ಚಿತ್ರದುರ್ಗದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಏರ್ಪಡಿಸಿದ್ದ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಡಾ.ಬಸವಕುಮಾರ ಸ್ವಾಮೀಜಿ, ಚಂದ್ರಶೇಖರ ನಾದೂರು, ಡಾ.ಶಾಂತರಾಜು, ಕೆ.ಎಂ.ಶಿವಸ್ವಾಮಿ, ಡಾ.ಬೈರಮಂಗಲ ರಾಮೇಗೌಡ, ಡಾ.ಎಲ್.ಈಶ್ವರಪ್ಪ ಇತರರು ಇದ್ದರು.
ಚಿತ್ರದುರ್ಗ: ಸಂತೋಷ, ಆತಂಕ ಸಹಿತ ಬದುಕಿನಲ್ಲಿ ಅನುಭವಗಳೆಲ್ಲವುಗಳಿಂದ ರೂಪುಗೊಳ್ಳುವ ಸಾಹಿತ್ಯಕ್ಕೆ ಜಗತ್ತನ್ನು ಆಳುವ ಶಕ್ತಿ ಇದೆ ಎಂದು ಮುರುಘಾಮಠದ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ ಹೇಳಿದರು.
ನಗರದ ಎಸ್‌ಜೆಎಂ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಅಲ್ಲಮಪ್ರಭು ಸಂಶೋಧನಾ ಕೇಂದ್ರ ಹಾಗೂ ಬೆಂಗಳೂರು ಬಿಎಂಶ್ರೀ ಪ್ರತಿಷ್ಠಾನ ಆಶ್ರಯದಲ್ಲಿ ಎಸ್‌ಜೆಎಂ ದಂತ ಮಹಾವಿದ್ಯಾಲಯದಲ್ಲಿ ಶುಕ್ರವಾರ ಕನ್ನಡ ರಾಜ್ಯೋತ್ಸವದ ಅಂಗವಾಗಿ ಏರ್ಪಡಿಸಿದ್ದ `ಕನ್ನಡ ನಾಡು ನುಡಿ ನಮ್ಮ ಹೆಮ್ಮೆ' ರಾಜ್ಯಮಟ್ಟದ ಒಂದು ದಿನದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ ದರು.
ಸಾಹಿತ್ಯದ ಅಭಿರುಚಿ ಎಲ್ಲರಲ್ಲಿರಬೇಕು. ಕತೆ, ಕಾದಂಬರಿ, ಕವನ ಮೊದಲಾದ ಸಾಹಿತ್ಯ ನಾನಾ ಪ್ರಕಾರಗಳ ಓದು ನಮ್ಮ ಬದುಕಿ ನಲ್ಲಿ ಸಕಾರಾತ್ಮಕ ಪ್ರಭಾವ ಬೀರುತ್ತವೆ ಎಂದರು. ಕಸಾಪ ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ ಮಾತನಾಡಿ, ಕನ್ನಡ ಭಾಷೆಗೆ ಅತ್ಯಂತ ಶ್ರೇಷ್ಠ ಹಿನ್ನೆಲೆ ಇದೆ.
ಕನ್ನಡ ಅಕ್ಷರಗಳ ಬಳಕೆಯಲ್ಲಿ ವ್ಯತ್ಯಾಸವಾದರೆ ಬೇರೆ ಅರ್ಥ ಕೊಡುತ್ತದೆ. ಸರಿಯಾದ ಪದ ಪ್ರಯೋಗದ ಅಗತ್ಯವಿದೆ. ಇಂಗ್ಲಿಷ್ ಮೇಲಿನ ಅವಲಂಬನೆ ಕಡಿಮೆ ಮಾಡಿಕೊಳ್ಳಲು ಎಲ್ಲ ಹಂತಗಳಲ್ಲೂ ಪ್ರಜ್ಞಾಪೂರ್ವಕವಾಗಿ ಕನ್ನಡ ಬಳಸಬೇಕಿದೆ ಎಂದು ತಿಳಿಸಿ ದರು.
ಕನ್ನಡ ನುಡಿ ವಿಷಯದ ಕುರಿತು ಮಾತನಾಡಿದ ಬೆಂಗಳೂರು ವಿಜಯ ಸಂಜೆ ಪದವಿ ಕಾಲೇಜು ನಿವೃತ್ತ ಪ್ರಾಚಾರ್ಯ ಚಂದ್ರಶೇ ಖರ್ ನಾದೂರು ಅವರು, ಹುಟ್ಟಿನಿಂದಲೂ ಪ್ರತಿರೋಧ ಎದುರಿಸುತ್ತಲೇ ಕನ್ನಡ ತನ್ನ ಅಸ್ಮಿತೆ, ಅಸ್ತಿತ್ವವನ್ನು ಉಳಿಸಿಕೊಂಡು ಬ ರುತ್ತಿದೆ.
ಇಂಗ್ಲಿಷ್ ಜಾಗತೀಕರಣದ, ಅನ್ನದ ಭಾಷೆಯಾಗುತ್ತಿರುವುದರಿಂದ ಪ್ರಾದೇಶಿಕ ಭಾಷೆಗಳನ್ನು ಕಳೆದುಕೊಳ್ಳುತ್ತಿz್ದೆÃವೆ. ಉದ್ಯೋ ಗ, ವ್ಯಾಪಾರ ಸೇರಿ ಹಲವು ಕ್ಷೇತ್ರಗಳಲ್ಲಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯವನ್ನು ರಾಜ್ಯಸರ್ಕಾರ ಸರಿಪಡಿಸಬೇಕಿದೆ ಎಂದರು.
ಬೆAಗಳೂರು ವಿಜಯ ಸಂಜೆ ಪದವಿ ಕಾಲೇಜು ಪ್ರಾಧ್ಯಾಪಕ ಡಾ.ಶಾಂತರಾಜು ಅವರು ಕನ್ನಡ ಭಾಷೆ ಕುರಿತು ಮಾತನಾಡಿ, ಬಹಳ ವಿಶಿಷ್ಟ ಸಂಸ್ಕೃತಿಯನ್ನು ಹೊಂದಿರುವ ಕನ್ನಡ ನಾಡು, ಸ್ವಾಭಿಮಾನದ ಸಂಕೇತವಾಗಿದೆ ಎಂದರು.
ಸಮಾರೋಪದಲ್ಲಿ ಬಿಎಂಶ್ರೀ ಪ್ರತಿಷ್ಠಾನದ ಅಧ್ಯಕ್ಷ ಡಾ.ಬೈರಮಂಗಲ ರಾಮೇಗೌಡ ಮಾತನಾಡಿ, ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯನ್ನು ಜನರಿಗೆ ತಲುಪಿಸುವ ಕಾರ್ಯದಲ್ಲಿ ಬಿಎಂಶ್ರೀ ಪ್ರತಿಷ್ಠಾನ ನಿರತವಾಗಿದೆ. ಕನ್ನಡ ಅಭಿಮಾನ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಪ್ರಯತ್ನಿಸಬೇಕು.
ಕನ್ನಡ ಪರ ನಿಲುವು, ಕಾನೂನುಗಳನ್ನು ತೆಗೆದುಕೊಳ್ಳಬೇಕು. ಶಿP್ಷÀಣದಲ್ಲಿ ಕನ್ನಡ ಆದ್ಯತೆ ಸಿಗಬೇಕಿದೆ. ರಾಷ್ಟçದಲ್ಲಿ ಹಿಂದಿ ಏಕೈಕ ಭಾಷೆಯಾಗಬೇಕೆಂಬ ಹುನ್ನಾರ ನಡೆದಿದ್ದು, ಕನ್ನಡಕ್ಕೆ ಎದುರಾಗುವ ಸಂಕಷ್ಟಗಳನ್ನು ಎದುರಿಸುವ ಸಂಕಲ್ಪ ಮಾಡಬೇಕಿದೆ ಎಂದರು.
ಎಸ್‌ಜೆಎA ಕಾಲೇಜು ಪ್ರಾಚಾರ್ಯ ಡಾ.ಎಲ್.ಈಶ್ವರಪ್ಪ, ಐಕ್ಯೂಎಸಿ ಎಂ.ಎಸ್.ಪರಮೇಶ್ವರ್, ವೆಂಕಟೇಶ್ವರ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಡಾ.ಎ.ಜೆ.ಶಿವಕುಮಾರ್, ಅಲ್ಲಮ ಪ್ರಭು ಸಂಶೋಧನಾ ಕೇಂದ್ರದ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಸಿ.ಟಿ.ಜಯಣ್ಣ ಇದ್ದರು.
ಕಾರ್ಯಕ್ರಮದ ಸಂಯೋಜಕ ಡಾ.ರಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಯೋಗೇಶ್ವರಿ ಸ್ವಾಗತಿಸಿ, ಸಮೀನಾ ವಂದಿಸಿದರು. ಪ್ರಿಯಾಂಕ, ಜಯಲಕ್ಷಿ÷್ಮ, ರೇಖಾ ಮತ್ತು ಸರಸ್ವತಿ ನಿರೂಪಿಸಿದರು.