ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸುವೆ

 ಚಿತ್ರದುರ್ಗದಲ್ಲಿ ಬುಧವಾರ ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಅವರ ಜನ್ಮದಿನಾಚರಣೆ ಅಂಗವಾಗಿ ಬೃಹತ್ ಸಂಖ್ಯೆಯಲ್ಲಿದ್ದ ಅಭಿಮಾನಿಗಳು ಶುಭ ಕೋರಿ ಸನ್ಮಾನಿಸಿದರು. ಪಿ. ರಘು, ಬಿ. ಕಾಂತರಾಜ್, ಅರುಣ್‌ಕುಮಾರ್, ದರ್ಶನ್, ಅಂಜಿನಪ್ಪ, ಡಿ. ಗೋಪಾಲಸ್ವಾಮಿ ನಾಯಕ ಇತರರಿದ್ದರು.
ಚಿತ್ರದುರ್ಗದಲ್ಲಿ ಬುಧವಾರ ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಅವರ ಜನ್ಮದಿನಾಚರಣೆ ಅಂಗವಾಗಿ ಬೃಹತ್ ಸಂಖ್ಯೆಯಲ್ಲಿದ್ದ ಅಭಿಮಾನಿಗಳು ಶುಭ ಕೋರಿ ಸನ್ಮಾನಿಸಿದರು. ಪಿ. ರಘು, ಬಿ. ಕಾಂತರಾಜ್, ಅರುಣ್‌ಕುಮಾರ್, ದರ್ಶನ್, ಅಂಜಿನಪ್ಪ, ಡಿ. ಗೋಪಾಲಸ್ವಾಮಿ ನಾಯಕ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಭದ್ರಾ ಮೇಲ್ದಂಡೆಯಡಿ ಗೋನೂರಿಗೆ ಶೀಘ್ರದಲ್ಲೇ ನೀರು
  • ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಭರವಸೆ
  • ಸನ್ಮಾನ ಕಾರ್ಯಕ್ರಮ
ಚಿತ್ರದುರ್ಗ : ಜಿ¯್ಲೆಯ ಎಲ್ಲ ಶಾಸಕರೊಟ್ಟಿಗೆ ಪಕ್ಷಾತೀತವಾಗಿ ಜತೆಗೂಡಿ ಬಯಲುಸೀಮೆ ಚಿತ್ರದುರ್ಗ ಜಿ¯್ಲÉಯ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಭರವಸೆ ನೀಡಿದರು.
ಪ್ರವಾಸಿ ಮಂದಿರದಲ್ಲಿ ಬುಧವಾರ ಶಾಸಕರ ೬೪ನೇ ಜನ್ಮದಿನದ ಅಂಗವಾಗಿ ಅಭಿಮಾನಿಗಳು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಮೂರು ಬಾರಿ ಶಾಸಕನಾಗಿ ಚಳ್ಳಕೆರೆ ಅಭಿವೃದ್ಧಿಗೆ ಶ್ರಮವಹಿಸಿ ಕೆಲಸ ಮಾಡುತ್ತಿದ್ದೇನೆ. ಇನ್ನಷ್ಟು ಪ್ರಗತಿ ಸಾಽಸಬೇಕಿದೆ. ಮಾಜಿ ಸಚಿವ ಎಚ್.ಆಂಜನೇಯ ಅವರು ನಮಗೆ ಶಕ್ತಿಯಿದ್ದಂತೆ ಎಂದರು.
ಭದ್ರಾ ಮೇಲ್ದಂಡೆ ಯೋಜನೆಯಿಂದ ಜಿ¯್ಲÉಗೆ ನೀರು ಹರಿಯುವ ಕಾಲ ಸನ್ನಿಹಿತವಾಗಿದೆ. ಒಟ್ಟಾರೆ ೨೩ ಸಾವಿರ ಕೋಟಿ ರೂ. ಯೋಜನೆಗೆ ಈಗಾಗಲೇ ೧೧ ಸಾವಿರ ಕೋಟಿ ರೂ. ಸರ್ಕಾರದಿಂದ ಖರ್ಚಾಗಿದೆ. ಶೀಘ್ರದಲ್ಲೇ ಗೋನೂರುವರೆಗೂ ನೀರು ಹರಿಸಲಾಗುವುದು.
ಮುಂದೆ ಚಳ್ಳಕೆರೆ, ಪಾವಗಡ, ಮೊಳಕಾಲ್ಮೂರಿಗೂ ನೀರು ಹರಿಸಬೇಕೆಂಬ ಮಹದಾಸೆ ಹೊಂದಿದ್ದೇವೆ. ಈ ಸಂಬAಧ ಜಲ ಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಅವರೊಂದಿಗೆ ಚರ್ಚಿಸಿದ್ದೇನೆ ಎಂದು ತಿಳಿಸಿದರು.
ಜಿ¯್ಲÉ, ಜಾತಿವಾರು ಹಾಗೂ ನನ್ನ ಅಭಿವೃದ್ಧಿ ಕಾರ್ಯಗಳನ್ನು ಪರಿಗಣಿಸಿ ನೂತನ ಸಿಎಂ ಡಿ.ಕೆ. ಶಿವಕುಮಾರ್ ಅವರ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ಸಿಗಬಹುದೆಂಬ ನಂಬಿಕೆಯಿದೆ. ಜಿ¯್ಲÉಯ ಜನರ ಹಾಗೂ ರೈತರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತೇನೆಂದು ಆಶ್ವಾಸನೆ ನೀಡಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಇತ್ತೀಚೆಗೆ ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ರೈತರಿಗೆ ಸರ್ಕಾರದಿಂದ ಏನೆಲ್ಲ ನೆರವು ಕೊಡಿಸಬಹುದೋ ಅದಕ್ಕೆ ಬದ್ಧನಾಗಿ ಕಾರ್ಯ ನಿರ್ವಹಿಸುತ್ತೇನೆ ಎಂದರು.
ಸ-Áಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಪಿ. ರಘು ಮಾತನಾಡಿ, ಶಾಸಕ ಟಿ. ರಘುಮೂರ್ತಿ ಚಳ್ಳಕೆರೆಯ ಭಗೀರಥ ಎಂದರೆ ತಪ್ಪಾಗಲಾರದು. ಚಳ್ಳಕೆರೆಯಲ್ಲಿ ವಿಶಾಲ ರಸ್ತೆಗಳಾಗಿವೆ. ಇಂಜಿನಿಯರಿAಗ್ ಕಾಲೇಜು ಸೇರಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ ಎಂದು ಹೇಳಿದರು.
ನಗರಸಭೆ ಮಾಜಿ ಅಧ್ಯಕ್ಷ ಬಿ. ಕಾಂತರಾಜ್ ಮಾತನಾಡಿ, ಅಭಿವೃದ್ಧಿಯ ಹರಿಕಾರ ಟಿ. ರಘುಮೂರ್ತಿ ಅವರಿಗೆ ಇನ್ನೂ ಹೆಚ್ಚಿನ ಅಽಕಾರ ಸಿಗುವಂತಾಗಲಿ ಎಂದರು.
ಉದ್ಯಮಿ ಅರುಣ್‌ಕುಮಾರ್, ಮುಖಂಡರಾದ ರವಿಕುಮಾರ್, ಬಾಬುರೆಡ್ಡಿ, ಬಿ.ಪಿ. ಪ್ರಕಾಶ್‌ಮೂರ್ತಿ, ಸಿ.ಟಿ. ರಾಜೇಶ್,ನಸರು ಲ್ಲಾ, ಎಂ.ಕೆ. ತಾಜ್‌ಪೀರ್, ದರ್ಶನ್, ದಿನೇಶ್ ಗೌಡಗೆರೆ, ಅಂಜಿನಪ್ಪ, ಡಿ. ಗೋಪಾಲಸ್ವಾಮಿ ನಾಯಕ, ಬಸ್ತಿಹಳ್ಳಿ ಜಿ. ಸುರೇಶ್‌ ಬಾಬು, ಹಂಪಯ್ಯನಮಾಳಿಗೆ ಧನಂಜಯ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಹುಣಸೆಕಟ್ಟೆ ಕಾಂತರಾಜ್, ಟಿಪ್ಪು ಖಾಸಿಂ ಆಲಿ, ಶಬ್ಬೀರ್‌ ಬಾಷಾ, ಕಾಟಿಹಳ್ಳಿ ಕರಿಯಣ್ಣ, ಮರುಳಾರಾಧ್ಯ, ಪತ್ರಿಕಾ ವಿತರಕರ ಸಂಘದ ಪ್ರಮುಖರು, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪದಾಽಕಾರಿಗಳು, ಅಽಕಾರಿಗಳು, ಬೃಹತ್ ಸಂಖ್ಯೆಯಲ್ಲಿ ಅಭಿಮಾನಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net