, ಸಂಘದಿAದ ವಿದ್ಯಾರ್ಥಿ ನಿಲಯ ಸ್ಥಾಪನೆ, ಸಮುದಾಯದ ಮಕ್ಕಳಿಗೆ ಶಿಕ್ಷಣ ಕೊಡಿಸುವುದು ತುಂಬಾ ಕಷ್ಟವಾಗಿತ್ತು. ಗ್ರಾಮಾಂತರ ಪ್ರದೇಶದ ಮಕ್ಕಳಿಗೆ ಇರಲು ಜಾಗವಿಲ್ಲದೆ ಶಿಕ್ಷಣ ಮುಂದುವರಿಸುವುದು ಕಠಿಣವಾಗಿತ್ತು. ಇದನ್ನರಿತ ನಮ್ಮ ಹಿರಿಯರು ೧೯೧೬ರಲ್ಲಿ ಸಂಘ ಹಾಗೂ ವಿದ್ಯಾರ್ಥಿ ನಿಲಯ ಸ್ಥಾಪಿಸಿದರು ಎಂದರು.
ಸAಘದಿAದ ೨೦೨೩-೨೪ನೇ ಸಾಲಿನಲ್ಲಿ ೨೭೩ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ೫೭ ಲಕ್ಷ ರೂ. ಪ್ರದಾನ ಮಾಡಲಾಗಿದೆ. ಈ ಬಾರಿ ಎಸ್ಸೆಸ್ಸೆಲ್ಸಿಯ ೫೮ ಹಾಗೂ ದ್ವಿತೀಯ ಪಿಯುಸಿಯ ೧೦೬ ವಿದ್ಯಾರ್ಥಿಗಳು, ೨೫ ನಿವೃತ್ತ ನೌಕರರು, ಸೈನಿಕರು ಹಾಗೂ ಸಾಧಕರನ್ನು ಗೌರವಿಸಲಾಗಿದೆ ಎಂದರು.
ಸಂಘದ ಕಾರ್ಯದರ್ಶಿ ಜೆ. ಪರಶುರಾಮ್, ಖಂಜಾಚಿ ಜಿ.ವೈ. ಸುರೇಶ್‌ಕುಮಾರ್, ಡಾ. ಸಿದ್ಧಾರ್ಥ ಗುಂಡಾರ್ಪಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಡಾ. ಕಂಠೀರವ, ಬಾಲಸರಸ್ವತಿ, ಡಾ.ಎಸ್. ಸದಾಶಿವರೆಡ್ಡಿ, ಕೆ.ವಿ. ರಾಮಕÊಷ್ಣ, ವಿ.ಆರ್. ಮಂಜುನಾಥ್, ಕೆ.ಎಚ್. ಸುದರ್ಶನ ರೆಡ್ಡಿ, ಪಿ. ಚಂದ್ರರೆಡ್ಡಿ, ಡಾ.ಪಿ.ಟಿ. ಚಂದ್ರಹಾಸ್, ಡಾ. ಕೆ.ಜಿ. ರಾಘವರೆಡ್ಡಿ, ಎಸ್. ನಾಗರಾಜ್, ಡಾ.ಜಿ.ಟಿ. ತಿಪ್ಪಾರೆಡ್ಡಿ, ಜಿ.ಟಿ. ತಿಪ್ಪೇಶ್, ಆರ್.ಎಸ್. ವೇಣುಗೋಪಾಲ್, ಆರ್.ವಿ. ಮಾರುತೇಶರೆಡ್ಡಿ, ಡಾ.ಎಸ್.ಎನ್. ಹರೀಶ್, ಸುಜಾತಾ ಡಾ. ಜೀವಿತೇಶ್, ರೂಪಾ ಮುಕುಂದರೆಡ್ಡಿ, ಸುಮನಾ ತಿಮ್ಮಾರೆಡ್ಡಿ, ರೇಖಾ ಪ್ರತಾಪ್‌ರೆಡ್ಡಿ, ಇಂದಿರಮ್ಮ ಗೋವಿಂದಸ್ವಾಮಿ, ಶೀಲಾ ಸುರೇಶ್‌ರೆಡ್ಡಿ ಹಾಗೂ ತಾಲೂಕು ಸಂಘಗಳ ಪದಾಽಕಾರಿಗಳು, ಗಣ್ಯರು ಇದ್ದರು.
ಭೂಮಿಕಾ ಪ್ರಾರ್ಥಿಸಿದರು. ಪರಶುರಾಮ್ ಸ್ವಾಗತಿಸಿ, ಹರೀಶ್ ವಂದಿಸಿದರು. ಕೆ.ಟಿ. ತಿಮ್ಮಾರೆಡ್ಡಿ ನಿರೂಪಿಸಿದರು. ಇದೇ ಸಂದರ್ಭದಲ್ಲಿ ೨೦೨೪-೨೫ನೇ ಸಾಲಿನ ವಾರ್ಷಿಕ ಮಹಾಸಭೆ ಜರುಗಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net