ಹೂಗುಚ್ಛ ಬೇಡ ನೋಟ್‌ಬುಕ್ ಕೊಡಿ

ಡಿಸಿ ಎಸ್.ರಮ್ಯಾ
ಡಿಸಿ ಎಸ್.ರಮ್ಯಾ
Published on

ಪ್ರಮುಖ ಮುಖ್ಯಾಂಶಗಳು

  • ಡಿಸಿ ಎಸ್.ರಮ್ಯಾ ಮನವಿ
  • ಕಲಿಕೆಗೆ ಉಡುಗೊರೆ
  • ನೋಟ್‌ಬುಕ್
ಚಿತ್ರದುರ್ಗ: ತಮ್ಮನ್ನು ಭೇಟಿಯಾಗುವ ಸಂದರ್ಭದಲ್ಲಿ ಹೂಗುಚ್ಛ, ಶಾಲು ಅಥವಾ ಹಾರಗಳನ್ನು ಕೊಡುವ ಬದಲಾಗಿ ನೋಟ್ ಬುಕ್, ಪೆನ್‌ಗಳನ್ನು ಕೊಡಿ ಎಂದು ಡಿಸಿ ಎಸ್.ರಮ್ಯಾ ಅವರು ಮನವಿ ಮಾಡಿದ್ದಾರೆ.
ಸೌಜನ್ಯದ ಭೇಟಿ ವೇಳೆ ಗಣ್ಯರು, ಸಂಘ-ಸAಸ್ಥೆಗಳ ಪ್ರತಿನಿಽಗಳು ಹಾಗೂ ಸಾರ್ವಜನಿಕರು ಹೂಗುಚ್ಛ ನೀಡುವ ಸಂಪ್ರದಾಯ ಬೆಳೆದಿದೆ.
ಹೂಗುಚ್ಛಗಳು ಅಲ್ಪಕಾಲಿಕವಾಗಿದ್ದು, ಪುನರ್ ಬಳಕೆಗೆ ಯೋಗ್ಯವಾಗಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಕಲಿಕೆಗೆ ಉಡುಗೊರೆ ಎಂಬ ಸದು ದ್ದೇಶದಿಂದ ಈ ಹೊಸ ತೀರ್ಮಾನ ಕೈಗೊಳ್ಳಲಾಗಿದೆ.
ಹೂಗುಚ್ಛದ ಬದಲು ಸಂಗ್ರಹವಾಗುವ ನೋಟ್‌ಬುಕ್ ಹಾಗೂ ಬರವಣಿಗೆ ಉಪಕರಣಗಳನ್ನು ಸರ್ಕಾರಿ ಶಾಲೆಗಳ ಮತ್ತು ಆರ್ಥಿಕವಾಗಿ ಹಿಂದುಳಿದ ಬಡ ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡಲಾಗುತ್ತದೆ.
ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ಮತ್ತು ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಜಿಲ್ಲಾಽಕಾರಿ ಅಭಿಪ್ರಾಯಪಟ್ಟಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net