ಚಿತ್ರದುರ್ಗ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿದ್ದ ಎಸ್‌ಎಲ್‌ವಿ ಮಹಿಳಾ ಮಾರ್ಟ್ ಮತ್ತು ಮಾರ್ಕೆಟಿಂಗ್ ಕಂಪನಿ ವಿರುದ್ಧ ದಾಖಲಾ ಗಿರುವ ಕೋಟ್ಯಂತರ ರೂ.ವಂಚನೆ ಪ್ರಕರಣದ ತನಿಖೆಯನ್ನು ನಗರದ ಕೋಟೆ ಪೊಲೀಸರು ಚುರುಕುಗೊಳಿಸಿದ್ದಾರೆ.
ಕಂಪನಿ ಮಾಲೀಕ, ಆಂಧ್ರ ಪ್ರದೇಶದ ನೆಲ್ಲೂರು ಮೂಲದ ಬೊಮ್ಮಲ ರಾಜೇಶ್ ಎಂಬಾತನನ್ನು ಬೆಂಗಳೂರು ರಾಮಮೂರ್ತಿ ನಗರ ಪೊಲೀಸರು ಈಗಾಗಲೇ ಬಂಽಸಿದ್ದಾರೆ. ನ್ಯಾಯಾಂಗ ಬಂಧನದಲ್ಲಿದ್ದ ಈತನನ್ನು ಕೋರ್ಟ್ ಅನುಮತಿಯೊಂದಿಗೆ ಕೋಟೆ ಹಾಗೂ ತುಮಕೂರಿನ ಜಯನಗರ ಠಾಣೆ ಪೊಲೀಸರು ೪-೫ ದಿನಗಳ ಹಿಂದೆ ವಿಚಾರಣೆ ನಡೆಸಿದ್ದಾರೆ.
ಪ್ರಕರಣ ಸಂಬAಧ ತಲೆ ಮರೆಸಿಕೊಂಡಿರುವ ಶಾಖಾ ವ್ಯವಸ್ಥಾಪಕ ಹೇಮಂತ್‌ರಾಜ್ ಹಾಗೂ ಕೃಷ್ಣಮೂರ್ತಿ ಪತ್ತೆಗೆ ಕೋಟೆ ಪೊ ಲೀಸರು ಎರಡು ವಿಶೇಷ ತಂಡಗಳನ್ನು ರಚಿಸಿದ್ದಾರೆ. ವಿವಿಧ ಜಿಲ್ಲೆಗಳಲ್ಲಿದ್ದ ಕಂಪನಿ ಶಾಖಾ ಕಚೇರಿಗಳಿಂದ ಈವರೆಗೆ ೧೬೬ ಜನರ ಠೇವಣಿ ದಾಖಲೆಗಳು ಹಾಗೂ ಈವರೆಗೆ ಅಂದಾಜು ೪.೮೫ ಕೋಟಿ ರೂ. ಠೇವಣಿ ಮೊತ್ತದ ವಿವರವನ್ನು ಸಂಗ್ರಹಿಸಿದ್ದಾರೆ.
ತುಮಕೂರು ಹಾಗೂ ಚಿತ್ರದುರ್ಗದಲ್ಲಿರುವ ಒಟ್ಟು ೫ ಬ್ಯಾಂಕ್ ಖಾತೆಗಳನ್ನು ಪೊಲೀಸರು ಸ್ಥಗಿತಗೊಳಿಸಿ(ಊ್ಟಛಿಛ್ಢಿಛಿ)ದ್ದಾರೆ. ಈಗಾಗಲೇ ರಾಯಚೂರು, ಹಾವೇರಿ, ಬೆಂಗಳೂರಿನ ರಾಮಮೂರ್ತಿ ನಗರ, ತುಮಕೂರು ಮತ್ತಿತರ ಕಡೆ ಈ ಕಂಪನಿ ಪ್ರಮುಖರ ವಿರುದ್ಧ ಪ್ರಕರಣ ದಾಖಲಾಗಿದೆ.
ಮನೆಯಲ್ಲೇ ಅರೆಕಾಲಿಕ, ಪೂರ್ಣಾವಽ ಉದ್ಯೋಗದ ಹೆಸರಲ್ಲಿ ರಾಜ್ಯಾದ್ಯಂತ ಜನರಿಂದ ಅಂದಾಜು ೮೬೦ ಕೋಟಿ ರೂ. ಸಂಗ್ರ ಹಿಸಿ ವಂಚಿಸಿದ ಆರೋಪ ಈ ಕಂಪನಿ ಮೇಲಿದೆ. ಅಗತ್ಯ ತರಬೇತಿ, ಯಂತ್ರೋಪಕರಣ ಮತ್ತು ಕಚ್ಚಾ ವಸ್ತುಗಳನ್ನು ಒದಗಿಸಿ ಮನೆಯಲ್ಲೇ ತಮ್ಮ ಉದ್ಯೋಗಕ್ಕೆ ಬೆಂಬಲ ನೀಡುವುದಾಗಿ ಜನರಿಂದ ವಿಶೇಷವಾಗಿ ಮಹಿಳೆಯರಿಂದ ಭದ್ರತಾ ಠೇವಣಿಯನ್ನು ಕಂಪನಿ ಸಂಗ್ರಹಿಸಿತ್ತು.
೧೬ ಪ್ಯಾಕಿಂಗ್‌ಬೇಸ್ಡ್ ಹಾಗೂ ೨೨ ಯಂತ್ರೋಪಕರಣ ಆಧರಿಸಿ ಮನೆಯಿಂದಲೇ ಸಿದ್ಧಪಡಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ಹಾಗೂ ವೇತನ ಕೊಡುವುದಾಗಿ ಕಂಪನಿ ತಿಳಿಸಿತ್ತು. ಆದರೆ, ಯಾವಾಗ ಕಂಪನಿಯು ವೇತನ, ಉದ್ಯೋಗಕ್ಕೆ ಕಚ್ಚಾ ವಸ್ತು ಕೊಡದೆ ಸತಾಯಿಸತೊಡಗಿತೋ ಆಗ ಇದರ ವಿರುದ್ಧ ವಂಚನೆ ಆರೋಪಗಳು ವ್ಯಾಪಕವಾಗಿ ಕೇಳಿ ಬರತೊಡಗಿದವು. ಚಿತ್ರದುರ್ಗ ಜಿಲ್ಲೆ ಸೇರಿ ಸಾವಿರಾರು ಜನರಿಗೆ ವಂಚನೆಗೆ ಆಗಿದೆ ಎಂದು ಹೇಳಲಾಗುತ್ತಿದೆ.
ಇತ್ತೀಚೆಗೆ ಕೋಟೆ ಪೊಲೀಸರು ತುಮಕೂರಿಗೆ ತೆರಳಿ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಬೊಮ್ಮಲ ರಾಜೇಶನನ್ನು ವಿಚಾರಣೆ ನಡೆಸಿದ್ದಾರೆ. ಈ ವಂಚನೆ ಪ್ರಕರಣದ ತನಿಖೆ ಮುಂದುವರಿದಿದೆ.