ಸುಸಜ್ಜಿತ ಸಮ್ಮೇಳನ ಸಭಾಂಗಣ ನಿರ್ಮಾಣಕ್ಕೆ ಸೂಚನೆ

ಚಿತ್ರದುರ್ಗ ಜಿಲ್ಲಾ ಪೊಲೀಸ್ ಕಚೇರಿಗೆ ಪೊಲೀಸ್ ಮಹಾ ನಿರ್ದೇಶಕ ಡಾ.ಎಂ.ಎ. ಸಲೀಂ ಅವರು ಮಂಗಳವಾರ ಭೇಟಿ ನೀಡಿ ಗೌರವ ವಂದನೆ ಸ್ವೀಕರಿಸಿದರು. ಐಜಿಪಿ ರವಿಕಾಂತೇಗೌಡ, ಎಸ್‌ಪಿ ರಂಜಿತ್‌ಕುಮಾರ್ ಬಂಡಾರು, ಎಎಸ್‌ಪಿ ಡಾ. ಶಿವಕುಮಾರ್ ಇದ್ದರು.
ಚಿತ್ರದುರ್ಗ ಜಿಲ್ಲಾ ಪೊಲೀಸ್ ಕಚೇರಿಗೆ ಪೊಲೀಸ್ ಮಹಾ ನಿರ್ದೇಶಕ ಡಾ.ಎಂ.ಎ. ಸಲೀಂ ಅವರು ಮಂಗಳವಾರ ಭೇಟಿ ನೀಡಿ ಗೌರವ ವಂದನೆ ಸ್ವೀಕರಿಸಿದರು. ಐಜಿಪಿ ರವಿಕಾಂತೇಗೌಡ, ಎಸ್‌ಪಿ ರಂಜಿತ್‌ಕುಮಾರ್ ಬಂಡಾರು, ಎಎಸ್‌ಪಿ ಡಾ. ಶಿವಕುಮಾರ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಽಕಾರ ಸ್ವೀಕರಿಸಿದ ಬಳಿಕ ದುರ್ಗದ ಡಿಪಿಒಗೆ ಡಿಜಿಪಿ ಸಲೀಂ ಭೇಟಿ
  • ಪೊಲೀಸ್ ಕುಟುಂಬ ವರ್ಗದವರ ಕುಂದು ಕೊರತೆ ಆಲಿಕೆ
  • ಪ್ರಗತಿ ಪರಿಶೀಲನೆ

ಚಿತ್ರದುರ್ಗ:

ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿ(ಡಿಜಿ ಮತ್ತು ಐಜಿಪಿ)ಅಽಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಡಾ. ಎಂ.ಎ.ಸಲೀA ಅ ವರು ಜಿಲ್ಲಾ ಪೊಲೀಸ್ ಕಚೇರಿಗೆ ಮಂಗಳವಾರ ಭೇಟಿ ನೀಡಿದರು.

ಜಿಲ್ಲೆಯ ಪೊಲೀಸ್ ಅಽಕಾರಿಗಳ ಜತೆ ಎರಡು ತಾಸು ಸಭೆ ನಡೆಸಿದರು. ಜಿಲ್ಲೆಯಲ್ಲಾದ ನಾನಾ ಅಪರಾಧ ಪ್ರಕರಣಗಳು ಹಾಗೂ ಇವುಗಳ ತನಿಖೆ ಯಲ್ಲಿ ಆಗಿರುವ, ರಸ್ತೆ ಅಪಘಾತಗಳ ನಿಯಂತ್ರಣಕ್ಕೆ ಕ್ರಮ ಸೇರಿದಂತೆ ನಾನಾ ಪ್ರಕರಣಗಳ ಪ್ರಗತಿ ಪರಿಶೀಲನೆ ನಡೆಸಿದರು.

ಸಭೆ ಬಳಿಕ ಪೊಲೀಸ್ ಅಽಕಾರಿಗಳು, ಕಚೇರಿ ಅಽಕಾರಿ, ಸಿಬ್ಬಂದಿಯೊAದಿಗೆ ಪೊಟೋ ಸೆಷನ್ ನಡೆಯಿತು. ಡಿಪಿಒ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಅತ್ಯಾಧುನಿಕ ಕಮಾಂಡ್ ಸೆಂಟರ್ ಕಾಮಗಾರಿ ವೀಕ್ಷಿಸಿದರು. ಸಮ್ಮೇಳನ ಸಭಾಂಗಣ ಸುಸಜ್ಜಿತವಾಗಿ ಹಾಗೂ ವಿಶಾಲವಾಗಿರಬೇಕು ಎಂದು ತಿಳಿಸಿದರು.

ಬಳಿಕ ಜಿಲ್ಲಾ ಸಶಸ್ತç ಪೊಲೀಸ್ ಪಡೆದ ಆವರಣದಲ್ಲಿ ಪೊಲೀಸ್ ಕುಟುಂಬ ವರ್ಗದವರ ಕುಂದು ಕೊರತೆ ಆಲಿಸಿದರು. ಐಜಿಪಿ ರವಿ ಕಾಂತೇಗೌಡ, ಎಸ್‌ಪಿ ರಂಜಿತ್‌ಕುಮಾರ್ ಬಂಡಾರು, ಎ ಎಸ್‌ಪಿ ಡಾ. ಶಿವಕುಮಾರ್, ಡಿವೈಎಸ್‌ಪಿಗಳು, ಸರ್ಕಲ್ ಇನ್ಸ್ಪೆಕ್ಟರ್‌ಗಳು,ಪೊಲೀಸ್ ಇನ್ಸ್ಪೆಕ್ಟರ್‌ಗಳು ಹಾಗೂ ಪಿಎಸ್‌ಐಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net