ಪ್ರತಿಯೊಬ್ಬರೂ ಪರಿಸರ ಕಾಳಜಿ ಮಾಡುವುದು ಅವಶ್ಯ

ಐಮಂಗಲ ಗ್ರಾಮದ ಪೊಲೀಸ್ ತರಬೇತಿ ಶಾಲೆಯಲ್ಲಿ ಸಸಿ ನೆಡುವ ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಹಾಗೂ ಎಸ್ಪಿ ಪಿ. ಪಾಪಣ್ಣ, ಡಿವೈಎಸ್ಪಿ ಬಿ. ಪರಶುರಾಮ್, ನಾಗಯ್ಯ ಹಿರೇಮಠ್, ಸೂರ್ಯಪ್ರಕಾಶ್, ಸಾಗರ್, ನರಸಿಂಹ ಮೂರ್ತಪ್ಪ, ರಾಜೇಂದ್ರ ರಾಥೋಡ್ ಇತರರು ಇದ್ದರು. environment
ಐಮಂಗಲ ಗ್ರಾಮದ ಪೊಲೀಸ್ ತರಬೇತಿ ಶಾಲೆಯಲ್ಲಿ ಸಸಿ ನೆಡುವ ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಹಾಗೂ ಎಸ್ಪಿ ಪಿ. ಪಾಪಣ್ಣ, ಡಿವೈಎಸ್ಪಿ ಬಿ. ಪರಶುರಾಮ್, ನಾಗಯ್ಯ ಹಿರೇಮಠ್, ಸೂರ್ಯಪ್ರಕಾಶ್, ಸಾಗರ್, ನರಸಿಂಹ ಮೂರ್ತಪ್ಪ, ರಾಜೇಂದ್ರ ರಾಥೋಡ್ ಇತರರು ಇದ್ದರು. environment
Published on

ಪ್ರಮುಖ ಮುಖ್ಯಾಂಶಗಳು

  • ಪ್ರಾಚಾರ್ಯ ಪಿ. ಪಾಪಣ್ಣ ಹೇಳಿಕೆ
ಐಮಂಗಲ: ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದ್ದು ಸಸಿ ನೆಡುವ ಮೂಲಕ ಅದರ ಕಾಳಜಿ ಮಾಡಬೇಕು ಎಂದು ಪೊಲೀಸ್ ತರಬೇತಿ ಶಾಲೆಯ ಪ್ರಾಚಾರ್ಯ ಪಿ. ಪಾಪಣ್ಣ ಹೇಳಿದರು. environment
ಗ್ರಾಮದ ಪೊಲೀಸ್ ತರಬೇತಿ ಶಾಲೆಯಲ್ಲಿ ಮಂಗಳವಾರ ಬೆಂಗಳೂರಿನ ಶಾಹಿ ಎಕ್ಸ್‌ಪೋರ್ಟ್ ಜವಗೊಂಡನಹಳ್ಳಿ ಘಟಕದಿಂದ ಹಮ್ಮಿಕೊಳ್ಳಲಾಗಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಪ್ರಕೃತಿ ನಾಶದಿಂದ ಶುದ್ಧಗಾಳಿ ದೊರೆಯದೆ ವಾತಾವರಣ ಕಲುಷಿತವಾಗುತ್ತಿರುವುದು ಆತಂಕ ಸೃಷ್ಟಿಸುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಪ್ರತಿಯೊಬ್ಬರೂ ತಮ್ಮ ಮನೆಯ ಸಮೀಪದ ಖಾಲಿ ಸ್ಥಳಗಳಲ್ಲಿ ಸಸಿಗಳನ್ನು ನೆಟ್ಟು ಬೆಳೆಸಬೇಕು ಎಂದರು.
ಶಾಹಿ ಎಕ್ಸ್‌ಪೋರ್ಟ್‌ನ ಸಹಾಯಕ ವ್ಯವಸ್ಥಾಪಕ ನಾಗಯ್ಯ ಹಿರೇಮಠ್ ಮಾತನಾಡಿ, ಸಿಎಸ್‌ಆರ್ ನಿಧಿಯಿಂದ ಅಂಕುರ ಯೋಜನೆ ಅಡಿ ಪೊಲೀಸ್ ತರಬೇತಿ ಶಾಲೆಯಲ್ಲಿ 86 ವಿವಿಧ ಬಗೆಯ ಸುಮಾರು 10 ಸಾವಿರ ಸಸಿಗಳನ್ನು ಹಾಕಿ 2 ವರ್ಷಗಳ ಕಾಲ ನಮ್ಮ ಸಂಸ್ಥೆಯಿಂದ ಪೋಷಣೆಯ ಜವಾಬ್ದಾರ ತೆಗೆದುಕೊಳ್ಳಲಾಗುವುದು. ಪ್ರತಿ ವರ್ಷ ನಮ್ಮ ಸಂಸ್ಥೆಯ ಸಾಮಾಜಿಕ ಕಾರ್ಯಗಳಾದ ಶಿಕ್ಷಣ, ಆರೋಗ್ಯ, ಕೌಶಲ್ಯ, ಪರಿಸರ ಕಾಳಜಿ ಹೊಂದಿ ಅನೇಕ ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದರು.
ಡಿವೈಎಸ್ಪಿ ಬಿ. ಪರಶುರಾಮ್, ಸಿಪಿಐ ಡಿ. ಶಿವಕುಮಾರ್, ಪಿಎಸ್‌ಐ ಶರಣಬಸವ, ಶಾಹಿ ಎಕ್ಸ್‌ಪೋರ್ಟ್‌ನ ಸೂರ್ಯಪ್ರಕಾಶ್, ಸಹಾಯಕ ವ್ಯವಸ್ಥಾಪಕ ಸಾಗರ್, ಎಚ್‌ಆರ್ ನರಸಿಂಹಮೂರ್ತಪ್ಪ, ರಾಜೇಂದ್ರ ರಾಥೋಡ್, ಸೇವಾನಿರತ ಪ್ರಶಿಕ್ಷಣಾರ್ಥಿಗಳು, ಸಿಬ್ಬಂದಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net