ಪತ್ರ ಬರಹಗಾರರಿಗೆ ಪ್ರತ್ಯೇಕ ಲಾಗಿನ್ ನೀಡುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾ ದಸ್ತಾವೇಜು ಬರಹಗಾರರ ಸಂಘದ ಪದಾಽಕಾರಿಗಳು, ಸದಸ್ಯರು ಚಿತ್ರದುರ್ಗದಲ್ಲಿ ಗುರುವಾರ ಅನಿರ್ದಿಷ್ಟಾವಽ ಮುಷ್ಕರ ಆರಂಭಿಸಿದರು.
ಚಿತ್ರದುರ್ಗ: ಪತ್ರ ಬರಹಗಾರರಿಗೆ ಪ್ರತ್ಯೇಕ ಲಾಗಿನ್ ನೀಡುವಂತೆ ಆಗ್ರಹಿಸಿ ಜಿಲ್ಲಾ ದಸ್ತಾವೇಜು ಬರಹಗಾರರ ಸಂಘದ ಪದಾಽಕಾ ರಿಗಳು, ಸದಸ್ಯರು ಗುರುವಾರದಿಂದ ಅನಿರ್ದಿಷ್ಟಾವಽ ಮುಷ್ಕರ ಆರಂಭಿಸಿದರು.
ರಾಜ್ಯದ ಎಲ್ಲ ಪತ್ರ ಬರಹಗಾರರಿಗೆ ಏಕ ರೀತಿಯ ಗುರುತಿನ ಚೀಟಿ ನೀಡುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.
ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ ಪರವಾನಗಿ ಪಡೆದ ಎಲ್ಲ ದಸ್ತಾವೇಜು ಬರಹಗಾರರ ಬಿಕ್ಕಲಂ ಕಡ್ಡಾಯಗೊಳಿಸಬೇಕು ಎಂದು ಕೋರಿದರು.
ಸಂಘದ ಅಧ್ಯಕ್ಷ ಎಸ್. ರುದ್ರಸ್ವಾಮಿ, ಕಾರ್ಯದರ್ಶಿ ಸಿ. ಕೆಂಚಪ್ಪ, ಉಪಾಧ್ಯಕ್ಷರಾದ ಎಸ್.ಬಿ. ಸೋಮಶೇಖರಪ್ಪ, ವಿ.ಎಸ್. ಮಲ್ಲಿಕಾರ್ಜುನಸ್ವಾಮಿ, ಸಹ ಖಜಾಂಚಿ ಪಿ.ಆರ್. ಚಂದ್ರಶೇಖರಪ್ಪ ಹಾಗೂ ಪದಾಽಕಾರಿಗಳು ಇದ್ದರು.