ಚಿತ್ರದುರ್ಗದ ಲಿಡ್ಕರ್ ಲೆದರ್ ಎಂಪೋರಿಯAಗೆ ಡಾ.ಬಾಬು ಜಗಜೀವನ್‌ರಾಂ ಚರ್ಮ ಉತ್ಪನ್ನಗಳ ಅಭಿವೃದ್ಧಿ ನಿಗಮದ ಎಂ.ಡಿ. ಡಾ.ಕೆ.ಎಂ. ವಸುಂಧರಾ ಭೇಟಿ ನೀಡಿದ್ದರು. ಲಿಡ್ಕರ್ ಉಪಪ್ರಧಾನ ವ್ಯವಸ್ಥಾಪಕ ಪ್ರಾಣೆÃಶ್, ಹಿರಿಯ ಸಹಾಯಕ ನಾಗರಾಜ, ಜಿಲ್ಲಾ ಸಂಯೋಜಕ ವೆಂಕಟೇಶ್ ಇತರರು ಇದ್ದರು.
ಚಿತ್ರದುರ್ಗ: ಡಾ.ಬಾಬು ಜಗಜೀವನ್‌ರಾಂ ಚರ್ಮ ಉತ್ಪನ್ನಗಳ ಅಭಿವೃದ್ಧಿ ನಿಗಮ(ಲಿಡ್ಕರ್)ವು ವೈವಿಧ್ಯಮಯ ಉತ್ಪನ್ನಗಳನ್ನು ಪರಿಚಯಿಸಲು ಮುಂದಾಗಿದೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಡಾ.ಕೆ.ಎಂ. ವಸುಂಧರಾ ಹೇಳಿದರು.
ನಗರದ ಲಿಡ್ಕರ್ ಭವನಕ್ಕೆ ಸ್ಥಳಾಂತರಗೊAಡಿರುವ ಲಿಡ್ಕರ್‌ಲೆದರ್ ಎಂಪೋರಿಯAಗೆ ಗುರುವಾರ ಭೇಟಿ ನೀಡಿ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಕ್ಕಳಿಗೆ ಲೆದರ್ ಶೂ ಹಾಗೂ ಬ್ಯಾಗ್‌ಗಳ ಮಾರಾಟ ಮಾಡಲಿದೆ ಎಂದು ತಿಳಿಸಿದರು.
೧೯೭೬ರಲ್ಲಿ ಸ್ಥಾಪನೆಗೊಂಡ ನಿಗಮವು ಚರ್ಮ ಕುಶಲ ಕರ್ಮಿಗಳ ಏಳಿಗೆಗೆ ಶ್ರಮಿಸುತ್ತಿದೆ. ಲಿಡ್ಕರ್ ಎಂಬ ಬ್ರಾಂಡ್‌ನೊAದಿಗೆ ಉತ್ತಮ ಗುಣಮಟ್ಟದ ಚರ್ಮದ ಪಾದರಕ್ಷೆ , ಬ್ಯಾಗ್, ಪರ್ಸ್, ಬೆಲ್ಟ್ ಮಾರಾಟ ಮಾಡಲಾಗುತ್ತಿದೆ. ನಿಗಮದಲ್ಲಿ ವರ್ಷಕ್ಕೆ ಸರಾಸರಿ ೨೫-೩೦ ಕೋಟಿ ರೂ. ವಹಿವಾಟಿದೆ ಎಂದರು.
ಬೆಂಗಳೂರು, ಮೈಸೂರು, ಚಿತ್ರದುರ್ಗ, ದಾವಣಗೆರೆ ಸೇರಿ ೮ ನಗರಗಳಲ್ಲಿ ತೆರೆದಿರುವ ಎಂಪೋರಿಯAಗಳ ಮೂಲಕ ಗ್ರಾಹಕರಿಗೆ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ. ನಿಗಮ ಲಾಭದ ಹಾದಿಗೆ ಮರಳಿದೆ. ಉತ್ಪನ್ನಗಳ ಗುಣಮಟ್ಟದಲ್ಲಿ ರಾಜಿ ಇಲ್ಲ. ಕುಶಲ ಕ ರ್ಮಿಗಳಿಗೆ ತರಬೇತಿ ನೀಡಿ ಅತ್ಯುನ್ನತ ಗುಣಮಟ್ಟದ ಚರ್ಮದ ವಸ್ತುಗಳನ್ನು ಸಿದ್ಧಪಡಿಸಿ, ಸ್ಪರ್ಧಾತ್ಮಕ ದರದಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಕೊಲ್ಲಾಪುರಿ ಚಪ್ಪಲಿಗೆ ಜಿ.ಐ. ಮಾರ್ಕಿಂಗ್ ಸ್ಟೇಟಸ್ ಇದ್ದು, ಕೊಲ್ಲಾಪುರಿ ಪಾದರಕ್ಷೆಗಳನ್ನು ಮಾರಾಟ ಮಾಡಲು ಜರ್ಮನಿಯ ಪ್ರಾಡಾ ಕಂಪನಿ ಲಿಡ್ಕರ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ರಾಜ್ಯದ ಕುಶಲಕರ್ಮಿಗಳು ತಯಾರಿಸುವ ಕೊಲ್ಲಾಪುರ ಪಾದರಕ್ಷೆ ಹಾಗೂ ಇತರೆ ಚರ್ಮದ ಉತ್ಪನ್ನಗಳನ್ನು ಖರೀದಿಸಿ ಅಂತಾರಾಷ್ಟಿçÃಯ ಮಟ್ಟದಲ್ಲಿ ಮಾರಾಟ ಮಾಡಲು ಕಂಪನಿ ಮುಂದೆ ಬಂದಿದೆ. ಈ ಬಗ್ಗೆ ಮ ಹಾರಾಷ್ಟç ಹಾಗೂ ಕರ್ನಾಟಕ ಚರ್ಮ ಉತ್ಪನಗಳ ನಿಗಮಗಳೊಂದಿಗೆ ಒಡಂಬಡಿಕೆಯಾಗಿದೆ. ಚಿತ್ರದುರ್ಗದ ಲೆದರ್ ಎಂಪೋರಿಯA ನಲ್ಲಿ ಜ.೧ರಿಂದ ಜ.೧೮ರವರೆಗೆ ಶೇ.೨೦ ವಿಶೇಷ ರಿಯಾಯಿತಿ ಇರುತ್ತದೆ ಎಂದರು.
ನಿಗಮದ ಲೆಕ್ಕಪತ್ರಗಳ ವಾರ್ಷಿಕ ಆಡಿಟ್ ಬಾಕಿಯಿದೆ. ಇದನ್ನು ಪೂರೈಸಿ ಸರ್ಕಾರದಿಂದ ಟೆಂಡರ್‌ನಲ್ಲಿ ಭಾಗವಹಿಸಲು ತೆರಿಗೆ ವಿನಾ ಯಿತಿ ಕೋರಲಾಗುತ್ತಿದೆ. ಇದು ಸಾಧ್ಯವಾದರೆ ಲಿಡ್ಕರ್‌ನಿಂದ ಸರ್ಕಾರಿ, ಖಾಸಗಿ ಶಾಲೆಗಳ ಮಕ್ಕಳ ಶೂ, ಸಾಕ್ಸ್, ಬ್ಯಾಗ್‌ಗಳ ಸರಬರಾಜು ಟೆಂಡರ್ ಪಡೆಯಬಹುದು. ಇದರಿಂದ ಕುಶಲಕರ್ಮಿಗಳಿಗೆ ಹೆಚ್ಚಿನ ಉದ್ಯೋಗವಕಾಶಗಳು ದೊರೆಯುತ್ತವೆ. ಸಣ್ಣ ಪ್ರಮಾಣದಲ್ಲಿ ಉತ್ಪಾದನಾ ಘಟಕಗಳನ್ನು ತೆರೆಯಲು ಕೂಡ ಸರ್ಕಾರದ ಅನುಮತಿ ನಿರೀಕ್ಷಿಸಲಾಗುತ್ತಿದೆ ಎಂದು ತಿಳಿಸಿದರು.
೨೦೧೦ರಿಂದ ಸಮಾಜ ಕಲ್ಯಾಣ ಇಲಾಖೆಯಡಿ ಲಿಡ್ಕರ್ ಕಾರ್ಯನಿರ್ವಹಿಸುತ್ತಿದೆ. ಚರ್ಮದ ಉತ್ಪನ್ನಗಳ ತಯಾರಿಕೆ, ಸ್ವ ಉದ್ಯೋಗ, ತರಬೇತಿ, ಉದ್ಯಮಗಳ ಅಭಿವÊದ್ಧಿಗೆ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತರಲಾಗುತ್ತಿದೆ. ನಿಗಮದಲ್ಲಿ ಅಽಕಾರಿ ಹಾಗೂ ಸಿಬ್ಬಂದಿ ಸೇರಿ ೬೨ ಜನರು ಕೆಲಸ ಮಾಡುತ್ತಿದ್ದಾರೆ. ಇದರೊಂದಿಗೆ ಸಾವಿರಾರು ಕುಶಲಕರ್ಮಿಗಳು ನಿಗಮದೊಂದಿಗೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ಲಿಡ್ಕರ್ ಉಪಪ್ರಧಾನ ವ್ಯವಸ್ಥಾಪಕ ಪ್ರಾಣೇಶ್, ಹಿರಿಯ ಸಹಾಯಕ ನಾಗರಾಜ, ಜಿಲ್ಲಾ ಸಂಯೋಜಕ ವೆಂಕಟೇಶ್, ಮಲ್ಲಿಕಾರ್ಜುನ್, ಕುಮಾರಸ್ವಾಮಿ, ಲಕ್ಷ÷್ಮಣ್, ಲಕ್ಷಿ÷್ಮ ಇತರರು ಇದ್ದರು.