ಎಲ್ಲರ ಮೇಲಿದೆ ಬಾಲ್ಯವಿವಾಹ ನಿಯಂತ್ರಣ ಹೊಣೆ

ಚಿತ್ರದುರ್ಗದಲ್ಲಿ ಶನಿವಾರ ಆಯೋಜಿಸಿದ್ದ ಬಾಲ್ಯ ವಿವಾಹ ನಿಯಂತ್ರಣ ಕುರಿತ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಜಿಪಂ ಸಿಇಒ ಡಾ.ಎಸ್. ಆಕಾಶ್ ಉದ್ಘಾಟಿಸಿದರು. ಡಾ. ರಂಗಸ್ವಾಮಿ, ಡಿ.ಒ. ಮುರಾರ್ಜಿ, ಎಸ್. ನಾಗಭೂಷಣ್, ಹರ್ಷವರ್ಧನ್ ಇತರರು ಇದ್ದರು.
ಚಿತ್ರದುರ್ಗದಲ್ಲಿ ಶನಿವಾರ ಆಯೋಜಿಸಿದ್ದ ಬಾಲ್ಯ ವಿವಾಹ ನಿಯಂತ್ರಣ ಕುರಿತ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಜಿಪಂ ಸಿಇಒ ಡಾ.ಎಸ್. ಆಕಾಶ್ ಉದ್ಘಾಟಿಸಿದರು. ಡಾ. ರಂಗಸ್ವಾಮಿ, ಡಿ.ಒ. ಮುರಾರ್ಜಿ, ಎಸ್. ನಾಗಭೂಷಣ್, ಹರ್ಷವರ್ಧನ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸರ್ಕಾರಿ ನೌಕರರು, ಸಿಬ್ಬಂದಿಗೆ ಜವಾಬ್ದಾರಿ ನೆನಪಿಸಿದ ಸಿಇಒ
  • ತಪ್ಪಿತಸ್ಥರದ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ
  • ಡಾ.ಎಸ್. ಆಕಾಶ್
ಚಿತ್ರದುರ್ಗ: ಬಾಲ್ಯವಿವಾಹ ತಡೆಗಟ್ಟುವುದು ಎಲ್ಲ ಸರ್ಕಾರಿ ನೌಕರರ ಜವಾಬ್ದಾರಿಯಾಗಿದೆ ಎಂದು ಜಿಪಂ ಸಿಇಒ ಡಾ.ಎಸ್. ಆಕಾಶ್ ಹೇಳಿದರು.
ಆಶ್ರಿತ ಸಂಸ್ಥೆ, ಜಿಲ್ಲಾಡಳಿತ, ಜಿಪಂ, ಪೋಲೀಸ್ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹಯೋಗದಲ್ಲಿ ಬಾಲ್ಯ ವಿ ವಾಹ ನಿಷೇಧ ಕುರಿತು ಗ್ರಾಪಂ ಅಭಿವೃದ್ಧಿ ಅಽಕಾರಿಗಳಿಗೆ ಜಿಲ್ಲಾ ಪಂಚಾಯಿತಿಯಲ್ಲಿ ಶನಿವಾರ ಏರ್ಪಡಿಸಿದ್ದ ಒಂದು ದಿನದ
ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಬಾಲ್ಯ ವಿವಾಹ ನಿಯಂತ್ರಣ ಹೊಣೆ ಸಿಬ್ಬಂದಿ, ಅಽಕಾರಿಗಳ ಮೇಲಿದೆ. ಚಿತ್ರದುರ್ಗವನ್ನು ಬಾಲ್ಯ ವಿವಾಹ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಎಲ್ಲರೂ ಶ್ರಮಿಸಬೇಕಿದೆ ಎಂದರು.
ಸರ್ಕಾರಗಳು ಬಾಲ್ಯವಿವಾಹ ಪದ್ಧತಿ ನಿರ್ಮೂಲನೆಗೆ ಕಂಕಣ ತೊಟ್ಟಿವೆ. ಈ ದಿಸೆಯಲ್ಲಿ ಸರ್ಕಾರದ ಆಶಯಕ್ಕೆ ಪೂರಕವಾಗಿ ಕೆಲಸ ಮಾಡುವುದು ಪ್ರತಿಯೊಬ್ಬ ಸರ್ಕಾರಿ ನೌಕರರ ಜವಾಬ್ದಾರಿಯಾಗಿದೆ. ಬಾಲ್ಯವಿವಾಹ ನಿಯಂತ್ರಣ ಸಂಬAಽಸಿದ ಇಲಾಖೆ ಜವಾಬ್ದಾರಿ ಎಂದು ಭಾವಿಸದೆ, ಎಲ್ಲರೂ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಸಮಸ್ಯೆ ನಿರ್ಲಕ್ಷ್ಯಿಸುವಂಥ ಸಿಬ್ಬಂದಿ, ಅಽಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು. ಮಾಹಿತಿ ಆಧರಿಸಿ ತಕ್ಷಣ ಬಾಲ್ಯ ವಿವಾಹ ನಿಯಂತ್ರಣಕ್ಕೆ ಮುಂದಾಗಬೇಕು.
ಪಿಡಿಒಗಳು ಕೂಡ ಗಂಭೀರವಾಗಿ ಈ ಸಮಸ್ಯೆಯನ್ನು ಪರಿಗಣಿಸಬೇಕು. ಈಗಾಗಲೇ ಬಾಲ್ಯವಿವಾಹ ಆಗಿದ್ದರೆ ಅದರ ಮಾಹಿತಿ ಪಡೆದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದರು.
ಜಿಪA ಉಪ ಕಾರ್ಯದರ್ಶಿ ಡಾ. ರಂಗಸ್ವಾಮಿ ಮಾತನಾಡಿ, ಪಿಡಿಒಗಳು ತಮ್ಮ ಜವಾಬ್ದಾರಿ ಅರಿತು ಕಾರ್ಯ ನಿರ್ವಹಿಸಿದರೆ ಬಾಲ್ಯವಿವಾಹ ತಡೆಗಟ್ಟಲು ಸಾಧ್ಯವಿದೆ. ನಿರ್ಲಕ್ಷಿಸಿದರೆ ನೌಕರರೇ ನೇರ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದರು.
ಆಶ್ರಿತ ಸಂಸ್ಥೆ ಜಿಲ್ಲಾ ಸಂಯೋಜಕ ಡಿ.ಒ. ಮುರಾರ್ಜಿ ಉಪನ್ಯಾಸ ನೀಡಿದರು. ಡಯಟ್ ಉಪ ಪ್ರಾಚಾರ್ಯ ಎಸ್. ನಾಗ ಭೂಷಣ್, ಆಶ್ರಿತ ಸಂಸ್ಥೆ ತಾಲೂಕು ಕಾರ್ಯಕರ್ತರಾದ ಹರ್ಷವರ್ಧನ, ಭಟ್ರಹಳ್ಳಿ ಧನಂಜಯ, ದೇವೀರಮ್ಮ, ಜಿಲ್ಲಾ ಕಾರ್ಯಕ್ರಮ ಸಹಾಯಕ ಚಂದ್ರಪ್ಪ, ಸುಷ್ಮಾ, ಮೇಘಾ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net