ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳುವುದು ಅವಶ್ಯಕ

ಚಳ್ಳಕೆರೆ ತಾಲೂಕಿನ ಬೊಂಬೇರಹಳ್ಳಿಯಲ್ಲಿ ಆರು ಎಕರೆಯಲ್ಲಿ 120 ಚೀಲ ಸಾವಯವ ರಾಗಿ ಬೆಳೆದ ರೈತ ಕೆ.ಚಿಕ್ಕಣ್ಣ ಅವರಿಗೆ ಹೈದರಾಬಾದ್‌ನ ಐಸಿಎಆರ್ ಕಂಪನಿ ಪ್ರಶಸ್ತಿ ನೀಡಿ ಸನ್ಮಾನಿಸಿತು. ವಿಜ್ಞಾನಿಗಳಾದ ಡಾ.ಸಿ. ತಾರಾ ಸತ್ಯವತಿ, ಡಾ.ಕೆ. ಶ್ರೀನಿವಾಸಬಾಬು, ಡಾ. ಸಂಗಪ್ಪ, ಡಾ. ರಫಿ, ಡಾ. ಎಂ.ಎಲ್. ಜಾಟ್ ಇದ್ದರು.
ಚಳ್ಳಕೆರೆ ತಾಲೂಕಿನ ಬೊಂಬೇರಹಳ್ಳಿಯಲ್ಲಿ ಆರು ಎಕರೆಯಲ್ಲಿ 120 ಚೀಲ ಸಾವಯವ ರಾಗಿ ಬೆಳೆದ ರೈತ ಕೆ.ಚಿಕ್ಕಣ್ಣ ಅವರಿಗೆ ಹೈದರಾಬಾದ್‌ನ ಐಸಿಎಆರ್ ಕಂಪನಿ ಪ್ರಶಸ್ತಿ ನೀಡಿ ಸನ್ಮಾನಿಸಿತು. ವಿಜ್ಞಾನಿಗಳಾದ ಡಾ.ಸಿ. ತಾರಾ ಸತ್ಯವತಿ, ಡಾ.ಕೆ. ಶ್ರೀನಿವಾಸಬಾಬು, ಡಾ. ಸಂಗಪ್ಪ, ಡಾ. ರಫಿ, ಡಾ. ಎಂ.ಎಲ್. ಜಾಟ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪ್ರಗತಿಪರ ರೈತ ಕೆ. ಚಿಕ್ಕಣ್ಣ ಅನಿಸಿಕೆ
  • ಐಸಿಎಆರ್ ಮಂಡಳಿಯಿಂದ ಪ್ರಶಸ್ತಿ ಸ್ವೀಕಾರ
ಚಳ್ಳಕೆರೆ: ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳುವ ಜಾಣ್ಮೆ ರೈತರಲ್ಲಿ ಇರಬೇಕು ಎಂದು ಪ್ರಗತಿಪರ ರೈತ ಕೆ. ಚಿಕ್ಕಣ್ಣ ಹೇಳಿದ್ದಾರೆ.
ತಾಲೂಕಿನ ಬೊಂಬೇರಹಳ್ಳಿಯ ತನ್ನ ಜಮೀನಿನಲ್ಲಿ ಹೈದರಾಬಾದ್‌ನ ಭಾರತೀಯ ಕೃಷಿ ಸಂಶೋಧನಾ(ಐಇಅ್ಕ)ಮಂಡಳಿ ಪರಿಚಯಿಸಿದ ಏ್ಕ13 ರಾಗಿ ತಳಿ ಬಿತ್ತನೆ ಮಾಡಿ ಉತ್ರಮ ಫಸಲು ಪಡೆದ ಹಿನ್ನೆಲೆಯಲ್ಲಿ ಹೈದರಾಬಾದ್‌ನ ಐಸಿಎಆರ್ ಮಂಡಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿ ಗುರುವಾರ ಚಳ್ಳಕೆರೆ ನಗರಕ್ಕೆ ಆಗಮಿಸಿದ್ದ ವೇಳೆ ಮಾತನಾಡಿದರು.
ಬಯಲು ಸೀಮೆಯಲ್ಲಿ ಕೃಷಿ ಉಳಿಯಬೇಕು. ಇಲ್ಲಿನ ಕಡಿಮೆ ಮಳೆ, ಕೊಳವೆಬಾವಿ ಅವಲಂಬಿಸಿಕೊಂಡಿರುವ ರೈತರು ಸಾವಯವ ಪದ್ಧತಿ ರೂಢಿಸಿಕೊಳ್ಳಬೇಕು. ಪೋಷಕಾಂಶ ಬಳಕೆಯಲ್ಲಿ ಸಮತೋಲನವಿರಬೇಕು. ನೈಸರ್ಗಿಕ ಕೃಷಿ ವಿಧಾನ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ತಮ್ಮ ಹೊಲದಲ್ಲಿ ಕೊಟ್ಟಿಗೆ ಗೊಬ್ಬರ ಬಳಸಿ ರಾಗಿ ಬೆಳೆಯಲಾಗಿದೆ. ಸಂಶೋಧನಾ ಸಂಸ್ಥೆಯ ನಿಯಮ ಪಾಲನೆ ಮಾಡಲಾಗಿದೆ. ಒಂದು ಎಕರೆಗೆ 20 ಕ್ವಿಂಟಾಲ್ ನಂತೆ ಆರು ಎಕರೆಯಲ್ಲಿ 120 ಕ್ವಿಂಟಾಲ್ ಫಸಲು ಬಂದಿದೆ. ಗುಣಮಟ್ಟದ ರಾಗಿಯನ್ನು ಸಂಶೋಧನಾ ಸಂಸ್ಥೆಯೇ ಪ್ರತಿ ಕ್ವಿಂಟಾಲ್ಗೆ 4886ರೂ. ನಂತೆ ಖರೀದಿ ಮಾಡಿದೆ. ನಮ್ಮ ಪರಿಶ್ರಮ ಗುರುತಿಸಿ ರಾಜ್ಯ ಮಟ್ಟದ ಪ್ರಶಸ್ತಿಯನ್ನೂ ನೀಡಿದೆ. ಇದು ಬಯಲು ಸೀಮೆ ರೈತರಿಗೆ ಮಾದರಿ ಎಂದು ತಿಳಿಸಿದರು.
ಪ್ರತಿ ವರ್ಷ ಬೆಳೆಗಳ ಪುನರಾವರ್ತನೆಯಾಗಬಾರದು. ಸಾಂಪ್ರದಾಯಕ ಬೆಳೆ ಪದ್ಧತಿ ಕೈಬಿಡಬೇಕು. ರಸಗೊಬ್ಬರ ಬಳಕೆ ಕಡಿಮೆ ಮಾಡಬೇಕು ಎಂದು ಹೇಳಿದ್ದಾರೆ.
ಪೋಟೋ: ಸಿಎಲ್ ಕೆ: ಮೇ.7( ರೈತರು)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net