ದೇಶದಾದ್ಯಂತ ಆರ್‌ಎಎಂಪಿ ಯೋಜನೆ ಅನುಷ್ಠಾನ

ಚಿತ್ರದುರ್ಗದಲ್ಲಿ ಸೋಮವಾರ ಆಯೋಜಿಸಿದ್ದ ಆರ್‌ಎಎಂಪಿ ಯೋಜನೆಗೆ ಜಿಲ್ಲಾ ಕೈಗಾರಿಕೆ ಕೇಂದ್ರದ ಜಂಟಿ ನಿರ್ದೇಶಕ ಬಿ.ಆನಂದ್ ಚಾಲನೆ ನೀಡಿದರು. ಜಿ.ಡಿ. ಕೆಂಚವೀರಪ್ಪ, ಶಿವಾನಂದ ಯಲಿಗಾರ್, ಬಿ.ಕೆ. ಮಂಜುನಾಥ ಸ್ವಾಮಿ ಇದ್ದರು.
ಚಿತ್ರದುರ್ಗದಲ್ಲಿ ಸೋಮವಾರ ಆಯೋಜಿಸಿದ್ದ ಆರ್‌ಎಎಂಪಿ ಯೋಜನೆಗೆ ಜಿಲ್ಲಾ ಕೈಗಾರಿಕೆ ಕೇಂದ್ರದ ಜಂಟಿ ನಿರ್ದೇಶಕ ಬಿ.ಆನಂದ್ ಚಾಲನೆ ನೀಡಿದರು. ಜಿ.ಡಿ. ಕೆಂಚವೀರಪ್ಪ, ಶಿವಾನಂದ ಯಲಿಗಾರ್, ಬಿ.ಕೆ. ಮಂಜುನಾಥ ಸ್ವಾಮಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಉದ್ಯಮಿಗಳ ತಾಂತ್ರಿಕ ಸಾಮರ್ಥ್ಯ ವೃದ್ಧಿಗೆ ಸಹಕಾರಿ
  • ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಬಿ.ಆನಂದ್ ಮಾಹಿತಿ
  • ವಿಶ್ವ ಬ್ಯಾಂಕ್
ಚಿತ್ರದುರ್ಗ: ಕೇಂದ್ರದ ನೇತೃತ್ವದಲ್ಲಿ ವಿಶ್ವ ಬ್ಯಾಂಕ್ ನೆರವಿನೊಂದಿಗೆ ದೇಶಾದ್ಯಂತ ಆರ್‌ಎಎಂಪಿ ಯೋಜನೆ (Raising and Accelerating MSME Performance) ಕಾರ್ಯಕ್ರಮ ಅನುಷ್ಠಾನಗೊಳಿಸಲಾಗಿದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಬಿ. ಆನಂದ್ ಹೇಳಿದರು.
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಟೆಕ್ಸಾಕ್, ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ಕೆಸಿಟಿಯು ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಆರ್‌ಎಎಂಪಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.
ಕೈಗಾರಿಕೋದ್ಯಮಿಗಳು ಹಾಗೂ ಭಾವಿ ಉದ್ಯಮಿಗಳ ತಾಂತ್ರಿಕ ಸಾಮರ್ಥ್ಯ ವೃದ್ಧಿಗೆ ಯೋಜನೆ ಸಹಕಾರಿಯಾಗಲಿದೆ. ತಂತ್ರಜ್ಞಾನ ಅಳವಡಿಕೆ, ಮಾರುಕಟ್ಟೆ ಪ್ರವೇಶಿಸಲು ಸಹಾಯ ಮತ್ತು ಆರ್ಥಿಕ ಸಾಕ್ಷರತೆಯಲ್ಲಿ ಮಾರ್ಗದರ್ಶನ ನೀಡಲು ಸಾಧ್ಯವಾಗಲಿದೆ. ಕೇಂದ್ರದ ಈ ಯೋಜನೆ ಸದುಪಯೊಗ ಮಾಡಿಕೊಳ್ಳಬೇಕು ಎಂದು ಕೈಗಾರಿಕೋದ್ಯಮಿಗಳಿಗೆ ಸಲಹೆ ನೀಡಿದರು.
ಕೈಗಾರಿಕೋದ್ಯಮಿಗಳ ಸಂಘದ ಜಿಲ್ಲಾಧ್ಯಕ್ಷ ಜಿ.ಡಿ. ಕೆಂಚವೀರಪ್ಪ ಮಾತನಾಡಿ, ಸರ್ಕಾರ ಕೈಗಾರಿಕೋದ್ಯಮಿಗಳ ಮತ್ತು ಭಾವಿ ಕೈಗಾರಿಕೋದ್ಯಮಿಗಳ ಕಾರ್ಯಕ್ಷಮತೆ ಸುಧಾರಿಸಲು, ಬ್ಯಾಂಕ್ ಸಾಲ ಪಡೆದು ಉದ್ಯಮ ಸ್ಥಾಪಿಸಲು ಉತ್ತೇಜಿಸುವುದು ಈ ಯೋಜನೆ ಮೂಲ ಉದ್ದೇಶವಾಗಿದೆ ಎಂದರು.
ಸಿಡಾಕ್ ಉಪ ನಿರ್ದೇಶಕ ಶಿವಾನಂದ ಯಲಿಗಾರ್, ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕ ಬಿ.ಕೆ. ಮಂಜುನಾಥಸ್ವಾಮಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net