ಚಿತ್ರದುರ್ಗದಲ್ಲಿ ಶುಕ್ರವಾರ ಆಗ್ನೇಯ ಪದವೀಧರ ಕ್ಷೇತ್ರದ ಮತಪಟ್ಟಿ ತಯಾರಿಕೆ ಸಿದ್ಧತೆ ಪರಿಶೀಲಿಸಿ,ಅಽಕಾರಿಗಳ ಸಭೆಯಲ್ಲಿ ಚುನಾವಣಾ ಆಯೋಗದ ಕರ‍್ಯದರ್ಶಿ ಸುಮನ್‌ಕುಮಾರ್ ದಾಸ್, ಡಿಸಿ ಟಿ.ವೆಂಕಟೇಶ್, ಎಡಿಸಿ ಬಿ.ಟಿ.ಕುಮಾರಸ್ವಾಮಿ ಇತರರಿದ್ದರು.
ಚುನಾವಣಾ ಆಯೋಗದ ಕಾರ‍್ಯದರ್ಶಿ ಸುಮನ್‌ಕುಮಾರ್ ದಾಸ್ ಹೇಳಿಕೆ
ವಿಧಾನಸಭೆ, ಲೋಕಸಭೆ ಚುನಾವಣೆ
ಚುನಾವಣಾ ಆಯೋಗ
ಚಿತ್ರದುರ್ಗ:ವಿಧಾನಸಭೆ, ಲೋಕಸಭೆ ಚುನಾವಣೆಗಳಂತೆ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣÉಗಳಿಗೆ ನೋಂದಣಿ ಮಾಡಿಸಿಕೊಳ್ಳದೆ ಅರ್ಹ ಮತದಾರರು ಹೊರಗುಳಿಯುತ್ತಿದ್ದಾರೆ ಎಂದು ಚುನಾವಣಾ ಆಯೋಗದ ಕಾರ್ಯದರ್ಶಿ ಸುಮನ್ ಕು ಮಾರ್ ದಾಸ್ ಹೇಳಿದರು.
ಜಿಲ್ಲಾಽಕಾರಿ ಕಚೇರಿಯಲ್ಲಿ ಶುಕ್ರವಾರ ಆಗ್ನೇಯ ಪದವೀಧರ ಕ್ಷೇತ್ರದ ಮತಪಟ್ಟಿ ತಯಾರಿಕೆ ಸಿದ್ಧತೆ ಪರಿಶೀಲಿಸಿ, ಅಽಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಎಲ್ಲ ಅರ್ಹ ಮತದಾರರ ಹೆಸರು ನೋಂದಣಿಗೆ ಅನುಕೂಲವಾಗುವಂತೆ ಪದವಿ, ಶಿಕ್ಷಕರ ಕ್ಷೇತ್ರಗಳ ಮತದಾರರ ಪಟ್ಟಿ ತಯಾರಿಕೆ ಪ್ರಕ್ರಿಯೆ ಸುಧಾರಣೆಗೆ ಚಿಂತನೆ ನಡೆಸಲಾಗುತ್ತಿದೆ.
೨೦೧೬ರ ಸರ್ವೋಚ್ಚ ನ್ಯಾಯಲಯ ತೀರ್ಪಿನ ಅನುಸಾರ ಪ್ರತಿ ೬ ವರ್ಷ ಗಳಿಗೆ ಒಮ್ಮೆ ನಡೆಯುವ ಪದವಿ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣÉಗೆ ೧ ವರ್ಷ ಮುನ್ನವೇ ಮತದಾರರ ಪಟ್ಟಿ ತಯಾರಿಕೆಗೆ ಸಿದ್ಧತೆ ಆರಂಭವಾಗುತ್ತಿದೆ ಎಂದರು. ಈ ವೇಳೆ ಅರ್ಹರು ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಅವಕಾಶ ನೀಡಲಾಗುತ್ತಿದೆ.
ಈಗಿರುವ ನೋಂದಣಿ ನಿಯಮಗ ಳನ್ನು ಸರಳ ಹಾಗೂ ಪಾರದರ್ಶಕಗೊಳಿಸಲು ದೇಶದ ಎಲ್ಲ ಪದವಿ ಹಾಗೂ ಶಿಕ್ಷಕರ ಕ್ಷೇತ್ರದ ಸಹಾಯಕ ಚುನಾ ವಣÁಽಕಾರಿ ಗಳ ಕಚೇರಿಗಳಿಂದ ಸಲಹೆ, ಸೂಚನೆಗಳನ್ನು ಆಹ್ವಾನಿಸಲಾಗಿದೆ ಎಂದು ದಾಸ್ ತಿಳಿಸಿದರು.
ನೋಂದಣಿ ಸಂಖ್ಯೆ ಹೆಚ್ಚಳ:
೨೦೨೦ ರಲ್ಲಿ ಆಗ್ನೇಯ ಪದವೀಧರ ಕ್ಷೇತ್ರದ ಮತ ಪಟ್ಟಿಯಲ್ಲಿ ೨೧,೦೨೪ ಮತದಾರರಿದ್ದರು. ಸದ್ಯ ಸೆ.೩೦ ರಿಂದ ನ.೬ ವರೆಗೆ ನಡೆದಿರುವ ಆಗ್ನೇಯ ಪದವೀಧರ ಕ್ಷೇತ್ರದ ಮತದಾರರ ನೋಂದಣಿ ಪ್ರಕ್ರಿಯೆಯಲ್ಲಿ ೩೭,೯೭೬ ಜನರು -Áರಂ ೧೮ರಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಈ ಪೈಕಿ ೨೧೧ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಇತರ ಜಿಲ್ಲೆಗೆ ಸೇರಿದ ೫೬೭ ಅರ್ಜಿಗಳು ಸ್ವೀಕÊತವಾಗಿವೆ. ನ.೧೮ರಂದು ಕರಡು ಮತಪಟ್ಟಿ ಪ್ರಕಟ ವಾಗಿದ್ದು ೩೭,೧೯೮ಮತದಾರರು ಇದ್ದಾರೆ. ಹೆಚ್ಚಿನ ಮತದಾರರು ನೋಂದಣಿಗೆ ಶ್ರಮಿಸಿದ ಅಽಕಾರಿಗಳ ಕಾರ್ಯವನ್ನು ಶ್ಲಾಘಿಸಿದರು.
ಕಳೆದ ಸೆಪ್ಟೆಂಬರ್‌ನಲ್ಲಿ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಸಂದರ್ಭ ಗಣತಿದಾರರು ಜಿಲ್ಲೆಯ ಪ್ರತಿ ಕುಟುಂಬ ಸದಸ್ಯರ ಶೈ ಕ್ಷಣಿಕ ವಿವರ ಪಡೆಯುವಾಗ, ಪದವಿ ಪೂರೈಸಿದವರಿಗೆ ಅರಿವು ಮೂಡಿಸಿದ ಪರಿಣಾಮ, ನೋಂದಣಿ ಹೆಚ್ಚಳಕ್ಕೆ ಗುರಿ ನಿಗದಿಪಡಿಸಲಾಗಿತ್ತು. ಬಿಎಲ್‌ಒಗಳ ಮೂಲಕ ಮನೆ, ಮನೆಗೆ ತೆರಳಿ ಅರ್ಹ ಮತದಾರರ ನೋಂದಣಿಗೆ ಪ್ರೇರೇಪಿಸಲಾಯಿತು ಎಂದು ಡಿಸಿ ಟಿ.ವೆಂಕಟೇಶ್ ತಿಳಿಸಿದರು.
ಜಿಲ್ಲೆಯಲ್ಲಿ ೬ ವಿಧಾನಸಭಾ ಕ್ಷೇತ್ರಗಳಿವೆ. ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರು ಆಗ್ನೇಯ ಪದವಿಧರ ಕ್ಷೇತ್ರದ ಚುನಾವ ಣಾಽಕಾರಿಗಳಾಗಿದ್ದಾರೆ ಎಂದು ತಿಳಿಸಿದರು. ನೋಂದಣಿ ಅಽಕಾರಿಗಳ ನೇಮಕ ಮತ್ತಿತರ ಮಾಹಿತಿಗಳನ್ನು ವಿವರಿಸಿದ ಡಿಸಿ, ಮತದಾರರ ಪಟ್ಟಿ ತಯಾರಿಕೆ ಪ್ರಕ್ರಿಯೆ ಸುಧಾರಣೆಗೆ ಸಲಹೆಗಳನ್ನು ಲಿಖಿತ ರೂಪದಲ್ಲಿ ಸಲ್ಲಿಸುವುದಾಗಿ ಹೇಳಿದರು.
ಪದವೀಧರ ಮತದಾರ ನೋಂದಣಿಯಲ್ಲಿ ಸ್ವೀಕÊತ ಹಾಗೂ ತಿರಸ್ಕೃತ -Áರಂ ೧೮ ಅರ್ಜಿ ನಮೂನೆಗಳನ್ನು ದಾಸ್ ವೀಕ್ಷಿಸಿದ ರು. ನಗರದ ತಹಸೀಲ್ದಾರ್ ಕಚೇರಿಯಲ್ಲಿ ಸ್ಥಾಪಿಸಿದ್ದ ಮತದಾರ ನೋಂದಣಿ ನಿರ್ದಿಷ್ಟಾಽಕಾರಿ ಕಚೇರಿಗೆ ಅವರು ಭೇಟಿ ನೀಡಿದ ರು.
ಎಡಿಸಿ ಬಿ.ಟಿ.ಕುಮಾರಸ್ವಾಮಿ, ಆಯೋಗದ ಅಽÃನ ಕಾರ್ಯದರ್ಶಿ ಶೀಶ್‌ರಾಮ್, ಸಹಾಯಕ ನೋಂದಣಾಽಕಾರಿಗಳಾದ ಎನ್.ವೆಂಕಟೇಶ್‌ನಾಯ್ಕ್, ರೇಷ್ಮಾ ಹಾನಗಲ್, ಮೆಹಬೂಬ್ ಜಿಲಾನಿ ಖುರೇಷಿ, ಎಚ್.ಎನ್.ಚಂದ್ರಕುಮಾರ್, ಟಿ.ಸುರೇಶ್‌ಕುಮಾರ್ ಇತರರು ಇದ್ದರು.