ಪರಿಶಿಷ್ಟ ಜಾತಿ, ಪಂಗಡಕ್ಕೆ ಅನ್ಯಾಯ

ಚಿತ್ರದುರ್ಗದಲ್ಲಿ ಶುಕ್ರವಾರ ಸಂಸದ ಗೋವಿಂದ ಎಂ.ಕಾರಜೋಳ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಕೆ.ಟಿ.ಕುಮಾರಸ್ವಾಮಿ, ಮೋಹನ್, ಹನುಮಂತೇಗೌಡ, ಡಾ.ಸಿದ್ದಾರ್ಥಗುಂಡಾರ್ಪಿ ಇತರರಿದ್ದರು.
ಚಿತ್ರದುರ್ಗದಲ್ಲಿ ಶುಕ್ರವಾರ ಸಂಸದ ಗೋವಿಂದ ಎಂ.ಕಾರಜೋಳ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಕೆ.ಟಿ.ಕುಮಾರಸ್ವಾಮಿ, ಮೋಹನ್, ಹನುಮಂತೇಗೌಡ, ಡಾ.ಸಿದ್ದಾರ್ಥಗುಂಡಾರ್ಪಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಒಳ ಮೀಸಲಾತಿ ಜಾರಿಗೆ ಸರ್ವಪಕ್ಷ ಸಭೆ ಕರೆಯಿರಿ
  • ಹೈಕೋರ್ಟ್ಗೆ ಸಮರ್ಪಕ ದಾಖಲೆ ಸಲ್ಲಿಸಲು ಸರ್ಕಾರ ವಿಫಲ
  • ಸಂಸದ ಗೋವಿಂದ ಎಂ.ಕಾರಜೋಳ ಗಂಭೀರ ಆರೋಪ
ಚಿತ್ರದುರ್ಗ: ಮೀಸಲಾತಿ, ಒಳ ಮೀಸಲಾತಿ ಕೈ ಬಿಟ್ಟು ೫೬,೪೩೨ ಹುದ್ದೆಗಳ ಭರ್ತಿಗೆ ಮುಂದಾಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ನಡೆಯಿಂದ ಪರಿಶಿಷ್ಟ ಜಾತಿ, ಪಂಗಡಗಳಿಗೆ ಘೋರ ಅನ್ಯಾಯವಾಗಲಿದೆ ಎಂದು ಸಂಸದ ಗೋವಿಂದ ಎಂ.ಕಾರಜೋಳ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶೇ.೫೬ ಮೀಸಲಾತಿ ಮತ್ತು ಒಳಮೀಸಲಾತಿ ಹೊರಗಿಟ್ಟು ನೇಮಕಾತಿಗೆ ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮ, ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ. ಶೇ.೧೭ ಮತ್ತು ಶೇ.೭ಮೀಸಲಾತಿ ಮತ್ತು ಒಳಮೀಸಲಾತಿ ಆಶಯಕ್ಕೆ ಅನುಗುಣವಾಗಿಯೇ ನೇಮಕವಾಬೇಕು. ಇಲ್ಲವಾದಲ್ಲಿ ನೀವು ರಸ್ತೆಯಲ್ಲಿ ಓಡಾಡುವುದು ಕಷ್ಟವಾದೀತು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಎಚ್ಚರಿಸಿದರು.
ಖಜಾನೆ ದಿವಾಳಿ ಆಗಿರುವುದನ್ನು ಮುಚ್ಚಿಡಲು ಸರ್ಕಾರ ಮೀಸಲಾತಿ ಗೊಂದಲ ಸೃಷ್ಟಿಸಿದೆ. ಗೊಂದಲ ನಿವಾರಿಸಲು ಹಾಗೂ ಸುಪ್ರೀಂ ಕೋರ್ಟ್ ಆದೇಶದಂತೆ ಒಳ ಮೀಸಲು ಜಾರಿಗಾಗಿ ಎಸ್‌ಸಿ ಪಟ್ಟಿಯಲ್ಲಿರುವ ೧೦೧ ಜಾತಿಗಳ ಪ್ರಮುಖರ ಹಾಗೂ ಸರ್ವಪಕ್ಷಗಳ ಸಭೆಯ ನ್ನು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕರೆಯಬೇಕು. ಹಿಂದಿನ ಮೀಸಲಾತಿ ಪ್ರಮಾಣ ಶೇ.೧೫ ಮತ್ತು ಶೇ.೩ರ ಬದಲಿಗೆ ಒಟ್ಟಾ ರೆ ಶೇ.೨೪ರ ಪ್ರಮಾಣದಲ್ಲಿ ನೇಮಕಾತಿ ನಡೆಸಬೇಕು ಎಂದರು.
ಎಸ್.ಎA.ಕೃಷ್ಣ ನೇತೃತ್ವದ ಸರ್ಕಾರ, ಒಳ ಮೀಸಲಾತಿಗೆ ರಚಿಸಿದ್ದ ನ್ಯಾ.ಸದಾಶಿವ ಆಯೋಗದ ವರದಿ ಮೂಲೆ ಗುಂಪಾಯಿತು. ನ್ಯಾ.ನಾಗಮೋಹನ್‌ದಾಸ್ ಸಮಿತಿ ವರದಿ ಪರಿಪೂರ್ಣ ಅನುಷ್ಠಾನವಾಗಿಲ್ಲ. ಮಾಧುಸ್ವಾಮಿ ಸಮಿತಿ ಶಿಫಾರಸಿನಂತೆ ಪರಿಶಿಷ್ಟ ಜಾತಿಯ ಶೇ.೧೫ ಮೀಸಲಾತಿ ಶೇ.೧೭ಕ್ಕೆ, ಪರಿಶಿಷ್ಟ ಪಂಗಡದ ಶೇ.೩ಮೀಸಲಾತಿಯನ್ನು ಶೇ.೭ಕ್ಕೆ ಹೆಚ್ಚಿಸಿ ಬಸವರಾಜ ಬೊಮ್ಮಾಯಿ ಸರ್ಕಾರ ಆದೇಶಿಸಿತ್ತು.
ಶೇ.೫೬ಕ್ಕೆ ಏರಿದ್ದ ಮೀಸಲು ಪ್ರಮಾಣದಲ್ಲಿ ವೃತ್ತಿಪರ ಶಿಕ್ಷಣ ಪ್ರವೇಶ ಮತ್ತು ನೇಮಕಾತಿ ಸುಗಮವಾಗಿತ್ತು. ಆದರೆ ಕುತಂತ್ರದಿAದ ಈ ಆದೇಶ ಪ್ರಶ್ನಿಸಿ ಹೂಡಿದ್ದ ದಾವೆಯ ಕಡೆಗೆ ಮುತುವರ್ಜಿ ವಹಿಸದೆ ರಾಜ್ಯ ಸರ್ಕಾರ ನಿರ್ಲಕ್ಷಿಸಿದ್ದರಿಂದ ಹೈಕೋರ್ಟ್ ಭಾಗಶಃ ತಡೆಯಾಜ್ಞೆ ನೀಡಿದೆ ಎಂದು ತಿಳಿಸಿದರು.
ಬೆಳಗಾವಿ ಅಽವೇಶನದಲ್ಲಿ ಸರ್ಕಾರ ಮಂಡಿಸಿದ್ದ ಒಳ ಮೀಸಲಾತಿ ಮಸೂದೆ ಅಂಗೀಕಾರ ದಿನವೇ ಶೇ.೧೫ ಮತ್ತು ಶೇ.೩ ಮೀಸಲಾತಿ ಸಹಿತ ನೇಮಕಕ್ಕೆ ಮುಂದಾಗಿರುವ ಸರ್ಕಾರದ ಕ್ರಮ ಯಾರಿಗೂ ಒಪ್ಪಿಗೆ ಆಗಿಲ್ಲ. ಅಲೆಮಾರಿ ಸಮುದಾಯಗಳಿಗೂ ಅನ್ಯಾಯವಾಗಿದೆ ಎಂದರು.
ಸಚಿವರಾದ ಎಚ್.ಸಿ.ಮಹಾದೇವಪ್ಪ, ಆರ್.ಬಿ.ತಿಮ್ಮಾಪೂರ, ಕೆ.ಎಚ್.ಮುನಿಯಪ್ಪ ಅವರಿಗೆ ಅಂಬೇಡ್ಕರ್ ಕಲ್ಪಿಸಿರುವ ಮೀಸಲಾತಿ ಹಾಗೂ ಸಮುದಾಯದೆಡೆ ಬದ್ಧತೆ ಇದ್ದರೆ ಕೂಡಲೇ ಅವರು ರಾಜೀನಾಮೆ ಕೊಡಬೇಕು ಎಂದರು.
ಒಡೆದಾಳುವ ನೀತಿಯೊಂದಿಗೆ, ಅಹಿಂದ ಹೆಸರಲ್ಲಿ ಕಪಟ ನಾಟಕವಾಡುತ್ತಿರುವ ಸಾಮಾಜಿಕ ನ್ಯಾಯದ ವಿರೋಽ ಸಿದ್ದರಾಮಯ್ಯ ಅವರು ದÀಲಿತ ಸಮುದಾಯವನ್ನು ವಂಚಿಸುತ್ತಿದ್ದಾರೆ ಎಂದು ಹೇಳಿದರು.
ಜನಸಂಖ್ಯೆಗೆ ಅನುಗುಣವಾಗಿ ಕೊಡವಂಥ ಮೀಸಲಾತಿಗೆ ಸಾಂವಿಧಾನಿಕ ಮಾನ್ಯತೆ ಇದೆ. ಜಾರ್ಖಂಡ್, ಛತ್ತಿಸ್‌ಗಢದಲ್ಲಿ ಎಸ್‌ಸಿ, ಎಸ್‌ಟಿ ಮೀಸಲು ಪ್ರಮಾಣ ಶೇ.೫೦ಮೀರಿದ್ದರೂ ಊರ್ಜಿತವಾಗಿದೆ. ದಿವಾಳಿಯಾಗಿರುವ ಸರ್ಕಾರ ಪೌರಕಾರ್ಮಿಕರು, ಅಂಗನವಾಡಿ ಕರ‍್ಯಕರ್ತರು, ನೌಕರರ ಸಂಬಳಕ್ಕೆ ಪರದಾಡುತ್ತಿದೆ. ಪೌರ ಕಾರ್ಮಿಕರು ಕರ್ತವ್ಯದಿಂದ ವಿಮುಖರಾದರೆ ಸಿದ್ದರಾಮಯ್ಯ ವಿಧಾನಸೌಧ ದಲ್ಲಿ ಕೂರಲಾಗದು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ಮೋಹನ್, ಹನುಮಂತೇಗೌಡ, ಡಾ.ಸಿದ್ದಾರ್ಥ ಗುಂಡಾರ್ಪಿ, ಮೋಹನ್, ಮುರಳಿ, ವೆಂಕಟೇಶ್ ಯಾದವ್, ಲೋಕೇಶ್, ನಾಗರಾಜ್, ನಾಗರಾಜ್‌ಬೇದ್ರೆ, ಪರಶುರಾಮ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net