`ಇಂಪ್ಲಾAಟ್' ಸುರಕ್ಷಿತ, ಸುಲಭ ಗರ್ಭನಿರೋಧಕ ವಿಧಾನ

ಚಿತ್ರದುರ್ಗದಲ್ಲಿ ಶುಕ್ರವಾರ ಜಿಲ್ಲೆಯ ಹೆರಿಗೆ ಮತ್ತು ಸ್ತೀ ರೋಗ ತಜ್ಞರಿಗೆ ಆಯೋಜಿಸಿದ್ದ ನೂತನ ಗರ್ಭನಿರೋಧಕ ಇಂಪ್ಲಾAಟ್ ತರಬೇತಿ ಕಾರ್ಯಕ್ರಮದಲ್ಲಿ ಡಾ. ಚಂದ್ರಿಕಾ, ಡಾ.ಎನ್.ಕಾಶಿ, ಡಾ.ಅಭಿನವ್, ಡಾ. ಪ್ರಭಾ, ಡಾ. ಮಯಾಂಕ್‌ಖೇಡ, ಡಾ. ಚಂದ್ರಶೇಖರ್ ಕಂಬಾಳಿಮಠ, ತಜ್ಞ ಡಾ. ರವಿಕುಮಾರ್, ಡಾ. ಮಲ್ಲಪ್ಪ, ಬಿ. ಮೂಗಪ್ಪ, ಡಾ.ರೇಖಾ, ಸರಸ್ವತಿ, ಭವ್ಯಾ ಇತರರು ಇದ್ದರು.
ಚಿತ್ರದುರ್ಗದಲ್ಲಿ ಶುಕ್ರವಾರ ಜಿಲ್ಲೆಯ ಹೆರಿಗೆ ಮತ್ತು ಸ್ತೀ ರೋಗ ತಜ್ಞರಿಗೆ ಆಯೋಜಿಸಿದ್ದ ನೂತನ ಗರ್ಭನಿರೋಧಕ ಇಂಪ್ಲಾAಟ್ ತರಬೇತಿ ಕಾರ್ಯಕ್ರಮದಲ್ಲಿ ಡಾ. ಚಂದ್ರಿಕಾ, ಡಾ.ಎನ್.ಕಾಶಿ, ಡಾ.ಅಭಿನವ್, ಡಾ. ಪ್ರಭಾ, ಡಾ. ಮಯಾಂಕ್‌ಖೇಡ, ಡಾ. ಚಂದ್ರಶೇಖರ್ ಕಂಬಾಳಿಮಠ, ತಜ್ಞ ಡಾ. ರವಿಕುಮಾರ್, ಡಾ. ಮಲ್ಲಪ್ಪ, ಬಿ. ಮೂಗಪ್ಪ, ಡಾ.ರೇಖಾ, ಸರಸ್ವತಿ, ಭವ್ಯಾ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಾ. ಚಂದ್ರಿಕಾ ಮಾಹಿತಿ
  • ಹೆರಿಗೆ ಮತ್ತು ಸಿöÃ ರೋಗ ತಜ್ಞರಿಗೆ ತರಬೇತಿ ಕಾರ್ಯಾಗಾರ
  • ಚಿತ್ರದುರ್ಗದಲ್ಲಿ ಈ ಸೌಲಭ್ಯ ಜಾರಿ
ಚಿತ್ರದುರ್ಗ: ಗರ್ಭನಿರೋಧಕ ಇಂಪ್ಲಾAಟ್ ಒಂದು ಆಧುನಿಕ ಸುರಕ್ಷಿತ ಮತ್ತು ಸುಲಭ ವಿಧಾನವೆಂದು ಆರೋಗ್ಯ ಇಲಾಖೆ ಕುಟುಂಬ ಕಲ್ಯಾಣ ವಿಭಾಗದ ಉಪ ನಿರ್ದೇಶಕಿ ಡಾ. ಚಂದ್ರಿಕಾ ಹೇಳಿದರು.
ಜಿಲ್ಲಾಸ್ಪತ್ರೆಯ ಬಿ.ಸಿ.ರಾಯ್ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲೆಯ ಹೆರಿಗೆ ಮತ್ತು ಸಿöÃ ರೋಗ ತಜ್ಞರಿಗೆ ಆಯೋಜಿಸಿದ್ದ ನೂತನ ಗರ್ಭನಿರೋಧಕ ಇಂಪ್ಲಾAಟ್ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾರತದಲ್ಲಿ ಕರ್ನಾಟಕ ಸೇರಿದಂತೆ ೨೦೨೩ರಿಂದಲೇ ಈ ಯೋಜನೆ ಜಾರಿಯಾಗಿದೆ. ಮೊದಲ ಹಂತದಲ್ಲಿ ರಾಜ್ಯದ ೧೩ ಜಿಲ್ಲೆ ಗ ಳಲ್ಲಿ ಪ್ರಾರಂಭಿಸಲಾಗಿದ್ದು,ಇದೀಗ ೧೪ನೇ ಜಿಲ್ಲೆಯಾಗಿ ಚಿತ್ರದುರ್ಗದಲ್ಲಿ ಈ ಸೌಲಭ್ಯವನ್ನು ಜಾರಿಗೊಳಿಸಲಾಗಿದೆ. ಕರ್ನಾಟಕದ ಲ್ಲಿ ಇದುವರೆಗೆ ೧೦ ಸಾವಿರಕ್ಕೂ ಹೆಚ್ಚು ಮಂದಿ ಇಂಪ್ಲಾAಟ್ ಸೌಲಭ್ಯ ಪಡೆದುಕೊಂಡಿದ್ದಾರೆ ಎಂದರು.
ಇಂಪ್ಲಾAಟ್ ಒಮ್ಮೆ ಅಳವಡಿಸಿಕೊಂಡರೆ ೩ ವರ್ಷಗಳವರೆಗೆ ಅನಗತ್ಯ ಗರ್ಭಧಾರಣೆಯಿಂದ ರಕ್ಷಣೆ ನೀಡುತ್ತದೆ. ಒಂದು ಮಗುವಿ ನಿಂದ ಮತ್ತೊಂದು ಮಗುವಿಗೆ ಅಂತರ ಕಾಪಾಡಲು ಇದು ಅತ್ಯಂತ ಪರಿಣಾಮಕಾರಿಯಾಗಿದೆ. ಜಿಲ್ಲಾಸ್ಪತ್ರೆ ಹಾಗೂ ತಾಲೂಕು ಆ ಸ್ಪತ್ರೆಗಳಲ್ಲಿ ನುರಿತ ಹೆರಿಗೆ ಮತ್ತು ಸಿöÃ ರೋಗ ತಜ್ಞರು ಅರ್ಹರಿಗೆ ಸಂಪೂರ್ಣ ಉಚಿತವಾಗಿ ಇಂಪ್ಲಾAಟ್ ಅಳವಡಿಸಲಿದ್ದಾರೆ ಎಂದರು.
ಡಿಎಚ್‌ಒ ಡಾ.ಎನ್.ಕಾಶಿ ಮಾತನಾಡಿ, ಈ ಹಿಂದೆ ಗರ್ಭಧಾರಣÉ ತಡೆಯಲು ಮಹಿಳೆಯರು ಹಾರ್ಮೋನ್ ಮಾತ್ರೆಗಳನ್ನು ತೆಗೆ ದುಕೊಳ್ಳಬೇಕಿತ್ತು. ಮಾತ್ರೆ ತೆಗೆದುಕೊಳ್ಳುವುದನ್ನು ಮರೆತು ಗರ್ಭ ಧರಿಸುವ ಸಾಧ್ಯತೆಗಳಿರುತ್ತಿದ್ದವು. ಆದರೆ, ಈ ಇಂಪ್ಲಾAಟ್ ವಿಧಾನದಲ್ಲಿ ಅಂಥ ಗೊಂದಲಗಳಿರುವುದಿಲ್ಲ. ಇಂಪ್ಲಾAಟ್ ಅಳವಡಿಸಿಕೊಂಡ ದಿನವೇ ಮಹಿಳೆಯರು ತಮ್ಮ ದೈನಂದಿನ ಕೆಲಸ ಕಾರ್ಯಗಳನ್ನು ಎಂದಿನAತೆ ಮಾಡಬಹುದಾಗಿದೆ ಎಂದರು.
ಆರ್‌ಸಿಎಚ್ ಅಽಕಾರಿ ಡಾ. ಅಭಿನವ್ ಮಾತನಾಡಿ, ಜಿಲ್ಲಾಸ್ಪತ್ರೆಯಲ್ಲಿ ನೂತನ ಗರ್ಭನಿರೋಧಕ ವಿಧಾನ ಲಭ್ಯವಿದ್ದು, ಯಾವುದೇ ತಪ್ಪು ತಿಳಿವಳಿಕೆ ಹಾಗೂ ವದಂತಿಗಳಿಗೆ ಕಿವಿಗೊಡದೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಇದೇ ಸಂ ದರ್ಭದಲ್ಲಿ ೬ ಮಂದಿಗೆ ಇಂಪ್ಲಾAಟ್ ಅಳವಡಿಸಲಾಯಿತು.
ತುಮಕೂರು ಜಿಲ್ಲಾ ಕುಟುಂಬ ಕಲ್ಯಾಣಾಽಕಾರಿ ಡಾ.ಪ್ರಭಾ, ಡಬ್ಲ್ಯೂಎಚ್‌ಒ ಪ್ರೋಗ್ರಾಂ ಆಫೀಸರ್ ಡಾ. ಮಯಾಂಕ್‌ಖೇಡ, ಜಿಲ್ಲಾ ಸರ್ವೇಕ್ಷಣಾಽಕಾರಿ ಡಾ. ಚಂದ್ರಶೇಖರ್ ಕಂಬಾಳಿಮಠ, ಜಿಲ್ಲಾಸ್ಪತ್ರೆ ಸಿöÃ ರೋಗ ತಜ್ಞ ಡಾ. ರವಿಕುಮಾರ್, ಡಾ. ಮಲ್ಲಪ್ಪ, ತಾ ಲೂಕು ಆರೋಗ್ಯ ಶಿಕ್ಷಣಾಽಕಾರಿ ಬಿ. ಮೂಗಪ್ಪ, ಕ್ವಾಲಿಟಿ ಕನ್ಸಲ್ಟೆಂಟ್ ಡಾ.ರೇಖಾ, ಶುಶ್ರೂಷಾಽಕಾರಿ ಸರಸ್ವತಿ, ಪ್ರೋಗ್ರಾಂ ಅಸಿಸ್ಟೆಂಟ್ ಭವ್ಯಾ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net