ಅಂಕಿ ಅಂಶಗಳಿಲ್ಲದ ಜೀವನ ಊಹಿಸಲು ಸಾಧ್ಯವಿಲ್ಲ

ಚಿತ್ರದುರ್ಗದಲ್ಲಿ ಶನಿವಾರ ಆಯೋಜಿಸಿದ್ದ ಸಾಂಖ್ಯಿಕ ದಿನಾಚರಣೆಯಲ್ಲಿ ಜಿಪಂ ಡಿಎಸ್ ಎಂ. ಬಾಬು, ಮೊಹಮದ್ ಯೂಸು-ï, ಸಿ.ಎಸ್. ಗಾಯತ್ರಿ, ರವಿಕುಮಾರ್ ಇತರರು ಇದ್ದರು.
ಚಿತ್ರದುರ್ಗದಲ್ಲಿ ಶನಿವಾರ ಆಯೋಜಿಸಿದ್ದ ಸಾಂಖ್ಯಿಕ ದಿನಾಚರಣೆಯಲ್ಲಿ ಜಿಪಂ ಡಿಎಸ್ ಎಂ. ಬಾಬು, ಮೊಹಮದ್ ಯೂಸು-ï, ಸಿ.ಎಸ್. ಗಾಯತ್ರಿ, ರವಿಕುಮಾರ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಪಂ ಡಿಎಸ್ ಎಂ. ಬಾಬು ಅಭಿಮತ
  • ದುರ್ಗದಲ್ಲಿ ಸಾಂಖ್ಯಿಕ ದಿನ ಆಚರಣೆ
  • ಜಿಲ್ಲಾ ಪಂಚಾಯಿತಿ
ಚಿತ್ರದುರ್ಗ: ಅಂಕಿ-ಅಂಶಗಳಿಲ್ಲದ ಜೀವನ ಊಹಿಸಿಕೊಳ್ಳಲು ಸಾಧ್ಯವಾಗದು ಎಂದು ಜಿಪಂ ಡಿಎಸ್ ಎಂ. ಬಾಬು ಅಭಿಪ್ರಾ ಯಪಟ್ಟರು.
ಜಿಲ್ಲಾ ಪಂಚಾಯಿತಿಯಲ್ಲಿ ಶನಿವಾರ ಆಯೋಜಿಸಿದ್ದ ಸಾಂಖ್ಯಿಕ ದಿನಾಚರಣೆಯಲ್ಲಿ ಮಾತನಾಡಿ, ಅಂಕಿ ಅಂಶಗಳು ಇಲ್ಲ್ಲದಿದ್ದರೆ ವಿಷಯಗಳನ್ನು ಅರ್ಥಮಾಡಿಕೊಳ್ಳಲು, ಯಾವುದೇ ಪ್ರಗತಿ ಸಾಽಸಲ ಸಾಧ್ಯವಾಗುತ್ತಿರಲಿಲ್ಲ. ಜೀವನದಲ್ಲಿ ಅಂಕಿಗಳ ಮಹತ್ವ ಅಪಾರ. ಜನ್ಮ ದಿನಾಂಕದ ಸಂಖ್ಯೆಗಳಿಂದಲೇ ನಮ್ಮ ಜೀವನ ಆರಂಭವಾಗುತ್ತದೆ ಎಂದರು.
ಬ್ಯಾಂಕಿಂಗ್‌ನಿಂದ ಹಿಡಿದು ಕಂದಾಯ ಇಲಾಖೆವರೆಗೆ ಸಂಖ್ಯೆಗಳೇ ಇಲ್ಲದೆ ಯಾವುದೇ ಕೆಲಸಗಳಾಗದು. ಆದ್ದರಿಂದ ಸಾಂಖ್ಯಿಕ ಇಲಾಖೆ ಸಿಬ್ಬಂದಿ ಯಾವುದೇ ಇಲಾಖೆಯಲ್ಲಾದರೂ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಬಹುದಾದ ವಿಶಾಲ ಅವಕಾಶ ಹೊಂದಿ ದ್ದಾರೆ. ಭಾರತೀಯ ಅಂಕಿ ಅಂಶಗಳ ಪಿತಾಮಹ, ಸಾಂಖ್ಯಿಕ ತಜ್ಞ ಪ್ರೊ.ಪಿ.ಸಿ. ಮಹಾಲನೋಬಿಸ್ ಜನ್ಮದಿನ ಜೂನ್ ೨೯ನ್ನು ಸಾಂಖ್ಯಿಕ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು.
ಸಾಂಖ್ಯಿಕ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ಮೊಹಮದ್ ಯೂಸು-ï ಮಾತನಾಡಿ, ಕಟ್ಟಡ ನಿರ್ಮಾಣಕ್ಕೆ ಅಡಿಪಾಯ ಹೇಗೆ ಮುಖ್ಯವೋ ಹಾಗೆಯೇ ದೇಶದ ಸರ್ವತೋಮುಖ ಅಭಿವೃದ್ಧಿಗೆ ಮತ್ತು ಯೋಜನೆಗಳ ಯಶಸ್ಸಿಗೆ ಸಾಂಖ್ಯಿಕ ದತ್ತಾಂಶಗಳು ಮೂಲ ಅಡಿಪಾಯವಾಗಿದೆ ಎಂದು ತಿಳಿಸಿದರು.
ಮಹಾಲನೋಬಿಸ್ ಅವರು ೧೯೩೧ರಲ್ಲಿ ಕೋಲ್ಕತ್ತಾದಲ್ಲಿ ಸಾಂಖ್ಯಿಕ ಸಂಸ್ಥೆ ಸ್ಥಾಪಿಸುವ ಮೂಲಕ ಭಾರತದಲ್ಲಿ ಸಾಂಖ್ಯಿಕ ಕ್ಷೇತ್ರ ಕ್ಕೆ ಬಲವಾದ ಅಡಿಪಾಯ ಹಾಕಿದರು. ದೇಶದ ೨ನೇ ಪಂಚವಾರ್ಷಿಕ ಯೋಜನೆ ಯಶಸ್ಸಿನ ಹಿಂದೆ ಅವರ ಕೊಡುಗೆ ಅಪಾರ ವಾಗಿದೆ ಎಂದರು. ಚಿತ್ರದುರ್ಗ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಚನ್ನಬಸಪ್ಪ ಉಪನ್ಯಾಸ ನೀಡಿದರು.
ದಿನಾಚರಣೆ ಅಂಗವಾಗಿ ಖ್ಞ್ಝಿಟ್ಚhಜ್ಞಿಜ ಠಿeಛಿ mಟಠಿಛ್ಞಿಠಿಜಿZ್ಝ ಟ್ಛ ಅbಞಜ್ಞಿಜಿoಠ್ಟಿZಠಿಜಿqಛಿ ಈZಠಿZ ವಿಷಯದ ಕುರಿತು ಏರ್ಪಡಿ ಸಿದ್ದ ಪ್ರಬಂಧ ಸ್ಪರ್ಧೆವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಹಾಗೂ ಸಾಂಖ್ಯಿಕ ಇಲಾಖೆ ನಿವೃತ್ತ ಅಽಕಾರಿಗಳು ಹಾಗೂ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಜಿಪಂ ಮುಖ್ಯ ಯೋಜನಾಽಕಾರಿ ಸಿ.ಎಸ್. ಗಾಯತ್ರಿ, ಜಿಲ್ಲಾ ಸಂಖ್ಯಾ ಸಂಗ್ರಹಣಾಽಕಾರಿ ರವಿ ಕುಮಾರ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net