ಚಿತ್ರದುರ್ಗ : ಎರಡ್ಮೂರು ದಶಕಗಳ ಕಾಲ ಕಷ್ಟಪಟ್ಟು ಬೆಳೆಸಿರುವ ಮರಗಳನ್ನು ಕಡಿದು, ಅಲ್ಲಿ ಕಟ್ಟಡಗಳನ್ನು ನಿರ್ಮಿಸಲು ಅಽಕಾರಿಗಳು ಉದ್ಧಟತನ ತೋರಿದರೆ ಒಂದು ಇಟ್ಟಿಗೆಯನ್ನೂ ಇಡಲು ಬಿಡುವುದಿಲ್ಲ ಎಂದು ಎಂಎಲ್ಸಿ ಕೆ.ಎಸ್. ನವೀನ್ ಎಚ್ಚರಿಸಿದರು.
ಸರ್ಕಾರಿ ವಿe್ಞÁನ ಕಾಲೇಜು ಹಾಗೂ ತೋಟಗಾರಿಕೆ ಇಲಾಖೆ ಆವರಣದಲ್ಲಿನ ಮರ-ಗಿಡಗಳನ್ನು ರಕ್ಷಿಸುವಂತೆ ಪರಿಸರ ಕಾರ್ಯಕರ್ತರು ಹಾಗೂ ವಿವಿಧ ಸಂಘಟನೆಗಳು ಸೋಮವಾರ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದರು.
ವಿಜ್ಞಾನ ಕಾಲೇಜು ಆವರಣದಲ್ಲಿನ ೨೦೦ಕ್ಕೂ ಹೆಚ್ಚು, ತೋಟಗಾರಿಕೆ ಇಲಾಖೆ ವ್ಯಾಪ್ತಿಯ ೨ ಸಾವಿರಕ್ಕೂ ಅಽಕ ಮರ-ಗಿಡಗಳ ಮಾರಣ ಹೋಮ ನಡೆಸಿ, ಕ್ರಮವಾಗಿ ಮಹಿಳಾ ಕಾಲೇಜು ಹಾಗೂ ಜಿ¯್ಲÁಽಕಾರಿ ಕಚೇರಿ ನಿರ್ಮಿಸಲು ತೀರ್ಮಾನಿಸಿದ್ದು, ಮರ ಕಡಿಯುವ ಕಾರ್ಯಕ್ಕೆ ಯಾರಾದರೂ ಅಡ್ಡಿಪಡಿಸಿದರೆ ಪ್ರಕರಣ ದಾಖಲಿಸುವಂತೆ ಶಿಕ್ಷಣ ಇಲಾಖೆ ಆದೇಶಿಸಿದೆ. ಅಽಕಾರಿಗಳ ಹಠಮಾರಿ ಧೋರಣೆ ಏಕೆ ಎಂದು ಪ್ರಶ್ನಿಸಿದರು.
ಪರಿಸರ ನಾಶಪಡಿಸುವ ಬದಲು ವಿ. ಶೇಪ್‌ನಲ್ಲಿ ನಿರ್ಮಿಸಿ ಸ್ಟೇಡಿಯಂಗೆ ಹೋಗುವ ರಸ್ತೆಯ ಮೂಲೆಯಲ್ಲಿ ಮಹಿಳಾ ಕಾಲೇಜು, ಅದೇ ರೀತಿ ತೋಟಗಾರಿಕೆ ಇಲಾಖೆ ಪಕ್ಕದ ಹಳೆಯ ಕ್ವಾಟ್ರಸ್‌ಗಳನ್ನು ತೆರವುಗೊಳಿಸಿ ಪಕ್ಕದ ವಿಶಾಲ ಜಾಗದಲ್ಲೇ ನೂತನ ಡಿಸಿ ಕಚೇರಿ ನಿರ್ಮಿಸಬಹುದು. ಈ ಕುರಿತು ಗಮನ ಹರಿಸಲಿ ಎಂದು ಆಗ್ರಹಿಸಿದರು.
ಜಿ¯್ಲೆಯಲ್ಲಿ ಶೇ. ೩೩ರಷ್ಟು ಅರಣ್ಯ ಪ್ರದೇಶ ಇರಬೇಕು. ಆದರೆ, ಶೇ.೧೦ ರಷ್ಟು ಮಾತ್ರ ಇದೆ. ಇಂತಹ ಬರಪೀಡಿತ ಪ್ರದೇಶದಲ್ಲಿ ಇರುವ ಗಿಡ-ಮರಗಳನ್ನು ಕಡಿದರೆ ವಾತಾವರಣದಲ್ಲಿ ಏರುಪೇರಾಗಿ ತಾಪಮಾನ ಹೆಚ್ಚಿ ಸಕಲ ಜೀವರಾಶಿಗಳಿಗೂ ತೊಂದರೆಯಾಗುತ್ತದೆ ಎಂಬುದನ್ನು ಅಽಕಾರಿಗಳು ಗಮನದಲ್ಲಿಟ್ಟುಕೊಳ್ಳಬೇಕು. ಇಲ್ಲದಿದ್ದರೆ, ಹೋರಾಟ ತೀವ್ರಗೊಳ್ಳಲಿದೆ ಎಂದು ಎಚ್ಚರಿಸಿದರು.